Share this news

ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವAತ ರಾಮೇಶ್ವರಂ ಕಫೆಯಲ್ಲಿ ಭೀಕರ  ಬಾಂಬ್  ಸ್ಪೋಟ ಉಂಟಾಗಿದೆ. ಈ ಸ್ಪೋಟದಲ್ಲಿ ಒಂದೇ ಕಂಪನಿಯ ನೌಕರರು ಎನ್ನಲಾದ ಐವರು ಸಹೋದ್ಯೋಗಿಗಳು ಸೇರಿ 9  ಜನರಿಗೆ ಗಾಯಗೊಂಡಿದ್ದಾರೆ.

ಬೆAಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕಫೆಗೆ, ಮಧ್ಯಾಹ್ನದ ಊಟಕ್ಕಾಗಿ ಮೈಕ್ರೋ ಚಿಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಐವರು ಸಹೋದ್ಯೋಗಿಗಳು ತೆರಳಿದ್ದರು. ಈ ವೇಳೆಯಲ್ಲಿ ಸಂಭವಿಸಿದAತ ಭೀಕರ ಸ್ಪೋಟಕದಲ್ಲಿ ಐವರು ಸಹೋದ್ಯೋಗಿಗಳು ಗಾಯಗೊಂಡಿರೋದಾಗಿ ಹೇಳಲಾಗುತ್ತಿದೆ.
ಒಟ್ಟಿಗೆ ಊಟ ಮಾಡೋದಕ್ಕಾಗಿ ಕುಳಿತಿದ್ದ ಸಂದರ್ಭದಲ್ಲಿ ಕೌಂಟರ್ ಬಳಿಯೇ ಏಕಾಎಕಿ ಈ ಸ್ಪೋಟ ಸಂಭವಿಸಿದ ಕಾರಣ, ಮೈಕ್ರೋ ಚಿಪ್ ಕಂಪನಿಯ ಉದ್ಯೋಗಿಗಳು ಗಾಯಗೊಂಡಿದ್ದಾರೆ.
ಈ ಪೈಕಿ ಬ್ರೂಕ್ ಫೀಲ್ಡ್ ಆಸ್ಪತ್ರೆಯ ತುರ್ತು ನಿಗಾ ಘಟದಲ್ಲಿ ಸ್ವರ್ಣ ನಾರಾಯಣಪ್ಪ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಫಾರುಕ್ ಹುಸೇನ್, ದೀಪಾಂಶು ಅವರನ್ನು ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಿಬ್ಬರು ವೈದೇಹಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇ ಘಟನೆಯ ಕುರಿತು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದು, ಇಂತಹ ಘಟನೆ ಈ ಹಿಂದೆ ನಡೆದಿರಿಲ್ಲ, ಈ ಕುರಿತು ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆಯುವುದಾಗಿ ಹೇಳಿದ್ದಾರೆ.

             

Leave a Reply

Your email address will not be published. Required fields are marked *