
ಕಾರ್ಕಳ,ಮೇ.16: ಬಜಗೋಳಿ ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವು ಇಂದು ಬಜಗೋಳಿಯ ಗಣಪತಿ ಸಭಾ ಭವನದಲ್ಲಿ ಉದ್ಘಾಟನೆಗೊಂಡಿತು.
ಹರಿಶ್ಚಂದ್ರ ತೆಂಡೂಲ್ಕರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೂಪಾ.ಆರ್. ಶೆಟ್ಟಿ, ವಲಯದ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ,ಜನಜಾಗೃತಿ ವಲಯದ ಅಧ್ಯಕ್ಷರಾದ ಅನಿಲ್ ಎಸ್ ಪೂಜಾರಿ, ಯೋಜನಾ ಕಚೇರಿಯ ಮೆನೇಜರ್ ಸೌಮ್ಯ, ಜಯಶ್ರೀ, ಜನಜಾಗೃತಿಯ ನೂತನ ಉಪಾಧ್ಯಕ್ಷ ಹಿತೇಶ್ ಶೆಟ್ಟಿ, ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕರಾದ ಶಿವರಾಮ್, ವಿದ್ಯಾರ್ಥಿಗಳ ಪೋಷಕರು, ಒಕ್ಕೂಟ ಪದಾಧಿಕಾರಿಗಳು ,ಸೇವಾಪ್ರತಿನಿಧಿಗಳು, ಗ್ರಾಮಸ್ಥರು ಗ್ರಾಮಾಭಿವೃದ್ಧಿ ಯೋಜನೆಯ,ಜನಜಾಗ್ರತಿ ವೇದಿಕೆಯ,ಭಜನಾ ಪರಿಷತ್ತಿನ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸದಾನಂದ ಕೋಟ್ಯಾನ್ ಸ್ವಾಗತಿಸಿ, ಸುಮಿತ್ರ ಧನ್ಯವಾದವಿತ್ತರು.ಭಜನಾ ಪರಿಷತ್ತಿನ ಜಿಲ್ಲಾ ಸಮಾನಾಧಿಕಾರಿ ಸಂತೋಷ್ ಪಿ ಅಳಿಯ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 142 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.



.
.
.
.
.
.
.
.
.
.
.
.
.
.
.
.
.
.
.
.
