- ಕಾರ್ಕಳ: ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಮೂಲಕ ಆನ್ ಲೈನ್ ಟ್ರೇಡಿಂಗ್ ಮಾಡಿ ಲಾಭ ಗಳಿಸಬಹುದು ಎಂದು ನಂಬಿಸಿದ ಪರಿಣಾಮ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ವ್ಯಕ್ತಿಯೊಬ್ಬರು ಬರೋಬ್ಬರಿ 9.42 ಲಕ್ಷ ಹಣ ಕಳೆದುಕೊಂಡಿದ್ದಾರೆ
ಕಳೆದ ಫೆಬ್ರವರಿ20 ರಂದು ಹೂಡಿಕೆ ವಿಚಾರದಲ್ಲಿ ಜೆರಾಲ್ಡ್ ಅವರಿಗೆ ಮೊಬೈಲ್ ಮೂಲಕ ಬಂದ ಲಿಂಕ್ ನಂಬಿ ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ, ಇದೀಗ ಎರಡು ತಿಂಗಳಾದರೂ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ಹಣ ವಾಪಾಸು ಬರದೇ ಇದ್ದಾಗ ಹಣ ಕಳೆದುಕೊಂಡ ಜೆರಾಲ್ಡ್ ನೊರೋನ್ಹಾ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿಗಳು 7037959206 ನೇ ನಂಬ್ರದಿಂದ ವಾಟ್ಸ್ಆ್ಯಪ್ ಮೂಲಕ ಜೆರಾಲ್ಡ್ ಮೊಬೈಲಿಗೆ ಲಿಂಕ್ ಕಳುಹಿಸಿದ್ದು, ಈ ಲಿಂಕ್‌ನ್ನು ಜೆರಾಲ್ಡ್ ಕ್ಲಿಕ್ ಮಾಡಿದಾಗ Stock Vangaurd G4 ಎಂಬ ವಾಟ್ಸ್ಆ್ಯಪ್ ತೆರೆದುಕೊಂಡಿದ್ದು, ಇದರಲ್ಲಿ ಹಣ ಹೂಡಿಕೆಯ ತರಬೇತಿ ಮತ್ತು ಹಣ ಹೂಡಿಕೆಯ ಬಗ್ಗೆ ಮಾಹಿತಿ ತಿಳಿಸಿದ್ದು ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಬಳಿಕ ಟ್ರೇಡಿಂಗ್ ಆ್ಯಪ್‌ನ ಲಿಂಕ್ ಕಳುಹಿಸಿದ್ದು, ಇದನ್ನು ನಂಬಿದ ಜೆರಾಲ್ಡ್ ನೊರೋನ್ಹಾ ಅವರು ಲಿಂಕ್‌ನಿಂದ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಏ 5 ರಿಂದ ಏ. 20 ರ ತನಕ ಹಂತ ಹಂತವಾಗಿ ಒಟ್ಟು ರೂಪಾಯಿ 9,42,000/- ಹಣವನ್ನು ಪಾವತಿಸಿದ್ದರು. ಆದರೆ ಜೆರಾಲ್ಡ್ ಅವರಿಗೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ಪಂಗನಾಮ ಹಾಕಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