ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದ ವಾಶ್ ಬೇಸಿನ್ ಬಳಿ ವ್ಯಕ್ತಿಯೊಬ್ಬರು ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ.
ಫೆ.13 ರಂದು ಮಂದಿರದ ಬೇಸಿನ್ ಬಳಿ ಕುಳಿತಿದ್ದ ವ್ಯಕ್ತಿಯನ್ನು ನೋಡಿದ ಮಂದಿgದÀ ವ್ಯವಸ್ಥಾಪಕರಾದ ಕೆ ವರ್ದಮಾನ್ ಅವರು ಆತನಿಗೆ ನೀರು ಕುಡಿದು ಅಲ್ಲಿಂದ ತೆರಳುವಂತೆ ಸೂಚಿಸಿದ್ದರು. ಆದರೆ ಮಧ್ಯಾಹ್ನ ಮತ್ತೆ ನೋಡಿದಾಗ ಆ ವ್ಯಕ್ತಿ ಅಲ್ಲಿಯೇ ಇದ್ದು ಕುಳಿತಲ್ಲಿಯೇ ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.