Category: ಅಪಘಾತ

ಕಾರ್ಕಳ ಪುಲ್ಕೇರಿಯ ಲಾಡ್ಜಿಂಗ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ವಿಷ ಸೇವಿಸಿ ಆತ್ಮಹತ್ಯೆ  ಶಂಕೆ

ಕಾರ್ಕಳ, ಸೆ.15: ಕಾರ್ಕಳದ ಪುಲ್ಕೇರಿ ಬೈಪಾಸ್ ಸರ್ಕಲ್ ಬಳಿಯಿರುವ ಹೋಟೇಲ್ ಒಂದರಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಕಾರ್ಕಳದ ತೆಳ್ಳಾರು ನಿವಾಸಿ ಶಿವಾನಂದ ಸುವರ್ಣ(38) ಎಂಬವರು ಸಾವನ್ನಪ್ಪಿದ್ದು, ಕಳೆದ ಎರಡು ದಿನಗಳ ಹಿಂದೆ ಲಾಡ್ಜಿಂಗ್ ನಲ್ಲಿ ರೂಮ್ ಬುಕ್ ಮಾಡಿದ್ದರು. ಸೋಮವಾರ ರಾತ್ರಿ…

ಕಾರ್ಕಳ ತಾಲೂಕು ಕಚೇರಿ ಪಾರ್ಕಿನಲ್ಲಿ ಕಡವೆ ಮೃತದೇಹ ಪತ್ತೆ

ಕಾರ್ಕಳ, ಸೆ.15: ಕಾರ್ಕಳ ತಾಲೂಕು ಕಚೇರಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ಪಾರ್ಕಿನಲ್ಲಿ ಕಡವೆಯ ಮೃತದೇಹ ಪತ್ತೆಯಾಗಿದೆ. ಮಂಗಳವಾರ ಮುಂಜಾನೆ ವಾಕಿಂಗ್ ಬಂದವರು ಕಡವೆ ಸತ್ತು ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕುಕ್ಕುಂದೂರು ಗ್ರಾಮದ ಪರಪು ನಕ್ರೆ ಅರಣ್ಯ…

ಸಾಣೂರು : ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ; ಅಗ್ನಿಶಾಮಕ  ದಳದಿಂದ ರಕ್ಷಣಾ ಕಾರ್ಯಾಚರಣೆ

ಕಾರ್ಕಳ, ಸೆ.14: ಸಾಣೂರು ಗ್ರಾಮದ ಇಂದಿರಾನಗರದಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಮನೆಯ ಆವರಣದ ಬಾವಿಗೆ ಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಸಮಯೋಚಿತ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತವಲ್ಲಿ ಯಶಸ್ವಿಯಾಗಿದ್ದಾರೆ ಇಂದಿರಾನಗರ ನಿವಾಸಿ ಗುರುಪ್ರಸಾದ್…

ಎಣ್ಣೆಹೊಳೆ: ಪಿಕಪ್ – ಕಾರಿನ ನಡುವೆ ಮುಖಾಮುಖಿ ಡಿಕ್ಕಿ: ಚಾಲಕ ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಕಾರ್ಕಳ, ಸೆ.07: ಮಹೀಂದ್ರ ಪಿಕಪ್ ಹಾಗೂ ಟಾಟಾ EV ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಹಾಗೂ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಸೇತುವೆ ಬಳಿ ಅಪಾಯಕಾರಿ ತಿರುವಿನಲ್ಲಿ ಈ…

ಕಾರ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ, ಸೆ.07: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಭವಿಸಿದೆ. ಕಾರ್ಕಳದ ಬೈಲಡ್ಕ ನಿವಾಸಿ ರಾಮಚಂದ್ರ ಜೋಗಿ (67) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅವರು ಭಾನುವಾರ ರಾತ್ರಿ 9.45 ಕ್ಕೆ…

ಹೆಬ್ರಿ: ಪ್ರತ್ಯೇಕ ಅಪಘಾತ: ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಹೆಬ್ರಿ, ಸೆ. 04: ಆಗುಂಬೆಯಿಂದ ಹೆಬ್ರಿ ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಸೋಮೇಶ್ವರ ಸಮೀಪ ವೇಗವಾಗಿ ಸಂಚರಿಸುವ ವೇಳೆ ರಸ್ತೆ ಬದಿಯ ಕಂದಕಕ್ಕೆ ಉರುಳಿ ಅಪಘಾತ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು,ಶಿವಮೊಗ್ಗದಿಂದ ಕಾರ್ಕಳ ಕಡೆಗೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ…

ಕಾರ್ಕಳ: ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿ ಹಾಸಿಗೆ ಹಿಡಿದಿದ್ದ ಮಹಿಳೆ ಸಾವು

ಕಾರ್ಕಳ, ಸೆ 03: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆನ್ನುಮೂಳೆ ಮುರಿತವಾಗಿ ಬಳಿಕ ಕೋಮಾಗೆ ತಲುಪಿ ಹಾಸಿಗೆ ಹಿಡಿದಿದ್ದ ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದ ಮಹಿಳೆ ಐಶ್ವರ್ಯ (28) ಎಂಬವರು ಮೃತಪಟ್ಟಿದ್ದಾರೆ. ಮೃತ ಐಶ್ವರ್ಯ ಅವರು ಕಳೆದ 2025ರ ನವೆಂಬರ್ 13ರಂದು ತನ್ನ…

ನಿಟ್ಟೆ ಪರಪ್ಪಾಡಿ ಬಳಿ ಭೀಕರ ಅಪಘಾತ: ಕ್ಯಾಂಟರ್- ಕಾರು ಮುಖಾಮುಖಿ ಡಿಕ್ಕಿ: ಚಾಲಕರು ಪ್ರಾಣಾಪಾಯದಿಂದ ಪಾರು

ಕಾರ್ಕಳ,ಸೆ.02: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ಬಳಿ ಕಾರು ಹಾಗೂ ಕ್ಯಾಂಟರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿದ್ದು,ಕ್ಯಾಂಟರ್ ಪಲ್ಟಿಯಾಗಿದೆ. ಮೈಸೂರಿನಿಂದ ಉಡುಪಿಗೆ ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಕ್ಯಾಂಟರ್…

ಕಲ್ಯಾ: ಕಾಲುಜಾರಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು

ಕಾರ್ಕಳ, ಆ.31: ರಕ್ತದೊತ್ತಡ ಹಾಗೂ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಮೂತ್ರವಿಸರ್ಜನೆಗೆಂದು ಹೊರಗಡೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಉ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕರುಣಾಕರ ಆರ್. ನಾಯ್ಕ್ (54)…

ಕಾರ್ಕಳ: ಅಂಗಳದಲ್ಲಿ ಕುಳಿತ್ತಿದ್ದ ವೇಳೆ ಹಾವು ಕಚ್ಚಿ ವೃದ್ಧೆ ಸಾವು

ಕಾರ್ಕಳ,ಆ.27: ಮನೆಯ ಅಂಗಳದಲ್ಲಿ ಕುಳಿತುಕೊಂಡಿದ್ದ ವೇಳೆ ಹಾವು ಕಚ್ಚಿದ ಪರಿಣಾಮ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ತುಂಬೆಹಿತ್ಲು ಎಂಬಲ್ಲಿ ಸಂಭವಿಸಿದೆ. ತುAಬೆಹಿತ್ಲು ನಿವಾಸಿ ಗುಲಾಬಿ (79) ಎಂಬವರು ಮೃತಪಟ್ಟ ಮಹಿಳೆ. ಅವರು ಬುಧವಾರ ಸಂಜೆ…