ಕಾರ್ಕಳ: ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಕೊಡುಗೈ ದಾನಿ ಕುಕ್ಕುಂದೂರು ನಿವಾಸಿ ಕೃಷ್ಣ ನಾಯ್ಕ್ (65) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮುರಾಠಿ ಸಮುದಾಯದ ಮುಖಂಡರಾಗಿ ಕಾರ್ಕಳ ತಾಲೂಕಿನ ಹಲವಾರು ದೈವ,ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳಿಗೆ ಕೊಡುಗೆ ನೀಡಿದ್ದು,ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಅವರು ಪತ್ನಿ ಮಕ್ಕಳನ್ನು ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.