ಕಾರ್ಕಳ: ತುಳುನಾಡಿನ ಪ್ರಸಿದ್ಧ ಪುಣ್ಯ ಹಾಗೂ ಪುರಾತನ, ಆಲಡೆ ಕ್ಷೇತ್ರಗಳಲ್ಲಿ ಒಂದಾಗಿರುವ ಕಣಂಜಾರು ಚತುರ್ಮುಖ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಸಂಪೂರ್ಣ ಶಿಲಾಮಯ ಹಾಗೂ ತಾಮ್ರಭೂಷಿತ ಗರ್ಭಗುಡಿಗಳಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ವೀರಭದ್ರ ದೇವರುಗಳ ಪುನ: ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಎ. 28 ರಂದು ಪ್ರಾರಂಭವಾಗಿದ್ದು ಮೇ 8ರ ವರೆಗೆ ನಡೆಯಲಿದೆ.
ಬ್ರಹ್ಮಲಿಂಗೇಶ್ವರ ಹಾಗೂ ಪರಿವಾರ ವೀರಭದ್ರ ದೇವರ ಬಿಂಬಗಳ ಪುನ: ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶ್ರೀಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.
ಬ್ರಹ್ಮಶ್ರೀ ಷಡಂಗ ಬಿ. ಲಕ್ಮೀನಾರಾಯಣ ತಂತ್ರಿ, ಬ್ರಹ್ಮಶ್ರೀ ಷಡಂಗ ಬಿ.ಗುರುರಾಜ್ ತಂತ್ರಿ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗುರುರಾಜ್ ಮಂಜಿತ್ತಾಯ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಎ. 28ರಂದು ಋತ್ವಿಜರ ಸ್ವಾಗತ, ಗೈಹ ಪ್ರತಿಗ್ರಹ, ದೇವತಾ ಪ್ರಾರ್ಥನೆ, ಪುಣ್ಯಾಹವಾಚನ – ದೇವನಾಂದಿ, ಕಂಕಣಬಂಧನ, ತೋರಣ ಸ್ಥಾಪನೆ,ಉಗ್ರಾಣ ಮೂಹೂರ್ತ, ಅರಣಿ ಮಥುನ – ಅಗ್ನಿಜನನ- ಆದ್ಯಗಣಯಾಗ, ಬ್ರಹ್ಮಕೂರ್ಚಹೋಮ. ಅನ್ನಸಂತರ್ಪಣೆ. ಹೊರೆ ಕಾಣಿಕೆ ಮೆರೆವಣಿಗೆ, ಸಪ್ತಶುದ್ಧಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ, ಪ್ರಾಕಾರ ಬಲಿ,ದ್ವಾರಲಕ್ಮೀ ಪೂಜೆ ನಡೆಯಿತು.
ಎ. 29ರಂದು ಪೂರ್ವ ನವಗ್ರಹ ಹೋಮ, 108 ಕಾಯಿ ಗಣಪತಿಯಾಗ, ಮೂಲ ಬ್ರಹ್ಮಸ್ಥಾನದಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ – ಪರಿವಾರ ಪೂಜೆ, ಚತುರ್ವೇದ ಮತ್ತು ಭಾಗವತ ಪಾರಾಯಣ ಆರಂಭ, ಅನ್ನಸಂತರ್ಪಣೆ. ಅಘೋರ ಹೋಮ, ಸುದರ್ಶನ ಹೋಮ, ನಾಗಬನದಲ್ಲಿ ವಾಸ್ತು ಪ್ರಕ್ರಿಯೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೋನ್ಸೆ ವಿಜಯಕುಮಾರ್ ಶೆಟ್ಟಿಯವರ ಸಾರಥ್ಯದ ಕಲಾಜಗತ್ತು ಮುಂಬಯಿ ತಂಡದಿಂದ ” ಈ ಬಾಲೆ ನಮ್ಮವು” ನಾಟಕ ಪ್ರದರ್ಶನಗೊಡಿತು.
ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಕ್ರಮ್ ಹೆಗ್ಡೆ, ಪ್ರಧಾನ ಅರ್ಚಕ ಗುರುರಾಜ ಮಂಜಿತ್ತಾಯ, ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ, ದಾನಿಗಳಾದ ಬಿ.ಎನ್ ಪೂಜಾರಿ, ಗೊವಿಂದೂರು ವೆಂಕಪ್ಪ ಹೆಗ್ಡೆ, ಉದಯ ಶೆಟ್ಟಿ ಪೆಲತ್ತೂರು, ಸುಧೀರ್ ಶೆಟ್ಟಿ ಕೊಳಕೆ ಬೈಲು, ಪ್ರದೀಪ್ ಶೆಟ್ಟಿ ಕೊಳಕೆ ಬೈಲು, ಪ್ರವೀಣ ಶೆಟ್ಟಿ ಕೊಳಕೆಬೈಲು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಮಾಗಣೆ ಮುಖ್ಯಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಎ.30ರಂದು ಬೆಳಗ್ಗೆ 8ರಿಂದ ಕ್ಷಾಲನಾದಿ ಬಿಂಬ ಶುದ್ಧಿ ಪ್ರಕ್ರಿಯೆ, ಸಂಹಾರ ತತ್ತ್ವ ಹೋಮ, ಸಾಮಾನ್ಯ ಶಾಂತಿ, ಪ್ರಾಯಶ್ಚಿತ್ತ ಹೋಮಗಳು.ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 5ರಿಂದ ನಾಗಬಿಂಬಾಧಿವಾಸ,ಪ್ರತಿಷ್ಠಾಧಿವಾಸ ಹೋಮ ನಾಗದೇವರಿಗೆ ಪಂಚವಿಂಶತಿ ಕಲಶಾಧಿವಾಸ, ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ವೀರಭದ್ರ ದೇವರ ಶಯ್ಯಾಧಿವಾಸ, ಅಧಿವಾಸ ಹೋಮಗಳು, ಶಕ್ತಿ ದಂಡಕ ಮಂಡಲ ಪೂಜೆ, ಅಷ್ಟಾವದಾನ ಸೇವೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ 7 ರಿಂದ ವಿಜಯ್ ಶೆಟ್ಟಿ ಮೂಡುಬೆಳ್ಳೆ ( ಮುಂಬಯಿ) ಇವರಿಂದ ಭಕ್ತಿ ಸಂಗೀತ ನಡೆಯಲಿದೆ.
ಮೇ 1 ರಂದು ಬೆಳಗ್ಗೆ 7.30 ರಿಂದ ನಾಗಶಿಲಾ ಪ್ರತಿಷ್ಠೆ, ಪ್ರಾಯಶ್ಚಿತ್ತ ಹೋಮ ಪೂರ್ವಕ ಆಶ್ಲೇಷಾ ಬಲಿ,ಬೆಳಗ್ಗೆ 10.20 ರಿಂದ ಉಭಯ ದೇವರುಗಳ ಪ್ರತಿಷ್ಠೆ, ಗಣಪತಿ ಹಾಗೂ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೈವ ದೇವರುಗಳ ಪ್ರತಿಷ್ಠೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5ರಿಂದ ಪರಿವಾರ ದೈವಗಳಿಗೆ ನವಕ ಪ್ರಧಾನ ಹೋಮ,ಗಣಪತಿ ಹಾಗೂ ಅನ್ನಪೂರ್ಣೇಶ್ವರಿ ದೇವರಿಗೆ 108 ಕಲಶ ಅಧಿವಾಸ ಹೋಮ ನಡೆಯಲಿದೆ.
