Category: ಅಪರಾಧ

ಪಾಕಿಸ್ತಾನ ಪರ ಬೇಹುಗಾರಿಕೆ; ಭಾರತದ ಯೂಟ್ಯೂಬರ್ ಬಂಧನ

ಚಂಡೀಗಢ: ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಹರಿಯಾಣ ಮೂಲದ ಯೂಟ್ಯೂಬರ್ ಸೇರಿ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಜ್ಯೋತಿ ಮಲ್ಹೋತ್ರಾ ಹಾಗೂ ಗುಜಾಲಾ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಭಾರತೀಯ ಸೇನೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎಂದು…

ಮಗುವಿನ ಅನಾರೋಗ್ಯದ ಚಿಂತೆ: ವರಂಗ ಮಾತಿಬೆಟ್ಟಿನಲ್ಲಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷ ಪ್ರಾಯದ ತನ್ನ ಹೆಣ್ಣು ಮಗುವಿನ ಭವಿಷ್ಯದ ಚಿಂತೆಯಿಂದ ಮನನೊಂದ ಮಗುವಿನ ತಾಯಿ ತನ್ನ 6 ತಿಂಗಳ ಇನ್ನೊಂದು ಹಸುಗೂಸನ್ನು ಕೂಡ ಬಿಟ್ಟು ನೇಣಿಗೆ ಶರಣಾದ ದಾರುಣ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮಾತಿಬೆಟ್ಟು…

ಕಾರ್ಕಳ ಸ್ಪಂದನ ಆಸ್ಪತ್ರೆಯಲ್ಲಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ:ಮೃತ ಮಹಿಳೆಯ ಸಂಬಂಧಿಕರಿಂದ ವೈದ್ಯರ ವಿರುದ್ಧ ಆಕ್ರೋಶ

ಕಾರ್ಕಳ:ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿನ ಗಡ್ಡೆಯನ್ನು ಹೊರತೆಗೆಯುವ ಸಂದರ್ಭದಲ್ಲಿ ವಿಪರೀತ ರಕ್ತಸ್ರಾವದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯಲ್ಲಿ ವೈದ್ಯರ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಘಟನೆ ಕಾರ್ಕಳದ ಸ್ಪಂದನ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ.…

ನಿಟ್ಟೆ: ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವು

ಕಾರ್ಕಳ: ಬೈಕ್ ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಬೈಕ್ ಸವಾರ ಮೃತಪಟ್ಟಿದ್ದಾರೆ. ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ (ಮೇ.13) ರಂದು ಈ ದುರ್ಘಟನೆ ಸಂಭವಿಸಿದ್ದು, ಶ್ರೇಯಾನ್‌ ಎಂಬಾತ ಬೈಕಿನಲ್ಲಿ ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ನಿಟ್ಟೆ…

ನಿಟ್ಟೆ ಕಾಲೇಜಿನ ದೇಶದ್ರೋಹಿ ಗೋಡೆ ಬರಹದ ಪ್ರಕರಣ ಹಳ್ಳ ಹಿಡಿದಿರುವ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈವಾಡದ ಶಂಕೆ: ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಗಂಭೀರ ಆರೋಪ

ಕಾರ್ಕಳ: ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲಿನ ಗೋಡೆಯ ಮೇಲೆ ದೇಶದ್ರೋಹಿ ಹಾಗೂ ಹಿಂದೂ ವಿರೋಧಿ ಗೋಡೆಬರಹ ಬರೆದ ಪ್ರಕರಣ ನಡೆದು ಇಷ್ಟು ದಿನಗಳಾದರೂ ಯಾವುದೇ ಸುಳಿವು ಇಲ್ಲದಿರುವುದು ಈ ಪ್ರಕರಣ ಮುಚ್ಚಿ ಹಾಕುವ ತಂತ್ರಗಾರಿಕೆ ನಡೆಯತ್ತಿದೆಯೇ ಎನ್ನುವ ಸಂಶಯ ಮೂಡಿದೆ. ಇಂತಹ…

ಪ್ರಧಾನಿ ಮೋದಿ ಮನೆಯ ಮೇಲೆ ಪಾಕಿಸ್ತಾನ ಮೊದಲು ಬಾಂಬ್ ಹಾಕಬೇಕಿತ್ತು ಎಂಬ ವಿಡಿಯೋ ವೈರಲ್: ಬೆಂಗಳೂರಿನಲ್ಲಿ ಆರೋಪಿ ನವಾಝ್ ಎಂಬಾತನ ಬಂಧನ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದ ಯುವಕನನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮೋದಿಯ ಮನೆಗೆ ಬಾಂಬ್ ಹಾಕಬೇಕು ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿ ನವಾಝ್ ಎಂಬಾತನ…

ಪಡುಬಿದ್ರೆ :ಮದುವೆ ಸಮಾರಂಭದ ವೇಳೆ ದುರ್ಘಟನೆ: ದೇವಾಲಯದ ಕೆರೆಯಲ್ಲಿ ಮುಳುಗಿ 4 ವರ್ಷದ ಮಗು ಸಾವು

ಪಡುಬಿದ್ರೆ : ವಿವಾಹ ಸಮಾರಂಭದ ವೇಳೆ ದೇವಾಲಯದ ಕೆರೆಯ ಬಳಿ ಆಕಸ್ಮಿಕವಾಗಿ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ನಂದಿಕೂರಿನಲ್ಲಿ ನಡೆದಿದೆ. ಮೃತಪಟ್ಟ ಮಗುವನ್ನು ಕಾಪು, ಕುರ್ಕಾಲು ಗ್ರಾಮದ ನಿವಾಸಿಗಳಾದ ಸತ್ಯನಾರಾಯಣ (38) ಮತ್ತು ಸೌಮ್ಯ ಅವರ ಪುತ್ರ ವಾಸುದೇವ (4) ಎಂದು…

ಬೆಳ್ಳಾರೆ: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಪಿಕಪ್

ಸುಳ್ಯ: ಬೆಳ್ಳಾರೆ ಸಮೀಪದ ನೆಟ್ಟಾರು ಎಂಬಲ್ಲಿ ಪಿಕಪ್ ವಾಹನವೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಹೋದ ಘಟನೆ ಭಾನುವಾರ ಸಂಭವಿಸಿದೆ. ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ನೆಟ್ಟಾರು ತಿರುವಿನಲ್ಲಿ ಆಕಸ್ಮಿಕವಾಗಿ ಎದುರು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ…

ಉಪ್ಪಿನಂಗಡಿ: ಚಾಕುವಿನಿಂದ ಇರಿದು ಯುವಕನ ಕೊಲೆ ಪ್ರಕರಣ; ಆರೋಪಿಯ ಬಂಧನ

ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಶುಕ್ರವಾರ ಶರತ್ ಕುಮಾರ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ವಿಚಾರಕ್ಕೆಸಂಬಂಧಿಸಿ ಚಿಕ್ಕಪ್ಪನ ಮನೆಮಂದಿಯೊAದಿಗೆ ಜಗಳವಾಡುತ್ತಿದ್ದ ಶರತ್…

ಕಾರ್ಕಳ: ಮಾಳದಲ್ಲಿ ಬೈಕಿಗೆ ಟೆಂಪೋ ಢಿಕ್ಕಿಯಾಗಿ ಸವಾರ ಸಾವು

ಕಾರ್ಕಳ: ತಾಲೂಕಿನ ಮಾಳ ಗ್ರಾಮದ ಮಂಜಲ್ತಾರ್ ಎಂಬಲ್ಲಿ ಬೈಕಿಗೆ ಟೆಂಪೋ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ರಾಘವೇಂದ್ರ ಎಂಬವರು ಭಾನುವಾರ ಸಂಜೆ ಬೈಕಿನಲ್ಲಿ ಮಾಳದ ಮಂಜಲ್ತಾರ್ ಎಂಬಲ್ಲಿ ಹೋಗುತ್ತಿದ್ದಾಗ ಮಾಳಚೌಕಿ-ಬಜಗೋಳಿ ರಸ್ತೆಯಲ್ಲಿ ಅತೀವೇಗವಾಗಿ ಬಂದ ಟೆಂಪೋ ರಾಘವೇಂದ್ರ ಅವರ…