Category: ಸ್ಥಳೀಯ ಸುದ್ದಿಗಳು

ಜ. 17 ಮತ್ತು 18 ರಂದು ಕಾರ್ಕಳದಲ್ಲಿ ಕಿಶೋರ ಯಕ್ಷೋತ್ಸವ- 2026

ಕಾರ್ಕಳ, ಜ. 16: ಯಕ್ಷಕಲಾರಂಗ ಕಾರ್ಕಳ ಇವರಿಂದ ಯಕ್ಷದ್ರುವ- ಯಕ್ಷ ಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ ಸಹಯೋಗದೊಂದಿಗೆ 14ನೇ ವರ್ಷದ ಕಿಶೋರ ಯಕ್ಷೋತ್ಸವ 2026 ಜನವರಿ 17 ಹಾಗೂ 18ರಂದು ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಸರಕಾರಿ…

ಸೂರಿಮಣ್ಣು  ಭಜನಾ ಸುವರ್ಣ ಸಂಭ್ರಮ : ಸ್ಟಿಕ್ಕರ್ ಬಿಡುಗಡೆ.

ಹೆಬ್ರಿ,ಜ. 16 : ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವರ ಸನ್ನಿಧಿಯಲ್ಲಿ ಜನವರಿ 30 ರಿಂದ ಫೆಬ್ರವರಿ 6 ರ ತನಕ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ 50 ನೇ ವರ್ಷದ ” ಭಜನಾ ಸುವರ್ಣ ಸಂಭ್ರಮ” ದ ಸ್ಟಿಕ್ಕರ್ ಬಿಡುಗಡೆ…

ಕಾರ್ಕಳ: ಬೈಕಿಗೆ ಕಾರು ಡಿಕ್ಕಿಯಾಗಿ ಸವಾರ ಆಸ್ಪತ್ರೆಗೆ ದಾಖಲು

ಕಾರ್ಕಳ, ಜ. 15: ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಣೂರಿನ ನವೀನ್ ಎಂಬವರು ತಮ್ಮ ಬೈಕಿನಲ್ಲಿ ಪುಲ್ಕೇರಿಯಿಂದ ಬಜಗೋಳಿಗೆ ಹೋಗುತ್ತಿದ್ದಾಗ ಕಸಬಾ ಗ್ರಾಮದ ಪ್ರಿಯದರ್ಶಿನಿ ಗ್ಯಾಸ್ ಗೋಡೌನ್ ಬಳಿ ಗೊಮ್ಮಟ ಬೆಟ್ಟ ಕಡೆಯಿಂದ ಬಂದ…

ಜ.25 ರಿಂದ 29 ರವರೆಗೆ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ವಾರ್ಷಿಕ ಮಹೋತ್ಸವ

ಕಾರ್ಕಳ,ಜ.15: ಇತಿಹಾಸಪ್ರಸಿದ್ಧ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ 2026ರ ಜಾತ್ರಾ ಮಹೋತ್ಸವವು ಜ. 25ರಿಂದ 29ರವರೆಗೆ ಅತ್ಯಂತ ಭಕ್ತಿಭಾವದಿಂದ ನಡೆಯಲಿದೆ ಎಂದು ಬಸಿಲಿಕಾದ ಧರ್ಮಗುರು ಅಲ್ಬನ್ ಡಿಸೋಜಾ ಹೇಳಿದರು. ಅವರು ಜ.15 ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ…

ಕಾರ್ಕಳ ರೋಟರಿ ಕ್ಲಬ್  ರಾಷ್ಟ್ರೀಯ ಯುವ ದಿನಾಚರಣೆ: ಸಂಸ್ಕಾರಯುತ ಶಿಕ್ಷಣದಿಂದ ಬದುಕು ಸುಂದರ – ಕೆ. ನವೀನ್ ಚಂದ್ರ ಶೆಟ್ಟಿ

ಹೆಬ್ರಿ,ಜ.15 : ಶಿಕ್ಷಣವೆಂದರೆ ಕೇವಲ ಅಂಕ ಗಳಿಕೆ ಒಂದೇ ಆಗಿರದೆ ಸಂಸ್ಕಾರಯುತ ಬದುಕನ್ನ ರೂಪಿಸುವಂತಿರಬೇಕು. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 11 ವರ್ಷಗಳಿಂದ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ…

ಚುನಾವಣೆಯ ಲಾಭಕ್ಕಾಗಿ ನಕಲಿ ಪರಶುರಾಮನ ಪ್ರತಿಮೆ ನಿರ್ಮಿಸಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ತಪ್ಪನ್ನು ಒಪ್ಪಿಕೊಳ್ಳದ ಶಾಸಕರಿಂದ ಹಿಂಬಾಲಕರ ಮೂಲಕ ಕಾಂಗ್ರೆಸ್ ನಾಯಕರ ನಿರಂತರತೇಜೋವಧೆ: ಕಾಂಗ್ರೆಸ್ ವಕ್ತಾರ ಪ್ರದೀಪ್  ಆರೋಪ

