Category: ಅಪರಾಧ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕುಖ್ಯಾತ ಡ್ರಗ್ ಪೆಡ್ಲರ್​​ಗಳ ಬಂಧನ

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ ಎಮ್‌ಡಿಎಮ್‌ಎ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಕಾಟಿಪಳ್ಳ ನಿವಾಸಿ ಶಾಕೀಬ್ ಅಲಿಯಾಸ್ ಶಬ್ಬು (33), ಚೊಕ್ಕಬೆಟ್ಟು ನಿವಾಸಿ ನಿಸಾರ್ ಹುಸೈನ್ ಅಲಿಯಾಸ್ ನಿಚ್ಚು ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳ…

ಮಾಳ: ದಲಿತ ಮಹಿಳೆಯ ಜಾಗಕ್ಕೆ ಅಕ್ರಮ ಪ್ರವೇಶ: ಕೃಷಿ ನಾಶ ಮಾಡಿ ಜಾತಿ‌ ನಿಂದನೆ: ಪಿಡಿಓ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ:ದಲಿತ ಮಹಿಳೆಯ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಜೆಸಿಬಿ ಬಳಸಿ ಕೃಷಿ ನಾಶ ಮಾಡಿ ಜಾತಿನಿಂದನೆ ಹಾಗೂ ಜೀವಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ಪಿಡಿಓ ಸೇರಿ ಮೂವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

ಉಡುಪಿ : ಬಂಧನಕ್ಕೆ ಹೆದರಿ ಕೀಟನಾಶಕ ಸೇವನೆ- ಪೊಲೀಸ್ ವಾಹನದಲ್ಲಿ ಅಸ್ವಸ್ಥನಾದ ಆರೋಪಿ

ಉಡುಪಿ :ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರೆಂಟ್ ಪಡೆದು ಬಂಧಿಸಲು ಬಂದ ಸಂದರ್ಭದಲ್ಲಿ ಆರೋಪಿ ಕೀಟನಾಶಕ ಸೇವಿಸಿ ಅಸ್ವಸ್ಥನಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಡೆದಿದೆ . ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 2017ರಲ್ಲಿ ನಡೆದ ಅಪರಾಧ ಪ್ರಕರಣವೊಂದರ ಆರೋಪಿಯಾಗಿದ್ದ…

ಕಾರ್ಕಳ: ಪೋಕ್ಸೋ ಪ್ರಕರಣದ ಆರೋಪಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಪೋಕ್ಸೋ ಪ್ರಕರಣ ಒಂದರಲ್ಲಿ ಆರೋಪಿಯಾಗಿದ್ದ ಯುವಕನೋರ್ವ ಸೋಮವಾರ ಸಂಜೆ ತನ್ನ ಸಂಬAಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ಕಳದ ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲೊನಿ ನಿವಾಸಿ ಅಬ್ದುಲ್ ಎಂಬವರ ಮಗ ಮಹಮ್ಮದ್ ಯಾಸಿನ್ (22) ನೇಣು ಬಿಗಿದುಕೊಂಡು ಆತ್ಮಹತ್ಯೆ…

ಬೆಳ್ಮಣ್: ಅವಿವಾಹಿತ ನೇಣಿಗೆ ಶರಣು

ಕಾರ್ಕಳ,: ಅವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೆಳಣ್ ನ ಜಂತ್ರದಲ್ಲಿ ನಡೆದಿದೆ.ಜಂತ್ರ ನಿವಾಸಿ ಸಂತೋಷ ಆಚಾರ್ಯ (41) ಮೃತ ದುರ್ದೈವಿ. ಸಂತೋಷರವರು ಸುಮಾರು 10 ವರ್ಷದಿಂದ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು…

ಬಜಗೋಳಿ: ಸ್ಕೂಟಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ಮೂವರಿಗೆ ಗಾಯ

ಕಾರ್ಕಳ: ಚಲಿಸುತ್ತಿದ್ದ ಸ್ಕೂಟರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಸೇರಿ ಮೂವರಿಗೆ ಗಾಯಗಳಾಗಿವೆ. ನಲ್ಲೂರು ಗ್ರಾಮದ ಬೀರಾಲುಪೇಟೆ ಎಂಬಲ್ಲಿನ ನಿವಾಸಿ ಚೇತನಾ ಎಂಬವರು ಭಾನುವಾರ ಬೆಳಗ್ಗೆ 9.40ರ ಸುಮಾರಿಗೆ ತನ್ನ ಸ್ಕೂಟರಿನಲ್ಲಿ ಸಹಸವಾರಾಗಿ ಆಕೆಯ ಅಕ್ಕನಮಗ ಪ್ರಾಣೇಶ್ ಹಾಗೂ…

ಶಿರ್ಲಾಲು: ಹರ್ನಿಯಾ ಶಸ್ತ್ರಚಿಕಿತ್ಸೆ ಪಡೆದು ಮನೆಗೆ ಬಂದಿದ್ದ ಯುವಕ ಸಾವು

ಅಜೆಕಾರು: ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಮತ್ತೆ ಗಾಯ ಉಲ್ಬಣಗೊಂಡು ತೀವೃ ವಾಂತಿ ಹಾಗೂ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಮಾನಂದ…

ಬೆಳ್ಮಣ್: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ: ಪಾದಾಚಾರಿ ಸ್ಥಳದಲ್ಲೇ ಸಾವು

ಕಾರ್ಕಳ: ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿನ ಬೆಳ್ಮಣ್ ಎಂಬಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅತೀವೇಗವಾಗಿ ಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ವ್ಯಕ್ತಿ ತೀವೃವಾಗಿ ಗಾಯಗೊಂಡು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಕಾರು ಚಾಲಕ…

ಕಾರ್ಕಳ: ಕಳೆದುಹೋಗಿದ್ದ ಮೊಬೈಲ್ ಗಳನ್ನು ಮಾಲೀಕರಿಗೆ ಹಸ್ತಾಂತರ: ಕಾರ್ಕಳ ಪೊಲೀಸರ ಕ್ರಮಕ್ಕೆ ಶ್ಲಾಘನೆ

ಕಾರ್ಕಳ: ಕಳೆದುಹೋಗಿದ್ದ ಎರಡು ಮೊಬೈಲ್ ಗಳನ್ನು ಕಾರ್ಕಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಅವುಗಳನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಪವಿತ್ರಾ ಹೆಗ್ಡೆ ಎಂಬವರ ಮೊಬೈಲ್ ಕಳೆದುಹೋಗಿದ್ದು ಅವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು, ಇದಲ್ಲದೇ ಕಾರ್ಕಳ…

ಬೈಲೂರು: ಪಾನಮತ್ತ ಚಾಲಕನ ಕಾರು ಆವಾಂತರ: ತರಕಾರಿ ಅಂಗಡಿಗೆ ನುಗ್ಗಿದ ಕಾರು

ಕಾರ್ಕಳ:ಪಾನಮತ್ತ ಯುವಕನ ಆವಾಂತರದಿಂದ ಕಾರೊಂದು ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಬೆಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಮಲ್ಪೆಗೆ ಅತಿವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಲೂರಿನ‌ ತರಕಾರಿ ಅಂಗಡಿಗೆ ನುಗ್ಗಿದೆ. ಬೆಂಗಳೂರಿನಿಂದ 4…