ಮೇ 2 ರಂದು ಬೆಳಗ್ಗೆ 8ರಿಂದ ಉಪದೇವರುಗಳಿಗೆ 108 ಕಲಶ ಸಹಿತ ಬ್ರಹ್ಮಕುಂಭಾಭಿಷೇಕ,ಮಹಾಪೂಜೆ,ಬ್ರಹ್ಮ ಕಲಶದ ಮಂಡಲ ರಚನೆ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4 ರಿಂದ ಸಪರಿವಾರ ವೀರಭದ್ರ ದೇವರಿಗೆ 301 ಹಾಗೂ ಬ್ರಹ್ಮಲಿಂಗೇಶ್ವರ ದೇವರಿಗೆ 1001 ಕಲಶಾಧಿವಾಸ ಹೋಮ ನಡೆಯಲಿದೆ
ಮೇ 3 ರಂದು ಬೆಳಗ್ಗೆ7 ರಿಂದ ಕಲಶಾಭಿಷೇಕ ಆರಂಭ, ಬೆಳಗ್ಗೆ 10.20 ರಿಂದ ಮಿಥುನ ಲಗ್ನದಲ್ಲಿ ಬ್ರಹ್ಮಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ವೀರಭದ್ರ ದೇವರಿಗೆ ಬ್ರಹ್ಮಕಲಶಾಭಿಷೇಕ ನ್ಯಾಸ ಪೂಜೆ,ಮಹಾಪೂಜೆ ಮಂತ್ರಾಕ್ಷತೆ ವಿತರಣೆ,ಮಧ್ಯಾಹ್ನ 11.30 ರಿಂದ ಧ್ವಜಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ.ಸಂಜೆ 5 ರಿಂದ ಮೇಲ್ಬಂಟ ಮತ್ತು ಪರಿವಾರ ದೈವಗಳಿಗೆ ಸಾನಿಧ್ಯವೃದ್ಧಿ ಹೋಮ,ಕಲಶಾಭಿಷೇಕ, ಸಂಜೆ 7 ರಿಂದ ನಾಗದೇವರಿಗೆ ತನುತರ್ಪಣ ಸೇವೆ,ರಾತ್ರಿ 9 ರಿಂದ ಮಹಾ ರಂಗಪೂಜೆ,ಭೂತ ಬಲಿ ನಡೆಯಲಿದೆ.
ಸಂಜೆ 7 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಬಳಿಕ ರಾತ್ರಿ 8 ರಿಂದ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ
ಮೇ 4 ರಂದು ಬೆಳಗ್ಗೆ 9 ರಿಂದ ಶತರುದ್ರಾಭಿಷೇಕ ,ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8 ರಿಂದ ಬೆದ್ರ ಪಿಂಗಾರ ಕಲಾವಿದೆರ್ ಇವರಿಂದ ಹಾಸ್ಯ ನಾಟಕ ಕದಂಬ ಪ್ರದರ್ಶನವಾಗಲಿದೆ.
ಮೇ 5 ರಂದು ಬೆಳಗ್ಗೆ ಮಹಾರುದ್ರಯಾಗ, ನವಚಂಡಿಕಾ ಯಾಗ, ಮಧ್ಯಾಹ್ನ 12.05 ರಿಂದ ರಥಾರೋಹಣ, ಅನ್ನಸಂತರ್ಪಣೆ, ಸಂಜೆ 8 ರಿಂದ ಮನ್ಮಹಾರಥೋತ್ಸವ,ಭೂತ ಬಲಿ, ಕವಾಟ ಬಂಧನ.
ಮೇ 6 ರಂದು ಬೆಳಗ್ಗೆ 8 ರಂದು ಕವಾಟೋಧ್ಘಾಟನೆ ದೇವರಿಗೆ ದಶವಿಧ ಸ್ನಾನ, ತುಲಾಭಾರ,ಮಧ್ಯಾಹ್ನ ಪೂಜೆ, ಅನ್ನ ಸಂತರ್ಪಣೆ,ಸಂಜೆ 4 ರಿಂದ ಮಾತೃಸಂಗಮ ಕಾರ್ಯಕ್ರಮ, ಸಂಜೆ 7 ರಿಂದ ನಿತ್ಯ ಬಲಿ, ಓಕುಳಿ ಅವಭೃತ ಸ್ನಾನ,ಧ್ವಜಾವರೋಹಣ
ಮೇ 6 ರಂದು ಸೋಮವಾರ ಸಂಜೆ 7 ರಿಂದ ಗಾನಚಕ್ರವರ್ತಿ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದ ಪಾವಂಜೆ ಮೇಳದವರಿಂದ ಅಯೋಧ್ಯಾ ದೀಪ ಪ್ರದರ್ಶನವಾಗಲಿದೆ.
ಮೇ 7 ರಂದು ಬೆಳಗ್ಗೆ 8 ರಿಂದ ಮಹಾ ಸಂಪ್ರೋಕ್ಷಣೆ,ಮಂತ್ರಾಕ್ಷತೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿಯಿಂದ ಮೇಲ್ಬಂಟ ಪೂಜೆ,ಗಣಾರಾಧನೆ
ಮೇ 8 ರಂದು ಮಧ್ಯಾಹ್ನ ಮಾರಿಪೂಜೆ, ಅನ್ನಸಂತರ್ಪಣೆ ರಾತ್ರಿ 7 ರಿಂದ ಮಾರಿ ಪೂಜೆ, ಮಾರಿಬಲಿ ನಡೆಯಲಿದೆ