ಕಾರ್ಕಳ, ಜ.14: ಕೇವಲ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ಪರಶುರಾಮನ ನಕಲಿ ಪ್ರತಿಮೆ ನಿರ್ಮಿಸಿ ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಶಾಸಕ ಸುನಿಲ್ ಕುಮಾರ್ ಅವರು ತನ್ನ ತಪ್ಪನ್ನು ಪ್ರಾಮಾಣಿವಾಗಿ ಒಪ್ಪಿಕೊಳ್ಳದೇ ತನ್ನ ಹಿಂಬಾಲಕರ ಮೂಲಕ ಮಾಧ್ಯಮಗಳಲ್ಲಿ ಕಾಂಗ್ರೆಸ್…

ಪರಶುರಾಮ ಥೀಮ್ ಪಾರ್ಕಿನಲ್ಲಿ ಕಳ್ಳತನ ಪ್ರಕರಣಕ್ಕೆ ಕುರಿತು RSS ಕಾರ್ಯಕರ್ತನ ವಿರುದ್ಧ ಸುಳ್ಳು ಆರೋಪ: ಫೇಸ್ ಬುಕ್ ನಲ್ಲಿ ಪೋಸ್ಟ್ ಹರಿಯಬಿಟ್ಟಿದ್ದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲು

ಕಾರ್ಕಳ,ಜ.14: ಬೈಲೂರು ಉಮ್ಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ ನಡೆದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಯಬಿಟ್ಟಿದ್ದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂತೋಷ್ ದೇವಾಡಿಗ ಎಂಬಾತ…

ಕಾರ್ಕಳ:ಕುಂಟಲ್ಪಾಡಿಯಲ್ಲಿ ಮನೆಯ ಬಾಗಿಲು ಮುರಿದು ಮದ್ದುಗುಂಡು ಕಳ್ಳತನ

ಕಾರ್ಕಳ, ಜ. 14; ಕಾರ್ಕಳದ ಕುಂಟಲ್ಪಾಡಿಯಲ್ಲಿ ಮನೆಯ ಬಾಗಿಲು ಮುರಿದು ಮದ್ದುಗುಂಡುಗಳನ್ನು ಕಳವುಗೈದಿರುವ ಪ್ರಕರಣ ನಡೆದಿದೆ. ಡಿ.18 ರಿಂದ ಜ.9 ರ ಮಧ್ಯಾವಧಿಯಲ್ಲಿ ಕುಂಟಲ್ಪಾಡಿಯ ಮಹಮ್ಮದ್ ಅಸ್ಲಾಂ ಎಂಬವರ ಮನೆಯ ಮುಂದಿನ ಬಾಗಿಲನ್ನು ಮುರಿದ ಕಳ್ಳರು ಕಪಾಟಿನಲ್ಲಿ ಇರಿಸಿದ್ದ ರೂ.1200 ರೂ.…

ಮೋದಿಯವರ ಭಾವಚಿತ್ರ ಬಿಡಿಸಿದ್ದ ಹೆಬ್ರಿಯ ಅಮೃತಭಾರತಿ ವಿದ್ಯಾಲಯದ ವಿದ್ಯಾರ್ಥಿಗೆ ಪ್ರಧಾನಿಯಿಂದ ಅಭಿನಂದನಾ ಪತ್ರ

ಹೆಬ್ರಿ,ಜ.13: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚಿಗೆ ನಡೆದ ಲಕ್ಷಕಂಠ ಗೀತಾ ಪಾರಾಯಣಕ್ಕೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸಿ ಅದನ್ನು ಮೋದಿಯವರಿಗೆ ನೀಡಿದ ಹೆಬ್ರಿಯ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ಆಶಿಶ್ ಎಚ್.…

ಕಾಂಗ್ರೆಸ್ ನಾಯಕರ ರಾಜಕೀಯ ಸೇಡಿನಿಂದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಬಲಿ: ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪ

ಕಾರ್ಕಳ,ಜ.13: ಕಾಂಗ್ರೆಸ್‌ ನಾಯಕರ ರಾಜಕೀಯ ಸೇಡಿನ ಪರಿಣಾಮವಾಗಿ ಕಾರ್ಕಳದ ಪ್ರವಾಸೋದ್ಯಮ ಕೇಂದ್ರವಾಗಿದ್ದ ಪರಶುರಾಮ ಥೀಂ ಪಾರ್ಕ್ ಯೋಜನೆ ಬಲಿಯಾಗಿದೆ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ. ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಹತಾಶೆ…