ಕಾರ್ಕಳ: ಕೋಳಿ ಸಾಗಾಟದ ಮಿನಿ ಟೆಂಪೋ ಹಾಗೂ ಮಾರುತಿ ಇಕೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ 11.15 ರ ವೇಳೆ ಸಂಭವಿಸಿದೆ.
ಕಾರು ಚಾಲಕ ಕಡ್ತಲ ಸಮೀಪದ ಎಳ್ಳಾರೆ ಗ್ರಾಮದ ಶ್ರೀನಿವಾಸ ಭಟ್ ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್’ಬೆಟ್ಟು ಕ್ರಾಸ್ ಸಮೀಪ ಈ ಅಪಘಾತ ಸಂಭವಿಸಿದ್ದು, ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಕೋಳಿ ಸಾಗಾಟದ ಮಿನಿ ಟೆಂಪೋ ಹಾಗೂ ಕಾರ್ಕಳ ಕಡೆಗೆ ಸಾಗುತ್ತಿದ್ದ ಮಾರುತಿ ಇಕೋ ಕಾರು ಮುಖಾಮುಖಿ ಡಿಕ್ಕಿಯಾಗಿವೆ.ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನಾಸ್ಥಳಕ್ಕೆ ಕಾರ್ಕಳ ನಗರ ಠಾಣಾ ಎಸ್ಐ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