ಉಡುಪಿ: ಕಳೆದ ಎರಡು ಮೂರು ದಿನಗಳಿಂದ ಮರಾಠಿ ಸಮುದಾಯದ ಮುಖಂಡ ಉಮೇಶ್ ನಾಯ್ಕ್ ಸೂಡ ಅವರು ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ವಾಟ್ಸಾಪ್ ಸಂದೇಶಗಳು ಹರಿದಾಡಿದ ಬಗ್ಗೆ ಕೆಲವು ದಲಿತ ಸಂಘಟನೆಗಳ ನಾಯಕರು ಮರಾಠಿ ಸಮುದಾಯವನ್ನು ಗುರಿಯಾಗಿಸಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಉಮೇಶ್ ನಾಯ್ಕ ಸೂಡರವರ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ನಮ್ಮ ಸಂಘಟನೆಗಳ ಅಥವಾ ಸಮುದಾಯದ ಹೇಳಿಕೆಯಾಗಿರುವುದಿಲ್ಲ. ನಮ್ಮ ಸಮುದಾಯವು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅತೀವ ಗೌರವ ಸಲ್ಲಿಸಿಕೊಂಡು ಬಂದಿರುತ್ತದೆ ಉಮೇಶ್ ನಾಯ್ಕ್ ಸೂಡ ಅವರು ನೀಡಿದ ಹೇಳಿಕೆಗೆ ಸಂಘವು ವಿಷದ ವ್ಯಕ್ತಪಡಿಸುತ್ತದೆ ಆದರೆ ಅದೇ ವಿಚಾರವಾಗಿ ನಮ್ಮ ಇಡೀ ಮರಾಠಿ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದು ಉಡುಪಿ ಜಿಲ್ಲಾ ಮರಾಠಿ ಸಮಾಜದ ಸೇವಾ ಸಂಘವು ತಿಳಿಸಿದೆ.
ಮರಾಠಿ ಸಮುದಾಯಕ್ಕೆ ಸವಿಂದಾನದಡಿಯಲ್ಲಿ ದೊರಕಿರುವ ಮೀಸಲಾತಿ ನಮ್ಮ ಮೂಲಭೂತ ಹಕ್ಕು ಹೊರತು ಅದು ಭಿಕ್ಷೆಯಲ್ಲ ನಮ್ಮ ಸಮುದಾಯ ಸರಕಾರದಿಂದ ದೊರಕಿರುವ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಒಂದು ಸಮಯದಲ್ಲಿ ತೀರಾ ಹಿಂದುಳಿದ ಸಮುದಾಯವು ಈಗ ಸಮಾಜದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು, ಕೇವಲ 03 ಶೇಕಡಾ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಮರಾಠಿ ಸಮುದಾಯವು ಸಮಾಜದ ಎಲ್ಲಾ ರಂಗಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಹೊಂದಿರುತ್ತದೆ. ಅದೇ ರೀತಿ ಪರಿಶಿಷ್ಟ ಜಾತಿಗೆ 15 ಶೇಕಡಾ ರಷ್ಟಿರುವ ಸೌಲಭ್ಯವನ್ನು ಪಡೆದು ಅಭಿವೃದ್ಧಿ ಹೊಂದಲು ಅವಕಾಶ ದೊರಕಿರುತ್ತದೆ. ಇದನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯವರು ಕೂಡ ಅಭಿವೃದ್ಧಿ ಹೊಂದಲಿ. ಮರಾಠಿ ಸಮುದಾಯವು ನೂರಾರು ವರ್ಷಗಳಿಂದ ದುರ್ಗಾದೇವಿ ಆರಾಧನೆ ಮಾಡಿಕೊಂಡಿದ್ದು, ಇದರ ಜತೆಗೆ ಗದ್ದಿಗೆ ಅಮ್ಮನ ಆರಾಧನೆಯ ಜತೆಗೆ ನಮ್ಮ ಹಿರಿಯರು ಹಾಕಿಕೊಟ್ಟ ಧಾರ್ಮಿಕತೆಯ ಪರಂಪರೆಯಲ್ಲಿ ಹಾದಿಯಲ್ಲಿ ಸಾಗುತ್ತಿದ್ದೇವೆ. ನಮ್ಮ ಸಮುದಾಯವು ಆಸ್ತಿಕ ಸಮುದಾಯವಾಗಿದ್ದು ಶ್ರೀದೇವಿಯ ಆರಾಧಕರಾಗಿ ಯಾವುದೇ ಸಮುದಾಯದ ಜಾತಿಯನ್ನು ದೂಷಿಸುವುದು ನಮ್ಮ ಸಂಸ್ಕೃತಿಯಲ್ಲ. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸಾಕಷ್ಟು ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದು ಅದರಲ್ಲಿ ಮರಾಠಿ ಸಮುದಾಯವು ಒಂದಾಗಿದೆ ನಮ್ಮ ಮರಾಠಿ ಸಮುದಾಯದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಾಂಸ್ಕೃತಿಕ ಹಾಗೂ ಜೀವನ ಪದ್ಧತಿಯನ್ನು ಒಳಗೊಂಡ ವಿಚಾರಗಳನ್ನು ಪರಿಶೀಲನೆಗೆ ಇದು ಗುಡ್ಡಗಾಡುಗಳ ತಪ್ಪಲಲ್ಲಿ ವಾಸಿಸಿಕೊಂಡಿದ್ದ ಕೃಷಿ ಹಾಗೂ ಕೃಷಿ ಕೂಲಿ ಆಧಾರಿತ ಬುಡಕಟ್ಟು ಸಮುದಾಯವನ್ನು ಸರಕಾರವು ಗಿರಿಜನರೆಂದು ಗುರುತಿಸಿ ಮೀಸಲಾತಿ ಸೌಲಭ್ಯ ನೀಡಿದೆಯೇ ಹೊರತು ಅಕ್ರಮವಾಗಿ ಅಥವಾ ಇನ್ನೊಬ್ಬರಿಂದ ಕಸಿದುಕೊಂಡ ಸೌಲಭ್ಯ ಅಲ್ಲ ಎನ್ನುವುದನ್ನು ಪರಿಶಿಷ್ಟ ಜಾತಿಯ ನಾಯಕರುಗಳು ಅರಿತುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