
ನವದೆಹಲಿ,ಮೇ.22:ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ, ಜೆನ್ Z ಯುವ ಪೀಳಿಗೆಯನ್ನು ಸದ್ದಿಲ್ಲದೆ ಆಕರ್ಷಿಸುತ್ತಿದೆ. ಆದರೆ, ಈ ಪಕ್ಷಕ್ಕೆ ಸೇರಲು ಕಳುಹಿಸಲಾಗುವ ವಾಟ್ಸ್ಆ್ಯಪ್ ಲಿಂಕ್ಗಳ ಮೂಲಕ ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡದಂತೆ ಸೂಚಿಸಿದೆ.
ಕಾಂಗ್ರೆಸ್, ಬಿಜೆಪಿ ಎಲ್ಲಾ ಇನ್ಸ್ಟಾಗ್ರಾಮ್ ಫಾಲೋವರ್ಸ್ ಅನ್ನೂ ಮೀರಿ ಕಾಕ್ರೋಚ್ ಜನತಾ ಪಾರ್ಟಿ 2 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದೆ. ಸುಶಿಕ್ಷಿತರು ಎನ್ನಿಸಿಕೊಂಡಿರುವ ಜನರೇ ಇವರ ಮೋಸಕ್ಕೆ ಬಲಿಯಾಗಿ ಲಕ್ಷ ಲಕ್ಷ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು, ಮಾಧ್ಯಮಗಳಲ್ಲಿ ಎಷ್ಟೇ ಎಚ್ಚರಿಕೆ ಬಂದರೂ, ತಮಗೆ ಆಮಿಷ ತೋರಿ ಬಂದಿರುವ ಲಿಂಕ್ ನೋಡಿದ ತಕ್ಷಣ ಎಲ್ಲಾ ಎಚ್ಚರಿಕೆಯೂ ಮರೆತು ಹೋಗಿ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡಿರುವವರೇ ಲಕ್ಷ ಲಕ್ಷ ಮಂದಿ ಇದ್ದಾರೆ. ಹೀಗೆ ಕಳೆದುಕೊಂಡ ದುಡ್ಡು ಸಿಗುವುದು ಕೂಡ ಅತ್ಯಂತ ವಿರಳ. ಏಕೆಂದರೆ ಸೈಬರ್ ಕ್ರಿಮಿನಲ್ಸ್ ನೆಟ್ವರ್ಕ್ ಅಷ್ಟೊಂದು ಸ್ಟ್ರಾಂಗ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಇದರ ಹವಾ ನೋಡಿದವರು ಪಕ್ಷವನ್ನು ಸೇರಲು ಉತ್ಸುಕರಾಗಿರುತ್ತಾರೆ. ಕಾಕ್ರೋಚ್ ಜನತಾ ಪಕ್ಷಕ್ಕೆ ನೀವೂ ಜಾಯಿನ್ ಆಗಿ ಎಂದು ನಿಮ್ಮ ವಾಟ್ಸ್ಆ್ಯಪ್ಗೆ ಲಿಂಕ್ ಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಇದರ ಹವಾ ನೋಡಿ ನೀವೂ ಭಾರತವನ್ನು ಬದಲಾಯಿಸಿಯೇ ಬಿಡೋಣ, ನಾನೂ ಈ ಪಕ್ಷವನ್ನು ಜಾಯಿನ್ ಆಗೋಣ ಎಂದು ಹಿಂದೆ ಮುಂದೆ ನೋಡದೇ ಲಿಂಕ್ ಕ್ಲಿಕ್ ಮಾಡಿದರೆ ನಿಮಗೆ ಅರಿವೇ ಇಲ್ಲದೇ, ನಿಮ್ಮ ಅಕೌಂಟ್ ಹ್ಯಾಕ್ ಆಗಿರುತ್ತದೆ. ಬ್ಯಾಂಕ್ ಲೂಟಿಯಾಗಿರುತ್ತದೆ. ಆದ್ದರಿಂದ ಯುವಜನತೆ ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
