
ಕಾರ್ಕಳ, ಏ.1: : ಹಾವೇರಿ ಮೂಲದ ಕಾರ್ಮಿಕನೋರ್ವ ಬಾಡಿಗೆ ಮನೆಯ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹಾವೇರಿ ಹಾನಗಲ್ ತಾಲೂಕಿನ ಕಲ್ಲಾಪುರ ಗ್ರಾಮದ ವೆಂಕಟೇಶ್ ಕೂರಗುಂದ (45ವ) ಮೃತಪಟ್ಟವರು. ಅವರು ಕಳೆದ 35 ವರ್ಷಗಳಿಂದ ಬೆಳ್ಮಣ್ ನ ಉದಯ ನಾಯ್ಕ್ ಎಂಬವರ ಟಿಪ್ಪರದ ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಬೆಳ್ಮಣ್ ಚರ್ಚ್ ಬಳಿಯ ಫೆಡ್ರಿಕ್ ನೋವೆಲ್ ಅರಾನ್ಹಾ ಎಂಬವರ ಬಾಡಿಗೆ ವಾಸವಿದ್ದರು. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಔಷಧಿ ತೆಗೆದುಕೊಂಡು ಬಂದಿದ್ದು, ಮಾ.31 ರಂದು ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವೆಂಕಟೇಶ್ ಅವರ ಸಾವಿನಲ್ಲಿ ಅನುಮಾನವಿರುವುದಾಗಿ ಅವರ ತಮ್ಮಚಂದ್ರಪ್ಪ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.















.
.
.
.
.
.
.
.
.
.
