
ಕಾರ್ಕಳ, ಮೇ.16: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಕಳ ತಾಲೂಕಿನಲ್ಲಿ ಇಬ್ಬರು ಮದ್ಯವ್ಯಸನಿ ವ್ಯಕ್ತಿಗಳು ಮೃತಪಟ್ಟಿದ್ದಾರೆ.ಪಳ್ಳಿಯ ಉಮೇಶ್ ನಾಯ್ಕ್(59) ಹಾಗೂ ಕಲ್ಯಾ ಕುಂಟಾಡಿಯ ಶೇಖರ ಪೂಜಾರಿ (72) ಮೃತಪಟ್ಟವರು.
ಪಳ್ಳಿ ಗ್ರಾಮದ ನೂಜಿಮನೆ ನಿವಾಸಿ ಉಮೇಶ ನಾಯ್ಕ ಅವರು ವಿಪರೀತ ಕುಡಿತದ ಚಟ ಹೊಂದಿದ್ದು,ಕುಡಿದು ಎಲ್ಲೆಂದರಲ್ಲಿ ಬೀಳುತ್ತಿದ್ದರು. ಮೇ.13ರಂದು ರಾತ್ರಿ ಎಂದಿನಂತೆ ಕುಡಿದು ಬಂದು ಮನೆಯ ಹಿಂಬದಿ ಕಲ್ಲಿನ ಬಳಿ ಬಿದ್ದು ಪ್ರಜ್ಞೆ ತಪ್ಪಿದ್ದವರನ್ನು ಮರುದಿನ ಬೆಳಿಗ್ಗೆ ಮನೆಯವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ನಂತರ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದೆ ಉಮೇಶ ಮೃತಪಟ್ಟಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕುಂಟಾಡಿಯ ಶೇಖರ ಪೂಜಾರಿ ಅವರು ಮದ್ಯಪಾನ ಮಾಡುವ ಚಟ ಹೊಂದಿದ್ದು, ಮೇ. 15 ರಂದು ರಾತ್ರಿ ಮನೆಯ ಕೊಟ್ಟಿಗೆಯ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
