
ಬೆಂಗಳೂರು,ನ.14 : ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ NDA ಭರ್ಜರಿ ಮುನ್ನಡೆ ಸಾಧಿಸಿದ್ದು, ಬಹುತೇಕ NDA ಅಧಿಕಾರಕ್ಕೆ ಏರುವುದು ಸ್ಪಷ್ಟವಾಗಿದೆ.
ಆದರೆ ಬಿಹಾರದ ಚುನಾವಣೆಯಲ್ಲಿ NDA ಮುನ್ನಡೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬಿಹಾರದಲ್ಲಿ ಕೂಡ ಮತಗಳ್ಳತನ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಬೆಂಗಳೂರಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಹಾರದಲ್ಲಿಯೂ ವೋಟ್ ಚೋರಿ ಆಗಿದೆ. ಆದರೆ ಜನ ನೀಡಿರುವ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು. ಯಾಕೆ ಹಿನ್ನಡೆ ಆಗಿದೆ ಗೊತ್ತಿಲ್ಲ, ನಾನು ಇನ್ನೂ ನೋಡಿಲ್ಲ, ಸರಿಯಾಗಿ ಮಾಹಿತಿ ಪಡೆದು ಮತ್ತೆ ಮಾತಾಡುತ್ತೇನೆ. ಯಾಕೆ ಜನ ವೋಟ್ ಹಾಕಿಲ್ಲ, NDA ಯಾಕೆ ಇಷ್ಟು ದೊಡ್ಡ ಬಹುಮತದಲ್ಲಿದೆ ಎನ್ನೋದು ಗೊತ್ತಿಲ್ಲ ಎಂದರು.

