ಕಾರ್ಕಳ: ಉನ್ನತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಜಗೋಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ 4ನೇ ವಾರ್ಷಿಕ ಹರುಷ ನಡೆಯಿತು.
ಮುಟ್ಲುಪಾಡಿ ಪ್ರೀತಮ್ ಶೆಟ್ಟಿ ಸ್ಮರಣಾರ್ಥವಾಗಿ, ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರ್ಕಳ ತಾಲೂಕಿನ 44 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರೂ.1,08,000 ವಿದ್ಯಾರ್ಥಿ ವೇತನವನ್ನು 22 ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನವಾಗಿ ವಿತರಿಸಲಾಯಿತು. ‘ಅಯ್ಯೋ ಶ್ರದ್ಧಾ’ ಖ್ಯಾತಿಯ ಮೋಸ್ಟ್ ಕ್ರಿಯೇಟಿವ್ ಕಂಟೆಂಟ್ ಕ್ರಿಯೇಟರ್ (ಫೀಮೇಲ್) ಪ್ರಶಸ್ತಿ ವಿಜೇತೆ ಶೃದ್ಧಾ ಜೈನ್, ಭಾರತೀಯ ಸೇನೆಯ ನಿವೃತ್ತ CRPF ಯೋಧ ಚಾಕೋ ಕೆ.ಜೆ ಹಾಗೂ ತಮ್ಮಯ್ಯ ಶೆಟ್ಟಿ, ಬಜಗೋಳಿ ನಿವೃತ್ತ ಶಿಕ್ಷಕ ವಿಜಯ ಕುಮಾರ್, ರಾಷ್ಟ್ರಮಟ್ಟದ ಶಾಟ್ ಪುಟ್ ಕ್ರೀಡಾಪಟು ವಿಸ್ಮಿತಾ ಬಜಗೋಳಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಶ್ರದ್ಧಾ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸರಕಾರಿ ಶಾಲೆಗಳು ಮೌಲ್ಯಯುತ ಶಿಕ್ಷಣದ ಜೊತೆಗೆ ಜೀವನ ಪಾಠವನ್ನು ಕಲಿಸುತ್ತವೆ. ಹೀಗಾಗಿ ಈ ಶಾಲೆಗಳ ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾರೆ,” ಎಂದರು.
ಹಳೆ ವಿದ್ಯಾರ್ಥಿಗಳಾದ ಮೇಲೆ ತಾವು ಕಲಿತ ಶಿಕ್ಷಣ ಸಂಸ್ಥೆಗಳಿಗೆ ನೆರವಾಗುವ ಅಗತ್ಯವಿದೆ ಎಂದು ಕರೆ ನೀಡಿದರು.
ಉನ್ನತಿ ತಂಡದ ಯುವ ಸದಸ್ಯರು ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಮನೋಭಾವನೆ ಮೆರೆದಿದ್ದು, ಈ ಕಾರ್ಯಕ್ರಮವು ಯುವ ಪ್ರತಿಭೆಗಳ ಬೆಂಬಲದ ದೃಷ್ಟಿಕೋನವನ್ನು ಪ್ರತಿಬಿಂಬಿಸಿದೆ. 4ನೇ ವಾರ್ಷಿಕ ಸಂಭ್ರಮಾಚಾರಣೆಯ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಸಮುದಾಯದ ಮೆಚ್ಚುಗೆಗೆ ಪಾತ್ರವಾಯಿತು.
ಶ್ರುತಿ .ಡಿ.ಅತಿಕಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿಗಳಾದ ಚಿರಾಗ್ ಯು ರಾವ್, sdmc ಅಧ್ಯಕ್ಷರಾದ ದೀಪಕ್ ಅತಿಕಾರಿ, C. A ನಿತೇಶ್ ಶೆಟ್ಟಿ ಮುಟ್ಲುಪಾಡಿ, ರಾಕೇಶ್ ಶೆಟ್ಟಿ ಕುಕ್ಕುಂದೂರು, ಮುಡಾರು ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್, ಶಾಲೆಯ ಮುಖ್ಯೋಪಧ್ಯಾಯರಾದ ಶೋಭಾ ಶೆಟ್ಟಿ ಉಪಸ್ಥಿತರಿದ್ದರು.