
ಕಾರ್ಕಳ,ಮೇ.16: ಕಾರ್ಕಳ ಜೋಡುರಸ್ತೆಯಲ್ಲಿರುವ ಟೈರ್ ಮಾರ್ಟ್ ಹೆಸರಿನ ಟಯರ್ ಅಂಗಡಿ ಮಾಲೀಕನಿಗೆ ಆತನ ಮ್ಯಾನೇಜರ್ ಹಣ ದುರುಪಯೋಗಪಡಿಸಿಕೊಂಡು ವಂಚನೆ ಎಸಗಿದ್ದು, ಅದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಪ್ರಕರಣ ಕಾರ್ಕಳದಲ್ಲಿ ನಡೆದಿದೆ.
ಗರುವಾಯನಕೆರೆಯ ಅಪ್ಸರ್ ಪಿ.ಕೆ ಅವರು ಕಾರ್ಕಳದ ಜೋಡುರಸ್ತೆಯಲ್ಲಿ ಟೈರ್ ಮಾರ್ಟ್ ಎಂಬ ಅಂಗಡಿ ನಡೆಸುತ್ತಿದ್ದು, ಮಹಮದ್ ಸಿಯಾನ್ ಎಂಬಾತ ಮ್ಯಾನೇಜರ್ ಕೆಲಸ ಮಾಡುತ್ತಿದ್ದ. ಆತ ಅಂಗಡಿಯ ಹಣವನ್ನು ದುರುಪಯೋಗಿಸಿಕೊಂಡಿದ್ದು, ಅದನ್ನು ಅಪ್ಸರ್ ಪ್ರಶ್ನಿಸಿದಾಗ ಹಣ ತೆದಿಲ್ಲವೆಂದು ಉಡಾಫೆಯ ಉತ್ತರ ನೀಡಿದ್ದ. ಆ ಬಳಿಕ ಮೇ.7 ರಂದು ಆತನ ತಮ್ಮ ಸಾಹಿಲ್ ಎಂಬಾತ ಅಂಗಡಿಯಲ್ಲಿ ಕೆಲಸ ಮಾಡುವ ರಿಫಾದ್ ಎಂಬುವನ ಮೊಬೈಲ್ ಕರೆ ಮಾಡಿ ಅಪ್ಸರ್ ಮತ್ತು ಅವರ ತಾಯಿಗೆ “ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ಅಂಗಡಿಗೆ ಬೆಂಕಿ ಹಾಕಿ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಆ ನಂತರ ಸಂಜೆ ಕಾರ್ಕಳ ಪೊಲೀಸ್ ಠಾಣೆಯ ಹೊರಗಡೆ ರಸ್ತೆಯಲ್ಲಿ ಇಕ್ಬಾಲ್ ಎಂಬವರ ಜೊತೆ ನಿಂತಿದ್ದ ಅಪ್ಸರ್ ಪಿ.ಕೆ ಅವರಿಗೆ ಮಹಮದ್ ಸಿನಾನ್ ಜೊತೆ ಬಂದಿದ್ದ ಅಕೀಬ್ ಎಂಬುವನು ಜೀವ ಬೆದರಿಕೆ ಹಾಕಿದ್ದಾನೆ.ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
