
ಕಾರ್ಕಳ, ಜೂ. 02: ಮಾಳ ಗುರುಕುಲ ಅನುದಾನಿತ ಹಿ.ಪ್ರಾ ಶಾಲೆಯ ಬಾಲವಿಹಾರದ UKG ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮವು ಜೂ.01 ರಂದು ನಡೆಯಿತು.
ಮಕ್ಕಳಿಗೆ ಶಾಲು ಹೂ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಶಾಲಾ ಸಂಚಾಲಕರಾದ ಸುಧಾಕರ ಡೋಂಗ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಯವರಾದ ಗೀತಾ ಶೇರಿಗಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಹಾಗೂ ಶಿಕ್ಷಕ ರಕ್ಷಕ ಸಂಘದ ಕೋಶಾಧಿಕಾರಿ ಆಗಿರುವ ರವೀಂದ್ರ ನಾಥ ಜೋಶಿ ಮತ್ತು ದಿನೇಶ್ BSNL ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೋಭಾ ಸ್ವಾಗತಿಸಿ, ವಸಂತಿ ವಂದನಾರ್ಪಣೆಗೈದರು.ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.



.
.
.
.
.
.
.
.
.
.
.
.
.
.
.
.
.
.
.
.
