Category: ಸ್ಥಳೀಯ ಸುದ್ದಿಗಳು

ನಾಡ್ಪಾಲು: ಮದ್ಯವ್ಯಸನಿ ಬಾವಿಗೆ ಹಾರಿ ಆತ್ಮಹತ್ಯೆ

ಹೆಬ್ರಿ: ಹೆಬ್ರಿಯ ನಾಡ್ಪಾಲು ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಡ್ಪಾಲು ನಿವಾಸಿ ಉಮೇಶ (52ವ) ಆತ್ಮಹತ್ಯೆ ಮಾಡಿಕೊಂಡವರು. ಉಮೇಶ ರವರು ಕೂಲಿ ಕೆಲಸ ಮಾಡಿಕೊಂಡಿದ್ದು ವಿಪರಿತ ಮದ್ಯಪಾನ ಮಾಡುವ ಚಟ ಹೊಂದಿದ್ದರು. ಅವರು ಮಾನಸಿಕವಾಗಿ ಮನನೊಂದು ಜೀವನದಲ್ಲಿ…

ಕಾರ್ಕಳದಲ್ಲಿ 69ನೇ ಕನ್ನಡ ರಾಜ್ಯೋತ್ಸವ: ಕನ್ನಡ ವ್ಯಾವಹಾರಿಕ ಭಾಷೆಯಾಗಿ ಬೆಳೆಯಲಿ: ತಹಶಿಲ್ದಾರ್ ಡಾ.ಪ್ರತಿಭಾ ಆರ್

ಕಾರ್ಕಳ: ಕನ್ನಡಿಗರ ಹೆಗ್ಗುರುತು ಕನ್ನಡ ಭಾಷೆಯ ಉಳಿವು ನಮ್ಮೆಲ್ಲರ ಹೊಣೆಯಾಗಿದೆ .ಅಖಂಡ ಕರ್ನಾಟಕದ ಉಳಿವಿಗಾಗಿ ಕನ್ನಡಿಗರು ಕಂಕಣಬದ್ಧರಾಗಬೇಕು, ಕನ್ನಡ ಅಮೃತ ಭಾಷೆಯಾಗಿ ಮನೆ-ಮನಗಳಲ್ಲಿ ರಾರಾಜಿಸಲಿ.ಸ್ಪಷ್ಟ ಕನ್ನಡ, ಸ್ಪುಟ ಕನ್ನಡ ನಮ್ಮ ನಾಲಿಗೆಗಳಲ್ಲಿ ನಲಿದಾಡಲಿ. ಅಖಂಡ ಕರ್ನಾಟಕ ಇನ್ನಷ್ಟು ಬಲಿಷ್ಟಗೊಳ್ಳಲು ಶ್ರಮಿಸೋಣ ಎಂದು…

ಫುಟ್ ಬಾಲ್ ನಲ್ಲಿ ಜ್ಞಾನಸುಧಾದ ಪ್ರಣೀತ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಡುಪಿ : ದ ನ್ಯಾಶನಲ್ ಸ್ಪೊರ್ಟ್ಸ್ ಪ್ರೊಮೊಶನ್ ಆರ್ಗನೈಸೇಶನ್ (ಎನ್.ಎಸ್.ಪಿ.ಒ) ಧಾರವಾಡದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದಫುಟ್ ಬಾಲ್ ಟೂರ್ನ್ಮೆಂಟ್‌ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದಪ್ರಣೀತ್ ಯು. ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಇವರು ಅಯ್ಯಪ್ಪ ನಗರದ ಉಮೇಶ್ ಶೆಟ್ಟಿ…

ನಿಟ್ಟೆ ಕಾಲೇಜಿನಲ್ಲಿ ಯುಜಿ ಪ್ರಾಜೆಕ್ಟ್ಸ್ ಎಕ್ಸ್ಪ್ರೊ 2024-25

ಕಾರ್ಕಳ : ಪ್ರಪಂಚದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದು ಸಾಸ್ಕೆನ್ ಟೆಕ್ನಾಲಜೀಸ್ ಲಿಮಿಟೆಡ್ನ ಕ್ಯಾಂಪಸ್ ಕನೆಕ್ಟ್ ಮುಖ್ಯಸ್ಥ ಗುರುರಾಜ್ ರಾವ್ ಎಚ್ ಅಭಿಪ್ರಾಯಪಟ್ಟರು. ಅವರು ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ತನ್ನ ಹಳೆಯ ವಿದ್ಯಾರ್ಥಿಗಳ ಸಂಘವಾದ…

