Category: ಉಡುಪಿ

ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿದ್ದ ಬಿಜೆಪಿಗರು ಸಂವಿಧಾನದ ರಕ್ಷಣೆಯ ಮಾತುಗಳನ್ನಾಡುತ್ತಿರುವುದು ಹಾಸ್ಯಾಸ್ಪದ: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ

ಕಾರ್ಕಳ: ಲೋಕಸಭೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನವನ್ನು ಬದಲಿಸುವುದಾಗಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡು‌ ಇದೀಗ ಸಂವಿಧಾನದ ರಕ್ಷಣೆಯ ಮಾತುಗಳನ್ನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾರ್ಕಳ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ಹೇಳಿದ್ದಾರೆ. ಕಾಂಗ್ರೆಸ್ ತನ್ನ…

ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ನೇಣು ಬಿಗಿದು ಆತ್ಮಹತ್ಯೆ

ಪಡುಬಿದ್ರೆ :ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರು ಪೊಲೀಸ್ ವಸತಿಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ್ಯೋತಿ (29)ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಪೊಲೀಸ್‌ ಸಿಬ್ಬಂದಿ. ಶುಕ್ರವಾರ ಸಂಜೆ ಎಂದಿನಂತೆ ಕರ್ತವ್ಯ ಮುಗಿಸಿ ವಸತಿಗೃಹಕ್ಕೆ ತೆರಳಿದ ಬಳಿಕ ಈ ಕೃತ್ಯ ಎಸಗಿದ್ದಾರೆ.…

ಅಜೆಕಾರು: ಪಂಚಾಯಿತಿಯವರು ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಬೇಡಿ ಅಂದ್ರು: ಜನರು ನೀರು ಸರಬರಾಜು ಗೇಟ್ ವಾಲ್ವ್ ಚೇಂಬರನ್ನೇ ಕಸದ ತೊಟ್ಟಿ ಮಾಡಿದ್ರು!

ಕಾರ್ಕಳ: ಇಂದಿನ ಸಮಾಜದಲ್ಲಿ ಜನರು ಸುಶಿಕ್ಷಿತರಾಗುತ್ತಿದ್ದಂತೆ ತಿಳುವಳಿಕೆಯ ಮಟ್ಟ ಮಾತ್ರ ದಿನೇದಿನೇ ಕುಸಿಯುತ್ತಿದೆ ಎನ್ನುವುದು ಅಷ್ಟೇ ಸತ್ಯ. ಇದಕ್ಕೆ ಉತ್ತಮ ಉದಾಹರಣೆ ಎಂಬAತೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯತಿಯವರು ಕಸ ಹಾಕದಂತೆ ಬೋರ್ಡ್ ಹಾಕಿದ್ರೂ ಜನರು ಪಕ್ಕದಲ್ಲಿರುವ ನೀರು ಪೂರೈಕೆಯ…

ಉಡುಪಿ ಪಿಪಿಸಿ ಸಂಧ್ಯಾ ಕಾಲೇಜಿನಲ್ಲಿ  ವಿಶ್ವ ಗುಬ್ಬಚ್ಚಿ ದಿನಾಚರಣೆ

ಉಡುಪಿ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋ ಕ್ಲಬ್ ಮತ್ತು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಡ್ರಾಪ್ಲೆಟ್ಸ್ ಫಾರ್ ಡೈವರ್ಸಿಟಿ ಎಂಬ ಕಾರ್ಯಕ್ರಮದ ಮೂಲಕ ಪಕ್ಷಿಗಳಿಗೆ ನೀರು ಪೂರೈಸುವ ಯೋಜನೆಯನ್ನು ಹಮ್ಮಿಕೊಂಡಿದ್ದು…

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಪ್ರಕೃತಿ ಅಧ್ಯಯನ ಮತ್ತು ವಿಪತ್ತು ನಿರ್ವಹಣಾ ಶಿಬಿರ

ಕಾರ್ಕಳ : ವಿದ್ಯಾರ್ಥಿಗಳು ಹಾಗೂ ಇಂದಿನ ಯುವಕರು ಸಾಹಸಗಳನ್ನು ಶ್ರದ್ಧೆಯಿಂದ ಕಲಿತುಕೊಳ್ಳಬೇಕು. ಅವುಗಳು ಜನೋಪಯೋಗಿ ಮತ್ತು ಸಮಾಜ ಕೇಂದ್ರಿತವಾಗಿ ಸಶಕ್ತ ರಾಷ್ಟçವೊಂದರ ನಿರ್ಮಾಣಕ್ಕೆ ಪೂರಕವಾಗಬೇಕು. ಯುವಜನತೆ ದೇಶದ ಆಸ್ತಿ. ಪ್ರಕೃತಿ ಸಂರಕ್ಷಣೆ , ವಿಪತ್ತು ನಿರ್ವಹಣೆಗೆ ಕಟಿಬದ್ಧರಾಗಿ ದುಡಿಯಬೇಕೆಂದು ಭುವನೇಂದ್ರ ಕಾಲೇಜು…

