Category: ಅಪರಾಧ

ಹೆಬ್ರಿ ಸಮೀಪದ ಸೋಮೇಶ್ವರದಲ್ಲಿ ಭೀಕರ ದುರ್ಘಟನೆ : ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದವರ ಮೇಲೆ ಹರಿದ ಟಿಪ್ಪರ್: ಓರ್ವ ಸ್ಥಳದಲ್ಲೇ ಸಾವು,ಇನ್ನೋರ್ವ ಗಂಭೀರ

ಹೆಬ್ರಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರದ ಪೆಟ್ರೋಲ್ ಬಂಕಿನಲ್ಲಿ ಮಲಗಿದ್ದ ಇಬ್ಬರ ಮೇಲೆ ಟಿಪ್ಪರ್ ಹರಿದು ಓರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ಶುಕ್ರವಾರ ಮುಂಜಾನೆ 6 ಗಂಟೆಗೆ ಸಂಭವಿಸಿದೆ. ಸಾಗರ ತಾಲೂಕಿನ ಶಿವರಾಜ್(38) ಎಂಬವರು…

ಉಡುಪಿ: ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸ್ಥಳದಲ್ಲೇ ಸಾವು

ಉಡುಪಿ: ಕಾರು ಡಿಕ್ಕಿಯಾದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಮೂಳೂರು ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಮೂಳೂರು ಮಹಾಲಕ್ಷ್ಮಿ ನಗರದ ನಿವಾಸಿ ಲೀಲಾವತಿ ಸಾಲಿಯಾನ್ (65) ಮೃತಪಟ್ಟ…

ಕಾರ್ಕಳ: ಕಚ್ಚಾ ಗೇರುಬೀಜ ಪೂರೈಸುವ ನೆಪದಲ್ಲಿ ವಂಚನೆ: ಬ್ರೋಕರ್ ನಂಬಿ 65 ಲಕ್ಷ ಕಳೆದುಕೊಂಡ ಕಡ್ತಲದ ಉದ್ಯಮಿ!

ಕಾರ್ಕಳ: ವಿದೇಶದಿಂದ ಕಚ್ಚಾ ಗೇರುಬೀಜ ಆಮದು ಮಾಡುವ ವಿಚಾರದಲ್ಲಿ ಕಾರ್ಕಳ ತಾಲೂಕಿನ ಕಡ್ತಲದ ಗೇರುಬೀಜ ಕಾರ್ಖಾನೆಯ ಉದ್ಯಮಿಗೆ ವಂಚಕರು ಬರೋಬ್ಬರಿ 65 ಲಕ್ಷ ರೂ ಪಂಗನಾಮ ಹಾಕಿದ್ದಾರೆ. ಕಡ್ತಲದ ತಿರುಮಲ ಗೇರುಬೀಜ ಸಂಸ್ಕರಣಾ ಘಟಕದ ಮಾಲ್ಹಕ ಯೋಗಿಶ್ ಮಲ್ಯ ಎಂಬವರೇ ವಂಚನೆಗೊಳಗಾದವರು.…

ಅಜೆಕಾರು: ರಕ್ತದೊತ್ತಡ ಖಾಯಿಲೆಯಿಂದ ಬಲುತಿದ್ದ ವ್ಯಕ್ತಿ ಕುಸಿದುಬಿದ್ದು ಸಾವು

ಕಾರ್ಕಳ:ವಿಪರೀತ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಏಕಾಎಕಿ ಕುಸಿದುಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಕೈಕಂಬ ಎಂಬಲ್ಲಿ ಸಂಭವಿಸಿದೆ. ಮರ್ಣೆ ಗ್ರಾಮದ ಕೈಕಂಬ ನಿವಾಸಿ ಪ್ರಗತಿಪರ ಕೃಷಿಕ ಉಮಾನಾಥ ಬಾಂದೊಡ್ಕರ್ (54) ಎಂಬವರು ರಕ್ತದೊತ್ತ ಏರುಪೇರಾಗಿ ಆಸ್ಪತ್ರೆ ಸಾಗಿಸುವ ದಾರಿಯಲ್ಲಿ…

ಹೆಬ್ರಿ: ಎಸ್.ಆರ್ ಆಂಗ್ಲಮಾಧ್ಯಮ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಹೆಬ್ರಿ :ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿನಿಯೊಬ್ಬಳು ಮಾನಸಿಕ ಖಿನ್ನತೆಗೆ ಒಳಗಾಗಿ ತಾನು ಕಲಿಯುತ್ತಿದ್ದ ಕಾಲೇಜಿನ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೆಬ್ರಿ ತಾಲೂಕಿನ ಕಿನ್ನಿಗುಡ್ಡೆ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಲತಾ ಎಂಬವರ ಮಗಳು…

