Share this news

ಉಡುಪಿ, ಆ.16:ಕಟಪಾಡಿ ಪಡುಕುತ್ಯಾರು ಸರಸ್ವತಿ ಪೀಠ ಮಹಾಸಂಸ್ಥಾನದಲ್ಲಿ ಚಾತುರ್ಮಾಸ್ಯ ವೃತಾಚರಣೆ ನಿರತ ಪರಮಪೂಜ್ಯ ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳನ್ನು ಶಾಸಕ ವಿ. ಸುನಿಲ್ ಕುಮಾರ್ ಶನಿವಾರ ಭೇಟಿಯಾಗಿ ಆಶಿರ್ವಾದ ಪಡೆದರು.

ಶಾಸಕರನ್ನು ಆಶಿರ್ವದಿಸಿದ ಶ್ರೀಗಳು ಶಾಸಕ. ವಿ. ಸುನಿಲ್ ಕುಮಾರ್ ಅವರ ಯೋಜನೆ, ಯೋಚನೆಗಳು ಸಾಕಾರವಾಗಲಿ, ಅಭಿವೃದ್ದಿ ಕಾರ್ಯಗಳು ಸಮೃದ್ಧಗೊಂಡು
ಶಕ್ತಿ, ಯುಕ್ತಿಯ ಅನುಗ್ರಹ ಭಗವಂತ ನೀಡಲಿ ಎಂದು ಹಾರೈಸಿದರು.
ಆಶಿರ್ವಚನದಲ್ಲಿ ಶ್ರೀಗಳು ನೋವನ್ನು ಇನ್ನೊಬ್ಬರಿಗೆ ಪ್ರಯೋಗಿಸಬಾರದು. ಕೋಪ, ತಾಪವ ಬಿಟ್ಟು ಇನ್ನೊಬ್ಬರ ನಿಂದಿಸದೆ ಬಾಳಬೇಕು. ಮೊದಲು ತಮ್ಮ ತಪ್ಪನ್ನು ತಾನು ಕಂಡುಕೊಳ್ಳಬೇಕು. ತಾನು ಪರಿವರ್ತನೆ ಆಗಿ ಪರಿವರ್ತಿಸುವ ಗುಣವುಳ್ಳವರಾಗಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಳಿಕಾಂಬ ನೆಕ್ಲಾಜೆ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್ಯ, ಹರ್ಷವರ್ಧನ್ ನಿಟ್ಟೆ, ಧನುಶ್ ಆಚಾರ್ಯ, ರಾಜೇಶ್ ಆಚಾರ್ಯ, ಸತೀಶ್ ಆಚಾರ್ಯ, ಪ್ರದೀಪ್ ಆಚಾರ್ಯ, ಶ್ರೀಧರ ಆಚಾರ್ಯ, ಜಯಾನಂದ್ ಆಚಾರ್ಯ, ಪ್ರವೀಣ್ ಆಚಾರ್ಯ, ಸಂದೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *