Category: ಅಪಘಾತ

ಮಾಳ : ತೋಡಿಗೆ ಬಿದ್ದು ವ್ಯಕ್ತಿ ಸಾವು

ಕಾರ್ಕಳ: ತಾಲೂಕಿನ ಮಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ‌ಮೃತಪಟ್ಟಿದ್ದಾರೆ. ಮಾಳ ಗ್ರಾಮದ ಕನೆಗುಂಡಿ ಶ್ಯಾಮ ಮೇರ ಮೃತಪಟ್ಟವರು. ಅವರು ನ.4 ರಂದು ಕೃಷಿ ಕೆಲಸಕ್ಕೆಂದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.

ಮುದ್ರಾಡಿ: ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಹೆಬ್ರಿ: ಬೈಕಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮುದ್ರಾಡಿಯ ಹರೀಶ(45) ಮೃತಪಟ್ಟ ದುರ್ದೈವಿ. ಹರೀಶ ಅವರು ಅ.25 ರಂದು ಬೈಕಿನಲ್ಲಿ ಹೋಗುತ್ತಿದ್ದಾಗ ರಾತ್ರಿ ಮುದ್ರಾಡಿ ರಿಕ್ಷಾ ನಿಲ್ದಾಣ ಬಳಿಯ ಬ್ಯಾರಿಕೇಡ್ ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರಿಗೆ ಹೆಬ್ರಿ…

ಆಂಧ್ರದಲ್ಲಿ ಭೀಕರ ಅಪಘಾತ: ಹೊತ್ತಿ ಉರಿದ ಎಸಿ ಬಸ್, ಬೆಂಗಳೂರಿಗೆ ಬರುತ್ತಿದ್ದ 32 ಮಂದಿ ಸಜೀವ ದಹನ!

ಕರ್ನೂಲ್‌ (ಆಂಧ್ರ ಪ್ರದೇಶ): ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಆಂಧ್ರಪ್ರದೇಶದ ಕರ್ನೂಲು ಬಳಿ ಅಪಘಾತಕ್ಕೀಡಾಗಿ, 32 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿರುವ ದಾರುಣ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಬಸ್‌ನಲ್ಲಿದ್ದ 44 ಪ್ರಯಾಣಿಕರ ಪೈಕಿ ಕೇವಲ 12 ಮಂದಿ ಮಾತ್ರ…

ಕಾರ್ಕಳದ ಮಿಯ್ಯಾರಿನಲ್ಲಿ ಸಿಡಿಲಿಗೆ ಎರಡು ದನಗಳು ಬಲಿ: ಇಬ್ಬರಿಗೆ ಗಾಯ

ಕಾರ್ಕಳ: ತೋಟದಲ್ಲಿ ಮೇಯುತ್ತಿದ್ದ ದನಗಳಿಗೆ ಸಿಡಿಲು ಬಡಿದ ಪರಿಣಾಮ ಎರಡು ದನಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಸಂಜೆ 4.30ರ ಸುಮಾರಿಗೆ ಏಕಾಎಕಿ ಅಪ್ಪಳಿಸಿದ ಸಿಡಿಲಿಗೆ ತೋಟದ ಕಟ್ಟಿ ಹಾಕಿದ್ದ ದನಗಳು ಸ್ಥಳದಲ್ಲೇ ಅಸು ನೀಗಿವೆ. ಕಾರ್ಕಳ…

ಮಾಜಿ ಶಾಸಕ ದಿ‌.ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಹೆಬ್ರಿ,ಅ‌,14: ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ (48) ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಸುದೀಪ್ ಭಂಡಾರಿಯವರು…

ನೀರೆ: ಪಾದಾಚಾರಿಗೆ ಟೆಂಪೊ ಡಿಕ್ಕಿಯಾಗಿ ಗಂಭೀರ ಗಾಯ

ಕಾರ್ಕಳ: ನೀರೆ ಗ್ರಾಮದ ಕಂಪನ್ ಎಂಬಲ್ಲಿ ಪಾದಾಚಾರಿ ವ್ಯಕ್ತಿಗೆ ಟೆಂಪೊ ಡಿಕ್ಕಿಯಾಗಿ ಪಾದಾಚಾರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಕ್ಕುಂದೂರು ಗ್ರಾಮದ ಜಾರ್ಕಳ ಶಾಂತಿಪಲ್ಕೆ ನಿವಾಸಿ ಆನಂದ (55ವ) ಗಾಯಗೊಂಡವರು. ಆನಂದ ಅವರು ಅ. 6 ರಂದು ನೀರೆ ಗ್ರಾಮದ ಕಂಪನ್…

ಜಾರ್ಕಳ: ನೀರಿನ ಟ್ಯಾಂಕ್ ಕುಸಿದು ಬಿದ್ದು ತಾ.ಪಂ ಮಾಜಿ ಸದಸ್ಯೆಯ ಪತಿ ಮೃತ್ಯು

ಕಾರ್ಕಳ,ಅ.10:ಶೆಡ್ ಕಟ್ಟುವ ಕಾಮಗಾರಿ ಸಂದರ್ಭದಲ್ಲಿ ನೀರು ತುಂಬಿದ ಟ್ಯಾಂಕ್ ಏಕಾಎಕಿ ಕೆಲಸ ಮಾಡುತ್ತಿದ್ದ ಮೇಸ್ತ್ರಿಯೊಬ್ಬರ ಮೇಲೆ ಕುಸಿದು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಜಾರ್ಕಳ ಎಂಬಲ್ಲಿ ಅ.9 ರಂದು ನಡೆದಿದೆ. ಕಾರ್ಕಳ…

ಕಾರ್ಕಳ: ರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿ ಹೃದಯಾಘಾದಿಂದ ಮೃತ್ಯು

ಕಾರ್ಕಳ: ಕಾರ್ಕಳದ ಡಾ.ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಬಳಿ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕಸಬಾ ಗ್ರಾಮದ ತೆಳ್ಳಾರು ರಸ್ತೆಯ ನಿವಾಸಿ ಪ್ರಕಾಶ್ಚಂದ್ರ(55) ಮೃತಪಟ್ಟವರು. ಪ್ರಕಾಶ್ಚಂದ್ರ ಅವರು ಅ.3 ರಂದು ಮಧ್ಯಾಹ್ನ ಅತ್ತೂರಿನಿಂದ ಕ್ರಿಯೇಟಿವ್‌ ಕಾಲೇಜಿನ ಕಡೆಗೆ…

ಹೆಬ್ರಿ: ಕಾರು ಬಸ್ಸು ಮುಖಾಮುಖಿ ಡಿಕ್ಕಿ: ದಂಪತಿಗೆ ಗಾಯ

ಹೆಬ್ರಿ,ಸೆ,28: ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ದಂಪತಿ ಗಾಯಗೊಂಡ ಘಟನೆ ಹೆಬ್ರಿಯಲ್ಲಿ ಸಂಭವಿಸಿದೆ. ಕಾರು ಚಾಲಕ‌ವಿಜೇಶ್ ಹಾಗೂ ಅವರ ಪತ್ನಿ ನಿಶಾ ಗಾಯಗೊಂಡಿದ್ದು, ವಿಜೇಶ್ ತನ್ನ ಪತ್ನಿ ನಿಶಾ ಅವರೊಂದಿಗೆ ತನ್ನ ಕಾರಿನಲ್ಲಿ ಶುಕ್ರವಾರ ರಾತ್ರಿ 8.30ರ…

ಕಾರ್ಕಳ: ಸ್ಕೂಟರ್ ಗೆ ಕಾರು ಡಿಕ್ಕಿ- ಸವಾರನಿಗೆ ಗಂಭೀರ ಗಾಯ

ಕಾರ್ಕಳ: ಕಾರ್ಕಳ ದ ಸರಕಾರಿ ಆಸ್ಪತ್ರೆ ಬಳಿ ಸೆ.22 ರಂದು ಸ್ಕೂಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಟ್ಟೆಯ ಸತೀಶ್‌ ಕುಮಾರ್‌ (60) ಗಾಯಗೊಂಡವರು. ಅವರು ಸೆ.22 ರಂದು ತಮ್ಮ ಸ್ಕೂಟರ್ ನಲ್ಲಿ…