Category: ಅಪರಾಧ

ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಕಳೆದ 2 ವರ್ಷಗಳಿಂದ ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಶ್ರೀಧರ (41ವ) ಆತ್ಮಹತ್ಯೆ ಮಾಡಿಕೊಂಡವರು.ಅನಾರೋಗ್ಯ ಪೀಡಿತರಾಗಿದ್ದ…

ಕಾರ್ಕಳ: ಆನ್ಲೈನ್ ವಂಚನೆಯಿಂದ ಲಕ್ಷಾಂತರ ರೂ. ನಷ್ಟ

ಕಾರ್ಕಳ: ಆನ್ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ವಾದಿರಾಜ ಎಂಬವರ ಖಾತೆಗೆ ವಿಮಾ ಕಂಪೆನಿಯಿಂದ 3,67,269 ರೂ. ಹಣ ಬಂದಿದ್ದು, ಆಗಸ್ಟ್. 09 ರಂದು ಅವರ ಖಾತೆಯಲ್ಲಿದ್ದ 3,55,199 ರೂ. ಹಾಗೂ ಜಂಟಿ ಖಾತೆಯಿಂದ 299 ರೂ. ನಗದು…

ಮುನಿಯಾಲು: ಓವರ್’ಟೇಕ್ ಭರಾಟೆ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು

ಹೆಬ್ರಿ: ವೇಗವಾಗಿ ಸಾಗುತ್ತಿದ್ದ ಕಾರೊಂದು ಎದುರಿನಿಂದ ಸಾಗುತ್ತಿದ್ದ ಕಾರನ್ನು ಓವರ್’ಟೇಕ್ ಮಾಡುವ ಭರದಲ್ಲಿ ಡಿವೈಡರ್’ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮಂಗಳೂರಿನಿಂದ ವಿದ್ಯಾರ್ಥಿಗಳ ತಂಡವು ಎರಡು ಕಾರುಗಳಲ್ಲಿ ಹೆಬ್ರಿ ಕಡೆಗೆ ಹೋಗುತ್ತಿದ್ದಾಗ ಮುನಿಯಾಲು…

ಮುಡಾರು: ಕಾಲುನೋವಿನಿಂದ ಬಳಲುತ್ತಿದ್ದ ಯುವಕ ಆತ್ಮಹತ್ಯೆ

ಕಾರ್ಕಳ: ಕಾಲುನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ಗುಣಮುಖವಾಗದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮುಡಾರು ನಿವಾಸಿ ಹರಿಪ್ರಸಾದ್(30ವ) ಆತ್ಮಹತ್ಯೆಗೆ ಶರಣಾದ ಯುವಕ. ಹರಿಪ್ರಸಾದ್ ಕಳೆದ ಒಂದು ವರ್ಷದಿಂದ ಎರಡೂ ಕಾಲುಗಳ ನೋವಿನಿಂದ ಬಳಲುತ್ತಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ…

ಕಾರ್ಕಳ: ಮಾನಸಿಕ ಅಸ್ವಸ್ಥ ವ್ಯಕ್ತಿ ನಾಪತ್ತೆ

ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಆಗಸ್ಟ್.3 ರಂದು ನಡೆದಿದೆ. ಕುಕ್ಕುಂದೂರಿನ ವಸಂತಿ ಎಂಬವರ ಪತಿ ವಿಶ್ವನಾಥ್ (45) ಕಳೆದ 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಳುತ್ತಿದ್ದು, ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.…

ಕಾರವಾರ: ಕಾಳಿ ನದಿಗೆ ಬಿದ್ದ ಕೋಡಿಭಾಗ್ ಸೇತುವೆ- ಓರ್ವ ವ್ಯಕ್ತಿಗೆ ಗಾಯ, ಕಾರವಾರ-ಗೋವಾ ಸಂಚಾರ ಸ್ಥಗಿತ

ಕಾರವಾರ: ಕಾರವಾರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಸೇತುವೆ ಮಂಗಳವಾರ ತಡರಾತ್ರಿ ಕುಸಿದುಬಿದ್ದಿದ್ದು, ಘಟನೆಯಲ್ಲಿ ಲಾರಿ ಚಾಲಕನೊಬ್ಬ ಗಾಯಗೊಂಡಿದ್ದಾನೆAದು ತಿಳಿದುಬಂದಿದೆ. ಕಾರವಾರ ಗೋವಾ ಸಂಪರ್ಕ ಮಾಡುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ…

ಕಾರ್ಕಳ : ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಉಮೇಶ್‌ (62) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ವಿವಾಹವಾಗಿ ಮುಂಬೈನಲ್ಲಿ ವಾಸವಾಗಿದ್ದವರು ಎಂಟು ವರ್ಷದ ಹಿಂದೆ ತನ್ನ ಹೆಂಡತಿ ಮಗುವನ್ನು ಮುಂಬೈಯಲ್ಲಿ ಬಿಟ್ಟು ಊರಿಗೆ…

ಮಿಯ್ಯಾರು:ಟೆಂಪೋ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಕಾರ್ಕಳ : ತಾಲೂಕಿನ ಮಿಯ್ಯಾರಿನಲ್ಲಿ ಟೆಂಪೋ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟಿದ್ದಾರೆ. ಮಿಯ್ಯಾರು ನಿವಾಸಿ ಕಾಶಿನಾಥ್ (38ವ) ಮೃತಪಟ್ಟವರು. ಅವರು ಸೋಮವಾರ (ಆಗಸ್ಟ್.5) ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಹಾಳೆಕಟ್ಟೆಯಲ್ಲಿರುವ ತಮ್ಮ ಸಲೂನ್ ಅಂಗಡಿ…

ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಇನ್‌ಸ್ಪೆಕ್ಟರ್ ಆತ್ಮಹತ್ಯೆ: ಎರಡು ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದ ಸಿಸಿಬಿ ಎಸ್‌ಐ ತಿಮ್ಮೇಗೌಡ ನೇಣಿಗೆ ಶರಣು

ಬೆಂಗಳೂರು: ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿ ಬಳಿ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಮ್ಮೇಗೌಡ…

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ: ಆರೋಪಿ ಮುಸಾವಿರ್’ನನ್ನು ಕೆಫೆಗೆ ಕರೆತಂದು ಸ್ಥಳ ಮಹಜರು ನಡೆಸಿದ NIA

ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳ ತಂಡ ಇಂದು ಮುಂಜಾನೆ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಮುಸಾವಿರ್ ನನ್ನು ರಾಮೇಶ್ವರಂ ಕೆಫೆಗೆ ಕರೆತಂದು ಮಹಜರು ನಡೆಸಿದೆ. ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರ್…