Category: ಅಪರಾಧ

ಶಿರ್ವ: ನಾಪತ್ತೆಯಾಗಿದ್ದ ಯುವತಿಯ ಶವ ಹೊಳೆಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

ಶಿರ್ವ: ಕಳೆದ ಒಂದು ವಾರದ ಹಿಂದೆ ಮೂಡುಬೆಳ್ಳೆಯ ಯುವತಿ‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಶವ ಪಾಪನಾಶಿನಿ ಹೊಳೆಯಲ್ಲಿ ಅ.13 ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ಸದಾಶಿವ ಪೂಜಾರಿ ಎಂಬವರ ಪುತ್ರಿ ವಿನಿತಾ (22)ಕಳೆದ ಅಕ್ಟೋಬರ್ 9ರಂದು…

ಹಾಸನ: ದುಷ್ಕರ್ಮಿಗಳಿಂದ ಹೆಚ್​ ಡಿ ರೇವಣ್ಣ ಆಪ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಗುತ್ತಿಗೆದಾರ ಪ್ರಾಣಾಪಾಯದಿಂದ ಪಾರು

ಹಾಸನ:ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಹೆಚ್​ಡಿ ರೇವಣ್ಣ ಅವರ ಆಪ್ತ ಹಾಗೂ ಗುತ್ತಿಗೆದಾರ ಅಶ್ವಥ್ ಗೌಡ ಎಂಬವರ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಸೂರನಹಳ್ಳಿ…

ಹೆಬ್ರಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ವಿಷಸೇವಿಸಿ ಆತ್ಮಹತ್ಯೆ

ಹೆಬ್ರಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಣ್ಣೀರು ಎಂಬಲ್ಲಿ ಸೋಮವಾರ ಸಂಭವಿಸಿದೆ. ನಾಡ್ಪಾಲು ನಿವಾಸಿ ವಿಜೇಂದ್ರ ಆಚಾರ್ಯ(30) ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಜೇಂದ್ರ ಆಚಾರ್ಯ ಕಳೆದ…

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಉದ್ಯೋಗಿ ಆತ್ಮಹತ್ಯೆ

ಮೂಡಬಿದಿರೆ: ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಉದ್ಯೋಗಿ ತಾನು ವಾಸವಿದ್ದ ಹಾಸ್ಟೆಲ್ ರೂಮಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಗಲಕೋಟೆ ಮೂಲದ ಹನುಮಂತಪ್ಪ(24) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ.ಅವರು ಸೋಮವಾರ ರಾತ್ರಿ ಹಾಸ್ಟೆಲ್ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಹನುಮಂತಪ್ಪ ಆಳ್ವಾಸ್…

ಅತ್ತಿಬೆಲೆ ಅಗ್ನಿ ದುರಂತ ಪ್ರಕರಣ: ಸಿಐಡಿ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಬೆಂಗಳೂರು: ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ಅನಾಹುತದ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ, ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುವುದು.ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದು ಮುಖ್ಯ ಮಂತ್ರಿ…

ತೀರ್ಥಹಳ್ಳಿ ಅರಳಸುರಳ್ಳಿಯ ಮನೆಯಲ್ಲಿ ಅಗ್ನಿ ದುರಂತ: ಒಂದೇ ಕುಟುಂಬದ ಮೂವರು ಸಜೀವ ದಹನ: ಆತ್ಮಹತ್ಯೆ ಶಂಕೆ

ತೀರ್ಥಹಳ್ಳಿ :ಅಗ್ನಿ ಅವಘಡದಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿಯ ಕಲ್ಲೋಣಿ ಕೆಕೋಡ ಎಂಬಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅರ್ಚಕ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಕೆಕೋಡ (65) ಪತ್ನಿಯ ನಾಗರತ್ನ (55) ಹಿರಿಯ…

ಅತ್ತಿಬೆಲೆ ಪಟಾಕಿ ದುರಂತ: ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ: ಒಂದೇ ಗ್ರಾಮದ 8 ವಿದ್ಯಾರ್ಥಿಗಳು ದಾರುಣ ಸಾವು: ಇಂದು ದುರಂತ ಸ್ಥಳಕ್ಕೆ ಸಿಎಂ ಭೇಟಿ