ಕಾರ್ಕಳ: ಮಕ್ಕಳಿಗೆ ಹೋಮ್ ವರ್ಕ್ ಮಾಡಿಸುವ ವಿಚಾರದಲ್ಲಿ ದಂಪತಿ ನಡುವೆ ಕಿತ್ತಾಟ: ಪತಿ ವಿರುದ್ಧ ಪತ್ನಿ ದೂರು

ಕಾರ್ಕಳ: ಮಕ್ಕಳಿಗೆ ಶಾಲೆಯಲ್ಲಿ ನೀಡಿರುವ ಹೋಮ್ ವರ್ಕ್ ಮಾಡಿಸುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಶುರುವಾದ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ವಿನಂತಿ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ನೀಡಿದ ಮನೆಕೆಲಸವನ್ನು ಮಾಡುವಂತೆ ಗಂಡ ಅಶೋಕ ಪೂಜಾರಿಯವರಲ್ಲಿ…

ಕಾರ್ಕಳ:ಕ್ಲಿನಿಕ್ ಗೆ ಬಂದಿದ್ದ ವೃದ್ಧೆಯನ್ನು ವಂಚಿಸಿ ಚಿನ್ನಾಭರಣ ಎಗರಿಸಿ ಪರಾರಿಯಾದ ಅಪರಿಚಿತ!

ಕಾರ್ಕಳ:ಮೊಬೈಲ್ ಫೋನ್ ಕೊಡಿ ನಿಮ್ಮ ಮಗನ ಹತ್ತಿರ ಮಾತನಾಡಲಿಕ್ಕಿದೆ ಎಂದು ಹೇಳಿ ವೃದ್ಧೆಯೊಬ್ಬರ ಫೊನ್ ತೆಗೆದುಕೊಂಡು ಮಾತನಾಡಿದಂತೆ ಮಾಡಿ ಮಗ ಫೋನ್ ತೆಗೆಯುತ್ತಿಲ್ಲಎಂದು ಹೇಳಿ ಮೊಬೈಲ್ ಫೋನ್ ಪಡೆದುಕೊಂಡ ಮಧ್ಯವಯಸ್ಕ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯ ಮೊಬೈಲ್,700 ರೂ ನಗದು ಹಾಗೂ 30…

ಮಾಳ: ಬೈಕಿಗೆ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ: ಕಾರಿನೊಂದಿಗೆ ಚಾಲಕ ಪರಾರಿ

ಕಾರ್ಕಳ: ಮಾಳ ಘಾಟಿಯಲ್ಲಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಕಳಸ ಕಡೆಯಿಂದ ಎಸ್ ಕೆ ಬಾರ್ಡರ್ ಮಾರ್ಗವಾಗಿ ಮಾಳ ಘಾಟಿಯಲ್ಲಿ ಕಾರ್ಕಳ ಕಡೆಗೆ ಅತೀವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಮುಂದಿನಿAದ ಹೋಗುತ್ತಿದ್ದ ಬುಲೆಟ್ ಬೈಕಿಗೆ…

ಪಡುಬಿದ್ರಿ: ಪಂಚಾಯತ್ ಪಿಡಿಓ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ:ಪಂಚಾಯತ್ ಸದಸ್ಯನ ವಿರುದ್ಧ ಎಫ್ಐಆರ್

ಪಡುಬಿದ್ರಿ: ಪಡುಬಿದ್ರಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ಎಂಬವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪಂಚಾಯತ್ ಸದಸ್ಯನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ನ. 17ರಂದು ಕಚೇರಿಯಲ್ಲಿ ಕರ್ತವ್ಯ…

ಹೆಬ್ರಿ: ದನ ಸಾಗಾಟದ ವಾಹನ ತಡೆದ ಪೊಲೀಸರು; ವಾಹನ ಬಿಟ್ಟು ಐವರು ಆರೋಪಿಗಳು ಪರಾರಿ

ಹೆಬ್ರಿ: ಅಕ್ರಮವಾಗಿ ದನ ಸಾಗಾಟ ಮಡುತ್ತಿದ್ದ ವಾಹನ ಹಾಗೂ ಜಾನುವರುಗಳನ್ನು ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಡ್ಪಾಲು ಗ್ರಾಮದ ಕೂಡ್ಲು ಸಮೀಪದ ಮೇಗದ್ದೆ ಎಂಬಲ್ಲಿAದ ನವೆಂಬರ್ 18ರ ಶನಿವಾರ ಮುಂಜಾನೆ 3 ಗಂಟೆಗೆ 17 ಜಾನುವಾರುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸಲು ಗೂಡ್ಸ್ ವಾಹನದಲ್ಲಿ…