Category: ಉಡುಪಿ

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯಶ್ರೀ ಅಜೇರು ಆಯ್ಕೆ: ಉಮೇಶ್ ಮಿಜಾರ್ ಗೆ ಕಲಾಭೂಷಣ ಪ್ರಶಸ್ತಿ

ಮಂಗಳೂರು,ಜ.15: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷರಂಗದ ಅಗ್ರಮಾನ್ಯ ಮಹಿಳಾ ಭಾಗವತ ರಾದ ಕಾವ್ಯಶ್ರೀ ಅಜೇರು ಆಯ್ಕೆಯಾಗಿದ್ದಾರೆ. ಶ್ರೀಕುಂದೇಶ್ವರ ದೇಗುಲದ ಧರ್ಮದರ್ಶಿಯಾಗಿ, ಯಕ್ಷಗಾನ ಮೇಳ ಸಂಘಟಕ, ಕಲಾವಿದ, ಅರ್ಥಧಾರಿಯಾಗಿದ್ದ ದಿ.ರಾಘವೇಂದ್ರ…

ಚುನಾವಣೆಯ ಲಾಭಕ್ಕಾಗಿ ನಕಲಿ ಪರಶುರಾಮನ ಪ್ರತಿಮೆ ನಿರ್ಮಿಸಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ: ತಪ್ಪನ್ನು ಒಪ್ಪಿಕೊಳ್ಳದ ಶಾಸಕರಿಂದ ಹಿಂಬಾಲಕರ ಮೂಲಕ ಕಾಂಗ್ರೆಸ್ ನಾಯಕರ ನಿರಂತರತೇಜೋವಧೆ: ಕಾಂಗ್ರೆಸ್ ವಕ್ತಾರ ಪ್ರದೀಪ್  ಆರೋಪ

ಕಾರ್ಕಳ, ಜ.14: ಕೇವಲ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ಪರಶುರಾಮನ ನಕಲಿ ಪ್ರತಿಮೆ ನಿರ್ಮಿಸಿ ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಶಾಸಕ ಸುನಿಲ್ ಕುಮಾರ್ ಅವರು ತನ್ನ ತಪ್ಪನ್ನು ಪ್ರಾಮಾಣಿವಾಗಿ ಒಪ್ಪಿಕೊಳ್ಳದೇ ತನ್ನ ಹಿಂಬಾಲಕರ ಮೂಲಕ ಮಾಧ್ಯಮಗಳಲ್ಲಿ ಕಾಂಗ್ರೆಸ್…

ಮೋದಿಯವರ ಭಾವಚಿತ್ರ ಬಿಡಿಸಿದ್ದ ಹೆಬ್ರಿಯ ಅಮೃತಭಾರತಿ ವಿದ್ಯಾಲಯದ ವಿದ್ಯಾರ್ಥಿಗೆ ಪ್ರಧಾನಿಯಿಂದ ಅಭಿನಂದನಾ ಪತ್ರ

ಹೆಬ್ರಿ,ಜ.13: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚಿಗೆ ನಡೆದ ಲಕ್ಷಕಂಠ ಗೀತಾ ಪಾರಾಯಣಕ್ಕೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸಿ ಅದನ್ನು ಮೋದಿಯವರಿಗೆ ನೀಡಿದ ಹೆಬ್ರಿಯ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿಯ ಆಶಿಶ್ ಎಚ್.…

ಕಾಂಗ್ರೆಸ್ ನಾಯಕರ ರಾಜಕೀಯ ಸೇಡಿನಿಂದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಬಲಿ: ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪ

ಕಾರ್ಕಳ,ಜ.13: ಕಾಂಗ್ರೆಸ್‌ ನಾಯಕರ ರಾಜಕೀಯ ಸೇಡಿನ ಪರಿಣಾಮವಾಗಿ ಕಾರ್ಕಳದ ಪ್ರವಾಸೋದ್ಯಮ ಕೇಂದ್ರವಾಗಿದ್ದ ಪರಶುರಾಮ ಥೀಂ ಪಾರ್ಕ್ ಯೋಜನೆ ಬಲಿಯಾಗಿದೆ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ. ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಹತಾಶೆ…

