Category: ಅಪರಾಧ

ಬೆಂಗಳೂರು, ಕೋಲಾರಗಳಲ್ಲಿ NIA ದಾಳಿ: ಉಗ್ರರಿಗೆ ನೆರವು ನೀಡುತ್ತಿದ್ದ  ಎಎಸ್‌ಐ ಸೇರಿ ಮೂವರ ಬಂಧನ

ಬೆಂಗಳೂರು: ಲಷ್ಕರೆ ತಯ್ಬಾ (LeT) ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಆರೋಪದಲ್ಲಿ NIA ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್‌, ಎಎಸ್‌ಐ…

ದಾವಣಗೆರೆ ಪಿಎಸ್‌ಐ ನಾಗರಾಜಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು: ಡೆತ್ ನೋಟ್ ನಲ್ಲಿ ಸ್ಪೋಟಕ ಸಂಗತಿ ಬಯಲು

ತುಮಕೂರು : ತುಮಕೂರಿನಲ್ಲಿ ದಾವಣಗೆರೆ ಪಿಎಸ್‌ಐ ನಾಗರಾಜಪ್ಪ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಡೆತಯ್ ನೋಟ್ ನಲ್ಲಿ ಸ್ಪೋಟಕ ಸಂಗತಿ ಬಯಲಾಗಿದೆ. ಮಗನ ಭವಿಷ್ಯದ ಕುರಿತು ಮನನೊಂದು ನಾಗರಾಜಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಅಂಶ ತುಮಕೂರು ನಗರ ಪೊಲೀಸರ…

ಕಾರ್ಕಳ:ಕಾರು ಮಾರಾಟ ವಿಚಾರದಲ್ಲಿ ವಂಚನೆ: ಪ್ರಕರಣ ದಾಖಲು

ಕಾರ್ಕಳ: ಕಾರನ್ನು ಮಾರಾಟ ಮಾಡಿದ ವ್ಯಕ್ತಿ ಹಣ ಪಡೆದ ಬಳಿಕ ಕಾರಿನ ದಾಖಲೆ ಪತ್ರವನ್ನು ವರ್ಗಾವಣೆ ಮಾಡದೇ ಹಾಗೂ ಪಡೆದ ಹಣವನ್ನು ಕೂಡ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ…

ಎರ್ಲಪಾಡಿಯಲ್ಲಿ ಆನ್‌ಲೈನ್‌ ಬೆಟ್ಟಿಂಗ್ ಗೇಮ್ ಮೇಲೆ ಪೊಲೀಸ್ ದಾಳಿ, ಪ್ರಕರಣ ದಾಖಲು

ಕಾರ್ಕಳ : ತಾಲೂಕಿನ ಎರ್ಲಪಾಡಿ ಗ್ರಾಮದ ಕಾಂತರಗೋಳಿ ಬಸ್‌ಸ್ಟ್ಯಾಂಡ್‌ ಬಳಿ ಆನ್‌ಲೈನ್‌ ಗೇಮಿಂಗ್‌ ಬೆಟ್ಟಿಂಗ್‌ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ನಿಖಿಲ್ ಎಂಬಾತ ತನ್ನ ಮೊಬೈಲ್‌ನಲ್ಲಿ PARKER ಎಂಬ ಮೊಬೈಲ್‌ ಆಪ್‌ ಸಹಾಯದಿಂದ ತನ್ನ ಮೊಬೈಲ್‌ ಪೋನ್‌ ಮೂಲಕ ಆನ್‌ಲೈನ್‌…

ಆನ್‌ಲೈನ್ ಮೂಲಕ ಹಣ ವಂಚನೆಗೆ 12 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡ ಕಾರ್ಕಳದ ಯುವಕ: ವಾಟ್ಸಾಪ್ ಮೂಲಕ ಉದ್ಯೋಗದ ಸಂರ್ದಶನದ ಮೆಸೇಜ್ ಕಳಿಸಿ ಹಣ ದೋಚಿದ ಭೂಪ

ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆನ್‌ಲೈನ್ ವಂಚನೆಗಳು ನಡೆಯುತ್ತಿದ್ದರೂ ಜನ ಮಾತ್ರ ಇನ್ನೂ ಬುದ್ಧಿ ಕಲಿತ್ತಿಲ್ಲ. ಕಾರ್ಕಳದ ನವೀನ್ ಎಂಬ ಯುವಕ ಆನ್‌ಲೈನ್ ವಂಚನೆಯ ಜಾಲಕ್ಕೆ ಬಲಿಬಿದ್ದು ಬರೋಬ್ಬರಿ 12 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡಿರುವ ಪ್ರಕರಣ ನಡೆದಿದೆ. ನವೀನ್ ಎಂಬವರಿಗೆ…