ಸಚಿವ ಶಿವರಾಜ್ ತಂಗಡಗಿಗೆ ತಾಕತ್ತಿದ್ದರೆ ಮೋದಿ ಬೆಂಬಲಿಗರನ್ನು ಮುಟ್ಟಿ ನೋಡಲಿ: ಜಿಲ್ಲಾ ಬಿಜೆಪಿ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಸವಾಲು

ಉಡುಪಿ: ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿನ ದುಸ್ಥಿತಿ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತಾಗಿದೆ. ಅಂದು ಸೋನಿಯಾ ಗಾಂಧಿ ಮೋದಿಯವರನ್ನು ಸಾವಿನ ವ್ಯಾಪಾರಿ ಎಂದಿದ್ದರು, ಖರ್ಗೆ ಮೋದಿಯವರನ್ನು ವಿಷ ಸರ್ಪ…

ಕುಕ್ಕುಂದೂರು: ಟೂರಿಸ್ಟ್ ಬಸ್ ಪಲ್ಟಿಯಾಗಿ ಹಲವರಿಗೆ ಗಾಯ

ಕಾರ್ಕಳ: ಕಾರ್ಕಳ ಕಡೆಯಿಂದ ಉಡುಪಿಗೆ ಹೋಗುತ್ತಿದ್ದ ಟೂರಿಸ್ಟ್ ಮಿನಿ ಬಸ್ಸೊಂದು ಕುಕ್ಕುಂದೂರು ಗಣಿತ ನಗರ ಸಮೀಪದ ಮಸೀದಿಯ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವೇಗವಾಗಿ ಸಾಗುತ್ತಿದ್ದ…

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ: ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಕೃಷ್ಣಮೂರ್ತಿ ಆಚಾರ್ಯ,ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಬಜಗೋಳಿ ಆಯ್ಕೆ

ಕಾರ್ಕಳ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಥೀಮ್ ಪಾರ್ಕಿನಲ್ಲಿ ಪರಶುರಾಮನ ಪ್ರತಿಮೆಯನ್ನು ಪುನರ್ ಪ್ರತಿಷ್ಟಾಪನೆ ಮಾಡುವಲ್ಲಿ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ರಚಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಕೃಷ್ಣಮೂರ್ತಿ ಆಚಾರ್ಯ, ಅಧ್ಯಕ್ಷರಾಗಿ ಕೃಷ್ಣ…

ಹಿರ್ಗಾನ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ

ಕಾರ್ಕಳ: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ಎಂಬಲ್ಲಿ ನಡೆದಿದೆ. ಚಿಕ್ಕಲ್‌ಬೆಟ್ಟು ನಿವಾಸಿ ಜಯಂತಿ (58) ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಕಳೆದ ಹಲವು ಸಮಯದಿಂದ…

ಕಾಡುಹೊಳೆ: ಮಾ 27,28ರಂದು ನಾಗಶಿಲಾ ಪುನಃಪ್ರತಿಷ್ಠೆ, ಚತುಃಪವಿತ್ರ ನಾಗಮಂಡಲೋತ್ಸವ

ಕಾರ್ಕಳ:ಮರ್ಣೆ ಗ್ರಾಮದ ಕಾಡುಹೊಳೆ ಕೋಟೆಬೈಲು ನಾಗಬನದ ಜೀರ್ಣೋದ್ಧಾರದ ಪ್ರಯುಕ್ತ ಮಾ.27 ಹಾಗೂ 28ರಂದು ನಾಗಶಿಲಾ ಪುನಃಪ್ರತಿಷ್ಠೆ ಹಾಗೂ ಚತುಃಪವಿತ್ರ ನಾಗಮಂಡಲೋತ್ಸವವು ಕಾಡುಹೊಳೆ ವೆಂಕಟರಮಣ ಭಟ್ ಹಾಗೂ ಸಾಂತ್ಯಾರು ವೇ.ಮೂ ಲಕ್ಷ್ಮೀಪ್ರಸಾದ್ ಭಟ್ ನೇತೃತ್ವದಲ್ಲಿ ನಡೆಯಲಿದೆ. ಮಾ 27ರಂದು ಬುಧವಾರ ಬೆಳಗ್ಗೆ 8.30ರಿಂದ…