Category: ಅಪರಾಧ

ನೀರೆ: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವನಿಗೆ ಗಾಯ

ಕಾರ್ಕಳ: ಕಾರುಗಳು ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನೀರೆ ಗ್ರಾಮದ ಗರಡಿ ಬಳಿ ಸಂಭವಿಸಿದೆ. ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಕೇಶವ (72) ಎಂಬವರು ಗಾಯಗೊಂಡಿದ್ದಾರೆ ಕೇಶವ ಅವರು ತನ್ನ ಮಗ ಹರೀಶ್…

ಕಬ್ಬಿನಾಲೆ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಕೃಷಿಕ ಸಾವು

ಹೆಬ್ರಿ:ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ನಡೆದಿದೆ. ಹೆಬ್ರಿ ತಾಲೂಕಿನ ಕಬ್ಬಿನಾಲೆಯ ನೀರತೋಡ ನಿವಾಸಿ ಸುಬ್ಬ ರಾವ್ (75) ಮೃತಪಟ್ಟ ದುರ್ದೈವಿ. ಸುಬ್ಬ ರಾವ್ ಸೋಮವಾರ ತನ್ನ ತೋಟದಲ್ಲಿ…

ಕಾರ್ಕಳ: ಮದ್ಯವ್ಯಸನಿ ಕುಸಿದು ಬಿದ್ದು ಸಾವು

ಕಾರ್ಕಳ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ‌. ಕಾರ್ಕಳದ ರವಿ (40) ಮೃತಪಟ್ಟ ವ್ಯಕ್ತಿ. ರವಿ ಅವಿವಾಹಿತರಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದು ವಿಪರೀತ ಶರಾಬು ಕುಡಿಯುವ ಚಟವನ್ನು ಹೊಂದಿದ್ದರು. ಸೋಮವಾರ ಮುಂಜಾನೆ ಮದ್ಯ ಸೇವನೆಯಿಂದ ಕುಸಿದು ಬಿದ್ದ…

ಪಳ್ಳಿ: ಟಿಪ್ಪರ್-ಕಾರು ಡಿಕ್ಕಿ: ಪ್ರಯಾಣಿಕರಿಬ್ಬರಿಗೆ ಗಾಯ

ಕಾರ್ಕಳ: ಟಿಪ್ಪರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಪಳ್ಳಿಯಲ್ಲಿ ಸಂಭವಿಸಿದೆ. ಪಳ್ಳಿ ಗ್ರಾಮದ ಕುಟ್ಟಿ ಹಾಗೂ ಪ್ರೇಮಾ ದಂಪತಿ ಕಳೆದ ಶುಕ್ರವಾರ ಪಳ್ಳಿ ಕಡೆಯಿಂದ ಮುಂಡ್ಕೂರು ಕಡೆಗೆ…

ಮುದ್ರಾಡಿ: ಮನೆಯ ಬೀಗ ಒಡೆದು 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹೆಬ್ರಿ:ಮನೆಯ ಬೀಗ ಒಡೆದು ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದು ಪರಾರಿಯಾಗಿರುವ ಘಟನೆ ಮುದ್ರಾಡಿಯ ಕೆಲಕಿಲ ಎಂಬಲ್ಲಿ ನಡೆದಿದೆ. ಮುದ್ರಾಡಿ ಗ್ರಾಮದ ಪ್ರಣೀತ್‌ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ,ಈ ಕುರಿತು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಣೀತ್…

ಬೆಳಗಾವಿಯ ಸವದತ್ತಿಯಲ್ಲಿ ಬೆದರಿಕೆ ಹಾಕಿ ಮತಾಂತರಕ್ಕೆ ಯತ್ನ : ದಂಪತಿ ಬಂಧನ: ಲವ್ ಜಿಹಾದ್ ಆರೋಪ!

ಬೆಳಗಾವಿ : ಬೆಳಗಾವಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಹಿಂದೂ ಮಹಿಳೆಯನ್ನು ಪುಸಲಾಯಸಿ ಆಕೆಯೊಂದಿಗೆ ಪ್ರೀತಿ ನಾಟಕವಾಡಿ, ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಮತಾಂತರಕ್ಕೆ ಒತ್ತಾಯಿಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮುಸ್ಲಿಂ ದಂಪತಿಯನ್ನು…

ಮಿಯ್ಯಾರು ಕಂಬಳ ಕ್ರೀಡಾಂಗಣದಲ್ಲಿ ವ್ಯಕ್ತಿ ನೇಣಿಗೆ ಶರಣು

ಕಾರ್ಕಳ: ಮಿಯ್ಯಾರು ಗ್ರಾಮದ ಕಂಬಳ ಕ್ರೀಡಾಂಗಣದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲದ ಕೂಲಿ ಕಾರ್ಮಿಕ ವಿಜೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಜೇಶ್ ಬಜಗೋಳಿ ಸುತ್ತಮುತ್ತಲಿನ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ಮಾನಸಿಕ ಖಿನ್ನತೆಯಿಂದ…

ಕಾಂತಾವರ:ಸಿಡಿಲು ಬಡಿದು ನಡೆದುಕೊಂಡು ಹೋಗುತ್ತಿದ್ದ ಯುವಕ ಸಾವು

ಕಾರ್ಕಳ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಸಿಡಿಲು ಬಡಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ನಿತಿನ್ ಪೂಜಾರಿ ಮೃತಪಟ್ಟ ದುರ್ದೈವಿ. ಅವರು ಶನಿವಾರ ಮುಂಜಾನೆ 6 ಗಂಟೆ ಸುಮಾರಿಗೆ ಕೇಪ್ಲಾಜೆ…

ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ಖಂಡಿಸಿ ಸಂಘಟನೆಯಿಂದ ಪಂಜಿನ ಮೆರವಣಿಗೆ: ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೇ ಹುಬ್ಬಳ್ಳಿಯ ಯುವತಿ ನೇಹಾ ಕೊಲೆ ಪ್ರಕರಣ ಖಂಡಿಸಿ ಪಂಜಿನ ಮೆರವಣಿಗೆ ನಡೆಸಿದ ಸಂಘಟನೆಯ ಮೂವರು ಕಾರ್ಯಕರ್ತರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕು ಕಚೇರಿ ಬಳಿಯ ಸೃವಜ್ಞ…

ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಯುವಕರ ಮೇಲೆ ಹಲ್ಲೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಕಿಡಿ

ಬೆಂಗಳೂರು: ಬೆಂಗಳೂರಿನಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಮೂವರು ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಘಟನೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೇ ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕೇಂದ್ರ ಕೃಷಿ ಮತ್ತು…