ಕಾರ್ಕಳ: ಸ್ಕೂಟರ್‌ಗೆ ಕಾರಿನ ಬಾಗಿಲು ಬಡಿದು ಸವಾರನಿಗೆ ಗಂಭೀರ ಗಾಯ

ಕಾರ್ಕಳ: ರಸ್ತೆಯಲ್ಲಿ ಸ್ಕೂಟರ್ ಚಲಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಬಾಗಿಲನ್ನು ಏಕಾಏಕಿ ತೆರೆದ ಪರಿಣಾಮ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೋಳ ನಿವಾಸಿ ಜಯ (59) ಎಂಬವರು ಅ.29 ರಂದು ಕಾರ್ಕಳ ಕಸಬಾ ಗ್ರಾಮದ ಮೂರು…

ನಿಟ್ಟೆಯಲ್ಲಿ ಸುಸ್ಥಿರತೆ ವಿದ್ಯಾರ್ಥಿ ಕ್ಲಬ್ ಉದ್ಘಾಟನೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿAಗ್ ವಿಭಾಗದಿಂದ ಸಂಸ್ಥೆಯಲ್ಲಿ ಸುಸ್ಥಿರತೆ ವಿದ್ಯಾರ್ಥಿ ಕ್ಲಬ್ ಉದ್ಘಾಟಗೊಂಡಿತು ಪೆನ್ ಸ್ಟೇಟ್ ಹ್ಯಾರಿಸ್ಬರ್ಗ್ನ ವಿಶ್ವವಿದ್ಯಾಲಯದ ಮಾಜಿ ಹಿರಿಯ ಅಸೋಸಿಯೇಟ್ ಡೀನ್ ಡಾ.ಒಮಿಡ್ ಅನ್ಸಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಕ್ಷಣ ಮತ್ತು…

ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಅಕ್ಷರಯಾನ ಯುವ ಬರಹಗಾರರ ಸಮ್ಮೇಳನ: ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರ ಪರಿಚಯಿಸುವ ಕೆಲಸವಾಗವಬೇಕಿದೆ: ಶಾಸಕ ಸುನಿಲ್ ಕುಮಾರ್

ಕಾರ್ಕಳ: ಮೊಬೈಲ್ ಬಳಕೆಯ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪುಸ್ತಕ ಮನೆ ಕನ್ನಡ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಯುವ ಬರಹಗಾರರ ಸಮ್ಮೇಳನ ಬಹಳ…

ಕಾರ್ಕಳ: ವಾಯ್ಸ್ ಆಫ್ ಚಾಣಕ್ಯ-2024- ರಾಜ್ಯಮಟ್ಟದ ಸಂಗೀತ ಸ್ಪರ್ಧೆ: ಸ್ಪರ್ಧೆಯಿಂದ ಪ್ರತಿಭೆಗಳ ಅನಾವರಣ – ಪ್ರಸಾದ್ ರೈ

ಕಾರ್ಕಳ: ಇಂತಹ ಸ್ಪರ್ಧೆಗಳನ್ನ ಆಯೋಜನೆ ಮಾಡುವುದರಿಂದ ಪ್ರತಿಭೆಗಳು ಅನಾವರಣಗೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಮಹಾಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್ ರೈ ಹೇಳಿದರು. ಅವರು ಕಾರ್ಕಳ…

ಮುನಿಯಾಲು: ಇಲಿ ಪಾಷಾಣ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಹೆಬ್ರಿ: ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲಿನಲ್ಲಿ ಸೋಮವಾರ ನಡೆದಿದೆ. ಮುನಿಯಾಲು ಮುದೆಲ್ಕಡಿ ನಿವಾಸಿ ಅಮರನಾಥ (60ವ) ಆತ್ಮಹತ್ಯೆ ಮಾಡಿಕೊಂಡವರು. ಅಮರನಾಥ ಅವರಿಗೆ ಯಾವುದೋ ಕಾಯಿಲೆಯಿಂದ ಕಣ್ಣು…

ಉಡುಪಿ ಜ್ಞಾನಸುಧಾದಲ್ಲಿ “ಕೃಷ್ಣಾಪುರ ಸಭಾಂಗಣ” ಉದ್ಘಾಟನೆ- ಭಗವದ್ಗೀತೆಯಿಂದ ನಮ್ಮ ಆಂತರಿಕ ಶುದ್ಧತೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಉಡುಪಿ:ಉಡುಪಿ ಜ್ಞಾನಸುಧಾದಲ್ಲಿ ನೂತನವಾಗಿ ನಿರ್ಮಾಣವಾದ “ಕೃಷ್ಣಾಪುರ ಸಭಾಂಗಣ” ಮತ್ತು ಗ್ರಂಥಾಲಯದ ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಕೃಷ್ಣಾಪುರ ಮಠ ಇವರು ನೆರವೇರಿಸಿ, ಆಶೀರ್ವಚನ ನೀಡಿದರು. ಭಗವದ್ಗೀತೆಯು ನಮ್ಮ ಆಂತರಿಕ ಶುದ್ಧತೆಗೆ ಕಾರಣವಾಗುವುದು. ಮನೋನಿಗ್ರಹದಿಂದ ಎಲ್ಲಾ ಸಾಧನೆ ಸಾಧ್ಯ.…