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿ ಅಬ್ದುಲ್ ರಹಿಮಾನ್ ಬಂಧನ: ಹಂತಕ ವಿದೇಶದಿಂದ ಬಂದಿಳಿಯುತ್ತಿದ್ದಂತೆಯೇ NIA ಬಲೆಗೆ

ಮಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಮತ್ತೊಬ್ಬ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್​ನನ್ನು ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಬಂಧಿಸಿದ್ದಾರೆ. ಕತಾರ್​ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್…

ರಕ್ತಕ್ಕೆ ರಕ್ತವೇ ಬೇಕು ಎನ್ನುವ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ ಕಾರ್ಕಳದ ಯುವಕನ ಬಂಧನ

ಮಂಗಳೂರು: ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸ್ಪೆಷಲ್ ಆಕ್ಷನ್ ಫೋರ್ಸ್ ಸ್ಥಾಪಿಸಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸಲಾದ ಸ್ಪೆಷಲ್ ಆಕ್ಷನ್ ಫೋರ್ಸ್ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಮೇಲೆ ನಿಗಾ ಇರಿಸಿದ್ದು, ಪ್ರಚೋದನಾಕಾರಿ ಪೋಸ್ಟ್ ಹಾಕಿದ…

ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುವ ಆತಂಕ: ಡ್ರಗ್ಸ್ ದಂಧೆಯ ವಿರುದ್ಧ ಸಿಡಿದೆದ್ದ ಪೋಷಕರು: ಮಂಗಳೂರು ಪೊಲೀಸರ ಮಿಂಚಿನ ಕಾರ್ಯಾಚರಣೆ: ಐವರು ಡ್ರಗ್ಸ್ ದಂಧೆಕೋರರ ಬಂಧನ,5 ಲಕ್ಷಕ್ಕೂ ಮಿಕ್ಕಿ ಡ್ರಗ್ಸ್ ವಶಕ್ಕೆ

ಮಂಗಳೂರು: ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಮಂಗಳೂರು ಸೆನ್ ಕ್ರೈಂ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ನೂರಾರು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ. ಪೋಷಕರ ದೂರು ಆಧರಿಸಿ…

ಹೆಬ್ರಿ: ವರ್ಕ್ ಫ್ರಂ ಹೋಂ ಹೆಸರಿನಲ್ಲಿ ವ್ಯಕ್ತಿಗೆ 2 ಲಕ್ಷಕ್ಕೂ ಅಧಿಕ  ವಂಚನೆ

ಹೆಬ್ರಿ: ವರ್ಕ್ ಫ್ರಂ ಹೋಂ ಹೆಸರಿನಲ್ಲಿ ಡಾಟಾ ಎಂಟ್ರಿ ಕೆಲಸ ಕೊಡುವುದಾಗಿ ನಂಬಿಸಿ ಹೆಬ್ರಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಬ್ರಿಯ ರಮೇಶ್ ಎಂಬವರು ಕಳೆದ 2024ರ ಡಿಸೆಂಬರ್ ರಲ್ಲಿ ಮೊಬೈಲ್‌ನಲ್ಲಿ ಲೋಕಲ್‌ ಜಾಬ್‌ ಯಾಪ್‌ ನಲ್ಲಿ…

ಎನ್ ಸಿ ಬಿ ಯಿಂದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: 8 ಜನರ ಬಂಧನ- ಉಡುಪಿಯಿಂದಲೇ ಜಾಲ ಕಾರ್ಯಾಚರಣೆ ಶಂಕೆ

ಉಡುಪಿ: ಉಡುಪಿ ಸೇರಿ ದೇಶದ 4 ಕಡೆಗಳಿಂದ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವನ್ನು ಬೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಉಡುಪಿಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಜಾಲ ಕಾರ್ಯಾಚರಣೆ ಶಂಕೆ ವ್ಯಕ್ತವಾಗಿದ್ದು, 8 ಜನರನ್ನು ಬಂಧಿಸಲಾಗಿದೆ. ಕಾಲ್ ಸೆಂಟರ್‌ನಂತೆ ಕಾರ್ಯನಿರ್ವಹಿಸುತ್ತಿದ್ದ…