Category: ದೇಶ

ಜುಲೈ.6ರ ವರೆಗೂ ದೇಶದಲ್ಲಿ ಮುಂಗಾರು ದುರ್ಬಲ : ಹವಾಮಾನ ಇಲಾಖೆ ಸೂಚನೆ

ನವದೆಹಲಿ: ಮುಂಗಾರು ಮಾರುತಗಳು ಈ ಬಾರಿ ತಡವಾಗಿಯೇ ದೇಶವನ್ನು ಪ್ರವೇಶ ಮಾಡಿವೆ. ಈ ಮಧ್ಯೆ ಜು.6ರ ತನಕ ಮುಂಗಾರು ದುರ್ಬಲವಾಗಿರಲಿದೆ ಎಂದು ಹವಾಮಾನ ಇಲಾಖೆ ಮತ್ತು ಸ್ಕೆಮೇಟ್ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಗಳು ಹೇಳಿವೆ. ಜು.6ರ ತನಕ ದೇಶದ ಇತರ ಭಾಗಗಳಲ್ಲಿ…

ಶಾಸಕ ಜನಾರ್ದನ ರೆಡ್ಡಿಗೆ ಬಿಗ್ ಶಾಕ್ : ಸಿಬಿಐ ವಿಶೇಷ ಕೋರ್ಟ್ ನಿಂದ ಆಸ್ತಿ ಜಪ್ತಿಗೆ ಆದೇಶ

ಬೆಂಗಳೂರು : ಶಾಸಕ ಜನಾರ್ದನರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಆಸ್ತಿ ಜಪ್ತಿಗೆ ಆದೇಶ ನೀಡಿದೆ.ಸಿಬಿಐ ವಿಶೇಷ ಕೋರ್ಟ್ ಶಾಸಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ…

ಪ್ಯಾರಸಿಟಮಾಲ್ ಡಿಸ್ಪರ್ಸಿಬಲ್ ಸೇರಿದಂತೆ 14 ಎಫ್ ಡಿಸಿ ಔಷಧಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಪ್ಯಾರಸಿಟಮಾಲ್ ಸೇರಿದಂತೆ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ 14 ಸ್ಥಿರ ಡೋಸ್ ಸಂಯೋಜನೆಯ (ಎಫ್ ಡಿಸಿ) ಔಷಧಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಔಷಧಗಳು ಯಾವುದೇ ‘ಚಿಕಿತ್ಸಕ ಸಮರ್ಥನೆ’ ಹೊಂದಿಲ್ಲ ಹಾಗೂ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಲ್ಲವು ಎಂದು ಕೇಂದ್ರ…

ಮಣಿಪುರದಲ್ಲಿ ಶಂಕಿತ ಉಗ್ರರಿಂದ ಗುಂಡಿನ ದಾಳಿ :ಮೂರು ಮಂದಿ ಸಾವು, ಇಬ್ಬರಿಗೆ ಗಾಯ

ಮಣಿಪುರ: ಮಣಿಪುರದ ಖೋಕೆನ್ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಶಂಕಿತ ಬಂಡುಕೋರರು ನಡೆಸಿದ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂರು ಮಂದಿ ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಖೋಕೆನ್ ಗ್ರಾಮವು ಕಾಂಪೋಕ್ಪಿ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ನಡುವಿನ ಗಡಿಯಲ್ಲಿದೆ.…

ಒಡಿಶಾದಲ್ಲಿ ಮತ್ತೊಂದು ಅವಘಡ: ಎಕ್ಸ್ಪ್ರೆಸ್ ರೈಲಿಗೆ ಹೊತ್ತಿಕೊಂಡ ಬೆಂಕಿ- ಪ್ರಯಾಣಿಕರು ಅಪಾಯದಿಂದ ಪಾರು

ಭುವನೇಶ್ವರ : ಒಡಿಶಾದಲ್ಲಿ ಕಳೆದ ವಾರ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 288 ಜನ ಬಲಿಯಾಗಿರುವ ದಾರುಣ ಘಟನೆಯನ್ನು ಇನ್ನೂ ದೇಶ ಮರೆತಿಲ್ಲ. ಈ ನಡುವೆ ಒಡಿಶಾದಲ್ಲೇ ಮತ್ತೊಂದು ಅವಘಡ ನಡೆದಿದೆ. ರೈಲೊಂದರ ಎಸಿ ಕೋಚ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಆದರೆ ಅದೃಷ್ಟವಶಾತ್…

ಒಡಿಶಾ ರೈಲು ದುರಂತ: ರೈಲ್ವೆ ನೌಕರರ ಫೋನ್‌ಗಳು ಸಿಬಿಐ ವಶ​ಕ್ಕೆ

ಬಾಲಸೋರ್‌: ಕಳೆ​ದ ಶುಕ್ರವಾರ ನಡೆದ ಭೀಕರ ತ್ರಿವಳಿ ರೈಲು ದುರಂತದ ತನಿಖೆ ಹೊಣೆ ಹೊತ್ತಿರುವ ಸಿಬಿಐ ಸತತ 2 ದಿನ ತನಿಖೆ ನಡೆಸಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಮಂಗಳವಾರ ಅಪಘಾತ ಸ್ಥಳಕ್ಕೆ ಎರಡು ಬಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದ…

ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ : ಇಂದು (ಜೂನ್ 7) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೊಗರಿ ಬೇಳೆ, ಉದ್ದಿನಬೇಳೆ, ಭತ್ತ ಮತ್ತು ಮೆಕ್ಕೆಜೋಳದ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. 2023-24ರ ಮಾರುಕಟ್ಟೆ ಋತುವಿಗಾಗಿ ಬೇಸಿಗೆ ಕಾಲದ ಅಥವಾ ಖಾರಿಫ್ ಬೆಳೆಗಳಿಗೆ…

ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು: ತಪ್ಪಿದ ಭಾರಿ ಅನಾಹುತ

ಮಧ್ಯಪ್ರದೇಶ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಗ್ಯಾಸ್ ಫ್ಯಾಕ್ಟರಿಯೊಂದರಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಈ ಘಟನೆ ನಡೆದಿದ್ದು, ಮಾಹಿತಿ ಬಂದ ಕೂಡಲೇ ರೈಲ್ವೆ ಅಧಿಕಾರಿಗಳು…

ಒಡಿಶಾ ರೈಲು ಅಪಘಾತ: ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ: ಒಡಿಶಾ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ ಮಂಗಳವಾರ ವಹಿಸಿಕೊಂಡಿದ್ದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಡಿಕ್ಕಿ ಹೊಡಿದಿದ್ದ ಒಡಿಶಾದ ಬಾಲಸೋರ್‌ನ ಬಹನಾಗ ಬಜಾರ್‌ನಲ್ಲಿ ತನಿಖೆ ನಡೆಸಲು ಸಿಬಿಐ,…

ಮಳೆ​ಗಾಲ ಆರಂಭ ಇನ್ನಷ್ಟು ವಿಳಂಬ: ಮುಂಗಾರು ಆಗ​ಮ​ನಕ್ಕೆ ವಾಯು​ಭಾರ ಕುಸಿತ ಅಡ್ಡಿ

ನವದೆಹಲಿ: ಕೇರಳಕ್ಕೆ ಮುಂಗಾರು ಜೂ.4ರಂದು ಆಗಮಿಸದೇ ವಿಳಂಬವಾಗಿರುವ ನಡುವೆಯೇ, ಮುಂಗಾರು ಅಗಮಿಸಲು ಮತ್ತೊಂದು ಅಡ್ಡಿ ಎದುರಾಗಿದೆ. ನೈರುತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಗೋಚರವಾಗಿದ್ದು, ಇದು ಮುಂಗಾರು ಮಾರುತಗಳು ಕೇರಳದತ್ತ ನುಗ್ಗಲು ಅಡ್ಡಿ ಮಾಡುವ ಸಾಧ್ಯತೆ ಇದೆ ಎಂದು ಭಾರತೀಯ…