Share this news

ಕಾರ್ಕಳ: ಕಾಂಗ್ರೆಸ್ಸಿನ ಅಪಪ್ರಚಾರ, ಗ್ಯಾರಂಟಿ ಯೋಜನೆಗಳ ಪೊಳ್ಳು ಆಶ್ವಾಸನೆಯ ಹೊರತಾಗಿಯೂ ಹರಿಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಾರ್ಟಿಯು ಹ್ಯಾಟ್ರಿಕ್ ಗೆಲುವು ಸಾಧಿಸಿ ಚುನಾವಣೋತ್ತರ ಸಮೀಕ್ಷೆಯನ್ನು ಬುಡಮೇಲು ಮಾಡಿದ ಜನತೆ ಭಾರತೀಯ ಜನತಾ ಪಾರ್ಟಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿರಿಸಿ ಸ್ಪಷ್ಟ ಬಹುಮತದ ಗೆಲುವಿನ ಹಾರ ತೊಡಿಸಿದ್ದಾರೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಹೇಳಿದ್ದಾರೆ.

ಈ ಹಿಂದೆ ಕೇಂದ್ರದ ನೂತನ ಕೃಷಿ ಕಾನೂನಿನ ವಿರುದ್ಧ ನಡೆದ ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ, ಬಿಜೆಪಿ ನಾಯಕರುಗಳ ವಿರುದ್ಧದ ಅಪಪ್ರಚಾರಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಲ್ಲದೆ ಜನತೆ ಕಾಂಗ್ರೆಸ್ಸಿನೊAದಿಗೆ ಇರಲಿಲ್ಲ ಎನ್ನುವುದು ಫಲಿತಾಂಶದಿAದ ಸಾಬೀತಾಗಿದೆ. ಗ್ಯಾರಂಟಿಗಳ ಆಸೆ ತೋರಿಸಿ ಅಧಿಕಾರ ಹಿಡಿಯುವ ಕನಸ್ಸು ಕಾಣುತಿದ್ದ ಕಾಂಗ್ರೆಸ್ ಗೆ ವಿಪಕ್ಷದ ಸ್ಥಾನವನ್ನೇ ಖಾಯಂಗೊಳಿಸಿದ್ದಾರೆ. ಹರಿಯಾಣದ ಈ ಫಲಿತಾಂಶ ಮುಂಬರುವ ಮಹಾರಾಷ್ಟ್ರದ ವಿಧಾನಸಭೆಯ ಚುನಾವಣೆಗೆ ಮುನ್ನುಡಿಯಾಗಲಿದೆ ಮಾತ್ರವಲ್ಲದೆ ರಾಜ್ಯದ ಕಾಂಗ್ರೆಸ್ಸ್ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ ಎಂದ ಅವರು ಈ ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿಯವರಿಗೆ ಮತ್ತು ಹರಿಯಾಣ ಬಿಜೆಪಿಗೆ ಕಾರ್ಕಳ ಬಿಜೆಪಿಯ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *