Category: ಅಪರಾಧ

ಉಡುಪಿಯಲ್ಲಿ ಘೋರ ದುರಂತ : ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

ಉಡುಪಿ,ಡಿ.17: ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉಡುಪಿ ನಗರದ ಕಿನ್ನಿಮೂಲ್ಕಿ ಬಳಿ ನಡೆದಿದೆ. ಒಂದೂವರೆ ವರ್ಷದ ಕೀರ್ತನ ಮೃತ ಕಂದಮ್ಮ. ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ತಾಯಿ ಕೈಯಿಂದ ಜಾರಿ ಮಗು ಬಾವಿಗೆ…

ತುಮಕೂರು, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಡಿಸಿ ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ಬೆಂಗಳೂರು,ಡಿ.16: ರಾಜ್ಯದ ಹಲವು ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ತುಮಕೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಪಾಕಿಸ್ತಾನದ ಐಎಸ್‌ಐ ಬ್ರ‍್ಯಾಂಚ್ ಇನ್ ತಮಿಳುನಾಡು ಹೆಸರಿನಲ್ಲಿ ಈ ಬಾಂಬ್ ಬೆದರಿಕೆ ಇ-ಮೇಲ್…

ಗೂಡ್ಸ್ ವಾಹನದಲ್ಲಿ ಕಟ್ಟಡ ಕಾರ್ಮಿಕರ ಸಾಗಾಟ: ಕಾರ್ಕಳ ನಗರ ಪೊಲೀಸರ ಕಾರ್ಯಾಚರಣೆ: 10ಸಾವಿರ ದಂಡ

ಕಾರ್ಕಳ,ಡಿ.15 : ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಸಲಕರಣೆಗಳು ಹಾಗೂ ಕಾಂಕ್ರೀಟ್ ಯಂತ್ರಗಳನ್ನು ತುಂಬಿಸಿ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಮಾಲೀಕನ ವಿರುದ್ಧ ಕಾರ್ಕಳ ಪೊಲೀಸರು ಕೇಸ್ ದಾಖಲಿಸಿಕೊಂಡು 10 ಸಾವಿರ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದ್ದಾರೆ. ವಾಹನ ಮಾಲೀಕ ನಾಗಪ್ಪ ಎಂಬವರು…

ನೆಲ್ಲಿಕಟ್ಟೆ: ಮದ್ಯವ್ಯಸನಿ ಕುಸಿದು ಬಿದ್ದು ಸಾವು

ಕಾರ್ಕಳ,ಡಿ.15: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಕೊರಳ ಮನೆ ನಿವಾಸಿ ದಯಾನಂದ ಮೂಲ್ಯ (52) ಮೃತಪಟ್ಟವರು. ಅವರು ಮನೆಯ ಸಮೀಪದಲ್ಲಿ ಕ್ಯಾಂಟೀನ್‌ ನಡೆಸಿ ಜೀವನ ನಡೆಸುತ್ತಿದ್ದು ಇವರು ಕಳೆದ 25 ವರ್ಷಗಳಿಂದ ಮದ್ಯಪಾನದ…

ನಲ್ಲೂರು: ವಾಹನ ಸಹಿತ ಅಕ್ರಮ ಮರಳು ವಶ 

ಕಾರ್ಕಳ,ಡಿ.14:ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡು 8 ಸಾವಿರ ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ. ನಲ್ಲೂರು ಕಿಂಡಿ ಅಣೆಕಟ್ಟು ಸಮೀಪದ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಗೂಡ್ಸ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುವ ಕುರಿತು…

ಹೆಬ್ರಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ, ಪ್ರಕರಣ ದಾಖಲು

ಹೆಬ್ರಿ,ಡಿ12: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಚಾಕ್ಟಿಕಟ್ಟೆ ಪೇಟೆಯ ಬಳಿ ಮಟ್ಕಾ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೆಬ್ರಿ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ (ತನಿಖೆ) ಚಂದ್ರ ಎ ಕೆ ಅವರಿಗೆ ಬಂದ ಮಾಹಿತಿಯ…

ಶಿರ್ಲಾಲು: ಬೈಕಿನಲ್ಲಿ ಹೋಗುತ್ತಿದ್ದಾಗ ಬಿದ್ದು ಗಾಯಗೊಂಡಿದ್ದ ವ್ಯಕ್ತಿ: ಚಿಕಿತ್ಸೆ ಫಲಿಸದೆ ಸಾವು

ಕಾರ್ಕಳ,ಡಿ,11: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಸ್ವಸ್ಥ ವ್ಯಕ್ತಿಯೊಬ್ಬರು ಬೈಕಿನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಶಿರ್ಲಾಲು ನಿವಾಸಿ ಸದಾನಂದ ಪೂಜಾರಿ (60) ಮೃತಪಟ್ಟವರು. ಸದಾನಂದ ಅವರ ಹೊಟ್ಟೆಯಲ್ಲಿ ಗಡ್ಡೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಡಿ.5 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್…

ಹಳೆಯ ಅಲ್ಯೂಮಿನಿಯಂ, ತಾಮ್ರದ ಗುಜರಿ ಸಾಮಾಗ್ರಿಗಳನ್ನು ಖರೀಸುವ ಕಂಪೆನಿಗೆ ಕೋಟ್ಯಾಂತರ ರೂ ವಂಚನೆ: ಕಾರ್ಕಳದ ಉದ್ಯಮಿಯಿಂದ ನ್ಯಾಯಾಲಯದಲ್ಲಿ ಖಾಸಗಿ ದೂರು

ಕಾರ್ಕಳ,ಡಿ.11: ಕಾರ್ಕಳ ಪುಲ್ಕೇರಿಯಲ್ಲಿರುವ ಹಳೆಯ ಅಲ್ಯೂಮಿನಿಯಂ, ತಾಮ್ರ ಹಾಗೂ ಇನ್ನಿತರ ಹಳೆಯ ಸಾಮಾಗ್ರಿಗಳನ್ನು ಖರೀದಿ ಮಾಡುವ ಗೋಬ್ಲಲ್ ಸ್ಟಾರ್‌ಸ್ ಇಂಡ್‌ಮೆಟಲ್ ಪ್ರೈ.ಲಿಮಿಟೆಡ್ ಕಂಪೆನಿಗೆ ಕೇರಳದ ಕಂಪೆನಿಯೊAದು ಕೋಟ್ಯಾಂತರ ರೂ. ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ನ್ಯಾಯಾಲಯದ ಖಾಸಗಿ…

ಕುಕ್ಕುಂದೂರು: ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ (ಡಿ.10) ನಡೆದಿದೆ. ಕುಕ್ಕುಂದೂರು ಗ್ರಾಮದ ಗ್ರೀನ್‌ಲ್ಯಾಂಡ್‌ ಫ್ಯಾಕ್ಟರಿ ಬಳಿಯ ನಿವಾಸಿ ದಿನಕರ ಪೂಜಾರಿ(50) ಮೃತಪಟ್ಟವರು. ಅವರು ಬುಧವಾರ ಸಂಜೆ 7 ಗಂಟೆಗೆ…

ಕಾರ್ಕಳ: ಅಕ್ರಮ ಕಸಾಯಿಖಾನೆಗೆ ಗೋವುಗಳನ್ನು ಮಾರಾಟ ಮಾಡಿದ್ದಾತನ ಬಂಧನ

ಕಾರ್ಕಳ, ಡಿ.10: ಕಾರ್ಕಳ ತಾಲೂಕಿನ ನಲ್ಲೂರಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಯಲ್ಲಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿ ಆಶ್ರಫ್ ಆಲಿ ಎಂಬಾತನ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ ಇದೀಗ ಅಕ್ರಮ ಕಸಾಯಿಖಾನೆಗೆ ಗೋವುಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ನಲ್ಲೂರಿನ…