ಬೆಂಗಳೂರು : ನಗರದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಿನ್ನೆ ನಡೆದ ಪಟಾಕಿ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಕಾರ್ಮಿಕರ ಪೈಕಿ 8 ಮಂದಿ ವಿದ್ಯಾರ್ಥಿಗಳು ಕೂಡ ಬಲಿಯಾಗಿದ್ದು,ಈ ವಿದ್ಯಾರ್ಥಿಗಳು ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆ ಅಮ್ಮಪಟ್ಟಿ ಗ್ರಾಮದವರು…

ಹೆಬ್ರಿ ಸಂತೆಕಟ್ಟೆ: ಗ್ರಾಮ ವನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ಗೆ ಮಾಲಕನ ಜತೆಗೆ ಅಕ್ರಮ ಸಂಬಂಧದ ಆರೊಪ ಹೊರಿಸಿ ಜಾತಿ ನಿಂದನೆ: ಸೈಬರ್ ಮಾಲಕನ ಪತ್ನಿ ವಿರುದ್ಧ ದೂರು

ಹೆಬ್ರಿ: ಗ್ರಾಮ ವನ್ ಸೇವಾ ಕೇಂದ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಶಿಷ್ಟ ಪಂಗಡದ ಯುವತಿಗೆ ಸೇವಾ ಕೇಂದ್ರದ ಮಾಲಕನ ಜತೆಗೆ ಅಕ್ರಮ ಸಂಬಂಧವಿದೆ ಎನ್ನುವ ಸುಳ್ಳು ಆರೋಪ ಮಾಡಿರುವ ವಿಚಾರದಲ್ಲಿ ಮಾಲಕನ ಪತ್ನಿಯ ವಿರುದ್ಧ ಯುವತಿ ನೀಡಿರುವ ದೂರಿನ ಮೇರೆಗೆ ಹೆಬ್ರಿ ಪೊಲೀಸ್…

ಪರೀಕ್ಷೆಯಲ್ಲಿ ಕಡಿಮೆ ಅಂಕ ಕೊಟ್ಟಿದ್ದಕ್ಕೆ ನೀರಿನ ಬಾಟಲ್ ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!: ಶಿಕ್ಷಕಿಯರಿಬ್ಬರು ಅಸ್ವಸ್ಥ

ಮಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿನಿಯರಿಬ್ಬರು ಶಿಕ್ಷಕರ ಕುಡಿಯುವ ನೀರಿನ ಬಾಟಲ್ ಗೆ ಅವಧಿ ಮೀರಿದ ಮಾತ್ರೆಗಳನ್ನು ಹಾಕಿದ ಪರಿಣಾಮ ಅದೇ ನೀರು ಕುಡಿದು ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ಅಸ್ವಸ್ಥಗೊಂಡಿರುವ ಘಟನೆ ದಕ್ಷಿಣ ಕನ್ನಡ…

ಮುದ್ರಾಡಿ: ಅಪರಿಚಿತ ವಾಹನ ಡಿಕ್ಕಿಯಾಗಿ  ರಸ್ತೆ ದಾಟುತ್ತಿದ್ದ ಚಿರತೆ ಸಾವು

ಕಾರ್ಕಳ:ರಸ್ತೆ ದಾಟುತ್ತಿದ್ದ ಚಿರತೆಯೊಂದಕ್ಕೆ ವೇಗವಾಗಿ ಸಾಗುತಿದ್ದ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದೆ. ಹೆಬ್ರಿ ತಾಲೂಕಿನ ಮುದ್ರಾಡಿ ಸಮೀಪದ ಭಕ್ರೆಮಠ ಕ್ರಾಸ್ ಬಳಿ ಗುರುವಾರ ಸಂಜೆ ನಡೆದ ಅಪಘಾತಕ್ಕೆ ಚಿರತೆ ಬಲಿಯಾಗಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆ…