ಕಾರ್ಕಳ: ತಾಲೂಕಿನ ಮಾಳ ಗ್ರಾಮದ ಮಂಜಲ್ತಾರ್ ಎಂಬಲ್ಲಿ ಬೈಕಿಗೆ ಟೆಂಪೋ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ರಾಘವೇಂದ್ರ ಎಂಬವರು ಭಾನುವಾರ ಸಂಜೆ ಬೈಕಿನಲ್ಲಿ ಮಾಳದ ಮಂಜಲ್ತಾರ್ ಎಂಬಲ್ಲಿ ಹೋಗುತ್ತಿದ್ದಾಗ ಮಾಳಚೌಕಿ-ಬಜಗೋಳಿ ರಸ್ತೆಯಲ್ಲಿ ಅತೀವೇಗವಾಗಿ ಬಂದ ಟೆಂಪೋ ರಾಘವೇಂದ್ರ ಅವರ ಬೈಕಿಗೆ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಾಘವೇಂದ್ರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕಾರ್ಕಳ ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರವಾದ ಏಟು ಬಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.