Category: ಸ್ಥಳೀಯ ಸುದ್ದಿಗಳು

ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್ ಬಿಲ್ ಬಾಕಿ: ಕಾಂಗ್ರೆಸ್ ರೈತ ವಿರೋಧಿ ನೀತಿಯ ವಿರುದ್ಧ ನಾಳೆ ಬಿಜೆಪಿ ಪ್ರತಿಭಟನೆ

ಕಾರ್ಕಳ,ಮಾ.03: ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಂದಿನ ಇಂಧನ ಸಚಿವರಾಗಿದ್ದ ಸುನಿಲ್ ಕುಮಾರ್ ಅವರು ಕಾರ್ಕಳ ಭಾಗದ ರೈತರ ನೂರಾರು ಕೃಷಿ ಜಮೀನಿಗೆ ಅನುಕೂಲವಾಗುವಂತೆ ಎಣ್ಣೆಹೊಳೆ ಏತ ನೀರಾವರಿ ಯೋಜನೆ ನಿರ್ಮಿಸಿದ್ದರು. ನೂರಾರು ಎಕರೆಗೆ ನೀರಾವರಿ ಕಲ್ಪಿಸಬೇಕಿದ್ದ ಈ ಯೋಜನೆಯ ವಿದ್ಯುತ್ ಬಿಲ್…

ನಾಡ್ಪಾಲು: ಬೈಕಿಗೆ ಟಿಪ್ಪರ್ ಡಿಕ್ಕಿಯಾಗಿ ಸವಾರನಿಗೆ ಗಾಯ

ಹೆಬ್ರಿ, ಮಾ.02: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಆಗುಂಬೆ ಘಾಟಿಯ 2 ನೇ ತಿರುವಿನಲ್ಲಿ ಬೈಕಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಣಸೂರಿನ ಶೃಜನ್ ತಮ್ಮೆಗೌಡ ಅವರು ಭಾನುವಾರ ತನ್ನ ಸ್ನೆಹಿತನ ಬೈಕಿನಲ್ಲಿ ಅಶ್ವಿನಿ ಅವರೊಂದಿಗೆ…

ಕಾರ್ಕಳ: ಅಕ್ರಮ ದನ ಸಾಗಾಟ, ಪ್ರಕರಣ ದಾಖಲು

ಕಾರ್ಕಳ,ಮಾ. 02: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಎಂಬಲ್ಲಿ ಅಕ್ರಮ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರ್ಕಳ ನಗರ ಠಾಣೆ ಸಿ ಎಚ್ ಸಿ ಲೋಕೇಶ್ ಅವರು ಮಾ.1 ರಾತ್ರಿ ರಂದು ಕರ್ತವ್ಯದಲ್ಲಿದ್ದ ವೇಳೆ…

ಕಾರ್ಕಳ: ಚಲಿಸುತ್ತಿದ್ದ ಬೈಕಿನಿಂದ ಬಿದ್ದು ಅಜೆಕಾರಿನ ಮಹಿಳೆ ಗಂಭೀರ

ಕಾರ್ಕಳ, ಮಾ.01: ಬೈಕಿನಲ್ಲಿ ಸಹಸವಾರಳಾಗಿ ಹೋಗುತ್ತಿದ್ದ ಅಜೆಕಾರಿನ ಮಹಿಳೆಯೊಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಮದಗ ಬಳಿಯ ನಿವಾಸಿ ಪೂರ್ಣಿಮಾ ಪೂಜಾರಿ (40) ಎಂಬವರು ಬೈಕಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡ…

ಕಾರ್ಕಳ ಅಯ್ಯಪ್ಪನಗರದ ಬಳಿ ಭೀಕರ ಅಪಘಾತ: ಕಾರು ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು

ಕಾರ್ಕಳ, ಫೆ. 28:ಮಾರುತಿ ಇಕೋ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಬಳಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಎರ್ಲಪಾಡಿಯ…

ಪಳ್ಳಿ ಕಲ್ಲಾಪು ಪರಿಸರದಲ್ಲಿ ಅಗ್ನಿ ಅನಾಹುತ: ಬೆಂಕಿ ನಂದಿಸಿದ ಅಗ್ನಿಶಾಮಕ ದಳ

ಕಾರ್ಕಳ,ಫೆ.28: ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಪಡು ಕಲ್ಲಾಪು ಪರಿಸರದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸಿದ್ದು, ಕಾರ್ಕಳ ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ನಂದಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಪಡು ಕಲ್ಲಾಪು ನಿವಾಸಿ ರಾಮ ನಾಯ್ಕ್…

ಶಿವಪುರ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ,ಫೆ. 27: ಹೆಬ್ರಿ ತಾಲೂಕಿನ ಶಿವಪುರದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಪುರ ಗ್ರಾಮದ ನಿವಾಸಿ ಪೂವಪ್ಪ ಪೂಜಾರಿ (83ವ) ಆತ್ಮಹತ್ಯೆಗೆ ಶರಣಾದವರು. ವಿಪರೀತ ಬೀಡಿ ಸೇದುತ್ತಿದ್ದ ಅವರಿಗೆ ಕ್ಯಾನ್ಸರ್, ಶ್ವಾಸಕೋಶದ ತೊಂದರೆ ಹಾಗೂ ಬಿಪಿ ಸಮಸ್ಯೆ ಇದ್ದು ಚಿಕಿತ್ಸೆ…

ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾ. 1 ರಂದು ಹಳೆ ವಿದ್ಯಾರ್ಥಿಗಳ ‘ಸ್ನೇಹ ಸೇತು’ ಕಾರ್ಯಕ್ರಮ

ಕಾರ್ಕಳ,ಫೆ.26: ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಹಳೆ ವಿದ್ಯಾರ್ಥಿಗಳ ಸಮಾವೇಶ ‘ಸ್ನೇಹ ಸೇತು’ ಕಾರ್ಯಕ್ರಮವು ಮಾರ್ಚ್ 1ರಂದು ಭಾನುವಾರ ಕಾಲೇಜು ಮೈದಾನದಲ್ಲಿ ಜರುಗಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ…

ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್‌ನಲ್ಲಿ ಮೊದಲ ಹಂತದ ಪಲಿತಾಂಶ: ಜ್ಞಾನಸುಧಾದ 8 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ,ಫೆ. 26: ಎನ್.ಟಿ.ಎ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್- 2026ರ ವಿಭಾಗದ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ನಿಶಾನ್ ಎನ್. ಸಾಲ್ಯಾನ್ 99.8525917 ಪರ್ಸಂಟೈಲ್ (ಬಿ.ಆರ್ಕ್), ಅನಿರುದ್ಧ್ ಆರ್…

ನಿಟ್ಟೆ ಕಾಲೇಜಿನಲ್ಲಿ ರಾಜ್ಯಮಟ್ಟದ ‘ರಾಗ್ನಾರಾಕ್ ಎನ್ ಇಗ್ಮಾ 2026’ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

ಕಾರ್ಕಳ, ಫೆ.25: ರಾಜ್ಯ ಮಟ್ಟದ ‘ರಾಗ್ನಾರಾಕ್ ಎನ್ ಇಗ್ಮಾ 2026’ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ಸದಾನಂದ ಸಭಾಂಗಣದಲ್ಲಿ ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ…