ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚಿಸುವ ಬದಲು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದು ಉತ್ತಮ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಲಹೆ ನೀಡಿದ್ದಾರೆ.
ಈ ಹಿಂದೆ ಎರಡು ಅವಧಿಗೆ ಬಿಜೆಪಿ ಇತರೆ ಪಕ್ಷಗಳ ಜತೆ ಮೈತ್ರಿಯಲ್ಲಿತ್ತು.ಬಿಜೆಪಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಬಿಜೆಪಿಗೆ ಇದರಿಂದ ಯಾವುದೇ ಲಾಭವಾಗಿಲ್ಲ ಆದ್ದರಿಂದ ಸಮಿಶ್ರ ಸರ್ಕಾರ ರಚಿಸಲು ಬದಲು ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು ಉತ್ತಮ ಎಂದಿದ್ದಾರೆ.
ಮಾತ್ರವಲ್ಲದೇ ಬಿಜೆಪಿ ಬಹುಮತದ 272 ಸಂಖ್ಯೆ ದಾಟಲು ವಿಫಲವಾದ ಕಾರಣ ಪ್ರಧಾನಿ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಬರೆದಿದ್ದಾರೆ.