Category: ಅಪಘಾತ

ಕಾರ್ಕಳದ ದೂಪದಕಟ್ಟೆಯಲ್ಲಿ ಘನಘೋರ ದುರಂತ: ಗುಂಡು ಹಾರಿಸಿಕೊಂಡು ಯುವ ಉದ್ಯಮಿ ಆತ್ಮಹತ್ಯೆ: ಕಾರಣ ನಿಗೂಢ

ಕಾರ್ಕಳ :ಕಾರ್ಕಳದ ನಿಟ್ಟೆ ಗ್ರಾಮದ ದೂಪದಕಟ್ಟೆ ರಾಜ್ಯ ಹೆದ್ದಾರಿಯ ಸಮೀಪ ಉದ್ಯಮಿ ದಿಲೀಪ್ ಎನ್.ಆರ್. ಎಂಬವರು ತನ್ನ ಕಾರಿನಲ್ಲೇ ಮಂಗಳವಾರ ನಸುಕಿನ ಜಾವ ತನ್ನ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮAಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ದಿಲೀಪ್ ಎನ್.ಆರ್…

ಸುಳ್ಯ: ಸಿಡಿಲು ಬಡಿದು ಮನೆಗೋಡೆ , ವಿದ್ಯುತ್‌ ಉಪಕರಣಗಳಿಗೆ ಹಾನಿ

ಸುಳ್ಯ : ರವಿವಾರ ವಿಪರೀತ ಗಾಳಿಯೊಂದಿಗೆ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಸುಳ್ಯದ ಬೋರುಗುಡ್ಡೆ ಬಳಿ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯ ಗೋಡೆ ಹಾಗೂ ವಿದ್ಯುತ್‌ ಉಪಕರಣಗಳು ಹಾನಿಗೊಂಡ ಘಟನೆ ಉಂಟಾಗಿದೆ. ಮನೆಯ ವಿದ್ಯುತ್‌ ಮೀಟರ್‌…

ಸೀತಾನದಿ : ಕಾಲು ಜಾರಿ ಹೊಳೆಗೆ ಬಿದ್ದು ಯುವಕ ಮೃತ್ಯು

ಹೆಬ್ರಿ : ಯುವಕನೋರ್ವ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ಹೆಬ್ರಿಯ ತಿಂಗಳೆ ಸೀತಾನದಿ ಹೊಳೆಯಲ್ಲಿ ನಿನ್ನೆ ಸಂಭವಿಸಿದೆ. ಮೃತ ಯುವಕನನ್ನು ಹೆಬ್ರಿ ಕಿನ್ನಿ ಗುಡ್ಡೆ ನಿವಾಸಿ ಸುಧಾಕರ್‌ ಶೆಟ್ಟಿ ಅವರ ಪುತ್ರ ಸಂಕೇತ್‌ ಶೆಟ್ಟಿ (24) ಎಂದು ಗುರುತಿಸಲಾಗಿದೆ.ಸ್ನೇಹಿತರೊಂದಿಗೆ ನದಿಗೆ…

ಹಿರ್ಗಾನ ಚಿಕ್ಕಲ್’ಬೆಟ್ಟು ಕ್ರಾಸ್ ಬಳಿ ಕಾರು- ಕೋಳಿ ಸಾಗಾಟದ ಟೆಂಪೋ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಗಂಭೀರ

ಕಾರ್ಕಳ: ಕೋಳಿ ಸಾಗಾಟದ ಮಿನಿ ಟೆಂಪೋ ಹಾಗೂ ಮಾರುತಿ ಇಕೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ 11.15 ರ ವೇಳೆ ಸಂಭವಿಸಿದೆ. ಕಾರು ಚಾಲಕ ಕಡ್ತಲ ಸಮೀಪದ ಎಳ್ಳಾರೆ ಗ್ರಾಮದ ಶ್ರೀನಿವಾಸ…

ಕಾಂತಾವರ: ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಕಾರ್ಕಳ: ಮರದ ಗೆಲ್ಲು ಕಡಿಯಲು ಮರ ಹತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಮರದಿಂದ ಬಿದ್ದು ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಕಾಂತಾವರದ ಕವೈಲ್ ದರ್ಖಾಸ್ ಎಂಬಲ್ಲಿನ ನಿವಾಸಿ ಚಂದ್ರಶೇಖರ(55) ಎಂಬವರು ಮೃತಪಟ್ಟವರು. ಅವರು ಏ.13ರಂದು ತಮ್ಮ…

ದಾವಣಗೆರೆಯಲ್ಲಿ ಭೀಕರ ಅಗ್ನಿ ದುರಂತ : ತಾಲೂಕು ಕಚೇರಿ ದಾಖಲೆಗಳು ಬೆಂಕಿಗಾಹುತಿ

ದಾವಣಗೆರೆ : ದಾವಣಗೆರೆಯಲ್ಲಿ ಭೀಖರವಾದ ಅಗ್ನಿ ದುರಂತ ಸಂಭವಿಸಿದ್ದು, ಜಗಳೂರು ತಾಲೂಕು ಕಛೇರಿಯ ರೆಕಾರ್ಡ್ ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸರ್ಕಾರಿ ಕಚೇರಿಗೆ ಬೆಂಕಿ ಬಿದ್ದು ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಂಡು…

ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪತ್ರಕರ್ತ ಸಂದೀಪ್ ಪೂಜಾರಿ ನಿಧನ

ಉಡುಪಿ: ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ(37) ಚಿಕಿತ್ಸೆ ಫಲಿಸದೇ ಎ.20ರಂದು ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ…

ಹೆಬ್ರಿ: ಗ್ಯಾಸ್ ಲೀಕೆಜ್ ಅಗ್ನಿ ಅವಘಡದಿಂದ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಹೆಬ್ರಿ: ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕೆಜ್‌ನಿಂದ ಉಂಟಾದ ಅಗ್ನಿ ಅವಘಡದಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೆಬ್ರಿ ನಿವಾಸಿ ಅನೂಪ (35ವರ್ಷ) ಎಂಬವರು ಮನೆಮನೆಗೆ ಗ್ಯಾಸ್ ವಿತರಣೆ ಕೆಲಸ ಮಾಡಿಕೊಂಡಿದ್ದು, ಏ.11 ರಂದು ಕೆರೆಬೆಟ್ಟು ಮಂಡಾಡಿಜೆಡ್ಡು…

ಬಪ್ಪನಾಡು ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ಅವಘಡ: ತೇರಿನ ಮೇಲ್ಭಾಗ ಏಕಾಏಕಿ ಕುಸಿತ

ಮಂಗಳೂರು: ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ತೇರು ಮುರಿದು ಬಿದ್ದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡಿನಲ್ಲಿ ನಡೆದಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವ ನಡೆಯುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ಈ ವೇಳೆ ತೇರಿನಲ್ಲೇ ಇದ್ದ ಅರ್ಚಕರು…

ಬೇಳಂಜೆ: ಪಿಕಪ್-ಕಾರು ಡಿಕ್ಕಿ: ಕಾರಿನಲ್ಲಿದ್ದ 9 ಜನರಿಗೆ ಗಾಯ

ಹೆಬ್ರಿ: ಮಹೀಂದ್ರಾ ಪಿಕಪ್ ವಾಹನ ಹಾಗೂ ಮಾರುತಿ ಇಕೊ ಕಾರಿನ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ 8 ಜನರಿಗೆ ಗಾಯಗಳಾಗಿವೆ. ಹೆಬ್ರಿ ತಾಲೂಕಿನ ಬೇಳಂಜೆ ಹಾಲಿನ ಡೈರಿ ಬಳಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಪಿಕಪ್ ಚಾಲಕ ಗುರುರಾಜ…