Category: ಸ್ಥಳೀಯ ಸುದ್ದಿಗಳು

ಅಜೆಕಾರು: ಉಚಿತ ಹೃದಯ ತಪಾಸಣಾ ಶಿಬಿರ: ಮಣಿಪಾಲ್ ಆಸ್ಪತ್ರೆಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ: ಕೆ.ಎಂ.ಸಿ ವೈದ್ಯಕೀಯ ಮುಖ್ಯಸ್ಥ ಡಾ.ಶರತ್ ರಾವ್

ಕಾರ್ಕಳ: ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ‌ಮಧ್ಯಮ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದು,ಗ್ರಾಮೀಣ ಭಾಗದ ಬಡರೋಗಿಗಳಿಗೆ ಸಕಾಲಕ್ಕೆ ಆರೋಗ್ಯ ಸೇವೆ ದೊರಕುವುದು ಕಷ್ಟ ಸಾಧ್ಯ.ಈ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಂದ ಬಡ ಹಾಗೂ ಮಧ್ಯಮ ವರ್ಗಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ…

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರ: ಸಾಣೂರು ಪದವಿಪೂರ್ವ ಕಾಲೇಜು ಕಟ್ಟಡಕ್ಕೆ ಸಂಚಕಾರ: ಕಂಪೆನಿ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆಗೆ ಸಿದ್ಧತೆ

ಕಾರ್ಕಳ:ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಒಂದಲ್ಲಾ ಒಂದು ಆದ್ವಾನ ನಿತ್ಯನಿರಂತರವಾಗಿದ್ದು ,ಇದೀಗ ಸಾಣೂರು ಸರ್ಕಾರಿ ಪ್ರೌಢಶಾಲಾ ಕಟ್ಟಡ ಹಾಗೂ ಆವರಣ ಗೋಡೆ ಹಾಗೂ ರಸ್ತೆ ಕುಸಿಯುವ ಭೀತಿಯಲ್ಲಿದ್ದು, ಗ್ರಾಮಸ್ಥರು ಕಂಪನಿಯ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಈಗಾಗಲೇ ಪ್ರೌಢಶಾಲೆಯ ಜಾಗ ಭೂಸ್ವಾಧೀನ ಪ್ರಕ್ರಿಯೆ…

ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್ ವರ್ಗಾವಣೆ: ನೂತನ ಇ.ಒ ಆಗಿ ಗುರುಶಾಂತಪ್ಪ

ಕಾರ್ಕಳ:ಲೋಕಸಭೆ ಚುನಾವಣೆ ಇನ್ನು ಕೆಲವೇ ದಿನಗಳಲ್ಲಿ ಘೋಷಣೆಯಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ ಎನ್ ಗುರುದತ್ ಅವರು ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದು, ಮೂಲ್ಕಿ ತಾಲೂಕು…

ಕಾರ್ಕಳ ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಫೆ. 26ರಂದು ಮೂಳೆಯ ಖನಿಜಾಂಶಗಳ ಸಾಂದ್ರತೆ ಉಚಿತ ಪರೀಕ್ಷಾ ಶಿಬಿರ: ಅಸ್ಥಿರಂಧ್ರತೆ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮೂಳೆ ಸಾಂದ್ರತೆ ಪರೀಕ್ಷೆ ಅಗತ್ಯ

ಕಾರ್ಕಳ: ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಮುರಿತದ ಅಪಾಯವನ್ನು ಹೆಚ್ಚಿಸುವ ಆಸ್ಟಿಯೊಪೊರೋಸಿಸ್ ಅಥವಾ ಅಸ್ಥಿರಂಧ್ರತೆಯ ಕುರಿತು ಮಾಹಿತಿ ಕೊರತೆಯಿಂದಾಗಿ ಸಾಕಷ್ಟು ಜನರು ಇಂದು ಅಸ್ಥಿರಂಧ್ರತೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಋತುಬಂಧಕ್ಕೊಳಗಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ, ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದರಿಂದ ಈ ಖಾಯಿಲೆ…

ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ

ಕಾರ್ಕಳ : ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಹೋತ್ಸವವು ಫೆ21 ರಿಂದ ಸಡಗರದಿಂದ ನಡೆಯುತ್ತಿದ್ದು, ಫೆ 22 ರಂದು ವೇದಮೂರ್ತಿ ಜಾರ್ಕಳ ಪ್ರಸಾದ್ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಅರುಣ್ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ…

ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಲಾರ್ ಹಾಗೂ ರಕ್ತ ಪರಿಕ್ಷಾ ಉಪಕರಣ ಕೊಡುಗೆ

ಕಾರ್ಕಳ: ಕ್ಯಾನ್ ಫಿನ್ ಹೋಮ್ಸ್, ಮುಂಬೈ ಹಾಗೂ ಸೆಲ್ಕೋ ಸೋಲಾರ್ ಇವರ ವತಿಯಿಂದ ಸಿ.ಎಸ್.ಆರ್ ನಿಧಿಯಿಂದ ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 5 ಕೆ.ವಿ ಸಾಮರ್ಥ್ಯದ ಸೋಲಾರ್ ವಿದ್ಯುತ್ ಹಾಗೂ ಮುಂಬಯಿ ಕ್ಯಾನ್ ಫಿನ್ ಹೋಮ್ಸ್ ವತಿಯಿಂದ ಪ್ರಯೋಗಾಲಯಕ್ಕೆ ಗಣಕೀಕೃತ ರಕ್ತ…

ಹಿರ್ಗಾನ: ಫೆ.25ರಂದು ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ: ರಾಜಾಪುರ ಸಾರಸ್ವತ ಸಂಘ ಕಾರ್ಕಳ, ಮಹಾಲಕ್ಷ್ಮೀ ದೇವಸ್ಥಾನ ಹಿರ್ಗಾನ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ ಹಾಗೂ ಎ.ಜೆ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.25 ರಂದು ಭಾನುವಾರ ಹಿರ್ಗಾನ…

ಫೆ. 25 ರಂದು ಭಾನುವಾರ ಅಜೆಕಾರಿನಲ್ಲಿ ಉಚಿತ ಹೃದಯದ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ: ರಾಮಮಂದಿರ ಟ್ರಸ್ಟ್, ಅಜೆಕಾರು, ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಅಜೆಕಾರು , ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಮಾಹೆ ಮಣಿಪಾಲ, ಕಾರ್ಡಿಯಾಲಜಿ ಅಟ್ ಡೋರ್ಸ್ಟೆಪ್ ಫೌಂಡೇಶನ್ (ಕ್ಯಾಡ್) ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ…

ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಭಗವಂತನನ್ನು ಕಾಣಬೇಕಾದರೆ ಅಂತರಂಗದ ಶುದ್ಧಿಯಾಗಬೇಕು:ಸೋದೆ ಮಠಾಧೀಶ ವಿಶ್ವವಲ್ಲಭ ಶ್ರೀಪಾದರು

ಅಜೆಕಾರು: ಭಗವಂತನನ್ನು ಕಾಣಬೇಕಾದರೆ ನಮ್ಮ ಅಂತರಂಗದ ಶುದ್ಧಿಯಾಗಬೇಕು. ನಮ್ಮೊಳಗಿನ ಕಾಮ,ಕ್ರೋಧ,ಮದ,ಮತ್ಸರಾದಿ ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ ಎಂದು ಉಡುಪಿ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಗುರುವಾರ ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ…

ಫೆ. 21 ರಿಂದ ಫೆ 24ರವರೆಗೆ ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ:ಸಂಭ್ರಮದ ಹಸಿರು ಹೊರೆಕಾಣಿಕೆ ಸಮರ್ಪಣೆ

ಕಾರ್ಕಳ: ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ,ವರ್ಧಂತ್ಯುತ್ಸವ ಹಾಗೂ ಭಜನಾ ಮಂಗಲೋತ್ಸವವು ಫೆಬ್ರವರಿ 21 ರಿಂದ24 ರವರೆಗೆ ನಡೆಯಲಿದ್ದು,ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ಮೂಲಕ ಹಸಿರುವಾಣಿಯನ್ನು ದೇವರಿಗೆ ಸಮರ್ಪಿಸಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಾಧು.ಟಿ ಶೆಟ್ಟಿ ಹೊರೆಕಾಣಿಕೆ ಮೆರವಣಿಗೆಗೆ…