ಮಣಿಪಾಲ: ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ,ಎರಡನೇ ಹಂತದ ಪ್ರತಿಭಾ ಪುರಸ್ಕಾರ- ಭಾರತದ ಪ್ರಗತಿಗೆ ಜ್ಞಾನಸುಧಾದಂತಹ ಶಿಕ್ಷಣ ಸಂಸ್ಥೆ ಪ್ರೇರಕ ಶಕ್ತಿ : ಟಿ ಸುಧಾಕರ ಪೈ- ಒಂದೇ ವರ್ಷದಲ್ಲಿ ದೇಶಕ್ಕೆ 227 ವೈದ್ಯರನ್ನು ನೀಡಿದಹೆಮ್ಮೆಯ ಸಂಸ್ಥೆ ಜ್ಞಾನಸುಧಾ : ಕೋಟ ಶ್ರೀನಿವಾಸಪೂಜಾರಿ

ಮಣಿಪಾಲ,ಜ.12: ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೆ ಮುಂಚೂಣಿಯಲ್ಲಿದೆ. ಜ್ಞಾನಸುಧಾದಂತಹ ಸಂಸ್ಥೆಗಳು ಈ ರೀತಿಯ ಉತ್ತಮ ಸಾಧನೆಯನ್ನು ಮಾಡುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿಮುಂದಿನ ದಿನಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವುದರಲ್ಲಿ ಸಂಶಯವಿಲ್ಲ. ನಾವು ಮಾಡುವ ಕೆಲಸದ ಅರಿವಿರಲಿ ಮತ್ತು ಅದನ್ನು ಸಂತೋಷದಿAದ ಮಾಡಬೇಕು ಆಗ…

ಪರಶುರಾಮ ಥೀಮ್ ಪಾರ್ಕ್ ನಲ್ಲಿ ಸ್ವಚ್ಚತಾಕಾರ್ಯ ಸ್ವಾಗತಾರ್ಹ: ಥೀಮ್ ಪಾರ್ಕ್ ಕುರಿತು ನಮ್ಮ ಕಾಳಜಿ ಸರ್ಕಾರ ಒಪ್ಪಿಕೊಂಡಂತಾಗಿದೆ: ಶಾಸಕ ಸುನಿಲ್ ಕುಮಾರ್

ಕಾರ್ಕಳ, ಜ. 10: ಪರಶುರಾಮ ಥೀಮ್ ಪಾರ್ಕಿನ ಸ್ವಚ್ಚತಾ ಕಾರ್ಯ ನಡೆಸಲು ಹಾಗೂ ನಿರಂತರ ಒಂದು ತಿಂಗಳು ಕಾಲ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡುವಂತೆ ನಾನು ಬರೆದ ಪತ್ರಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಸಕಾಲಿಕವಾಗಿ ಸ್ಪಂದಿಸಿ ಸ್ವಚ್ಚತಾ ಕಾರ್ಯ ಆರಂಭಿಸಿರುವುದು ಸ್ವಾಗತಾರ್ಹ…

ಮನರೇಗಾ ಹೆಸರನ್ನು ಬದಲಿಸುವ ಮೂಲಕ ಕೇಂದ್ರ ಸರ್ಕಾರ ಬಡವರ ಅನ್ನದ ಬಟ್ಟಲಿಗೆ ಕನ್ನ ಹಾಕಿದೆ:ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪ

ಕಾರ್ಕಳ, ಜ.09: ಮಹಾತ್ಮಾ ಗಾಂಧೀಜಿಯವರ ಗ್ರಾಮಾಭ್ಯುದಯದ ಕನಸನ್ನು ನನಸಾಗಿಸಿದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು “ವಿಬಿ- ಜಿ ರಾಮ್ ಜಿ” ಎಂದು ಮರು ನಾಮಕರಣ ಮಾಡುವ ಮೂಲಕ ಯೋಜನೆಯ ಮೂಲ ಸ್ವರೂಪವನ್ನೇ ಬದಲಿಸಿ ಪ್ರಧಾನಿ ಮೋದೀ ನೇತೃತ್ವದ…

ಪರಶುರಾಮ ಥೀಮ್ ಪಾರ್ಕ್ ಪರಿಸರದ ಸ್ವಚ್ಚತೆಗೆ ಜಿಲ್ಲಾಡಳಿತ ಸೂಚನೆ: ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ಸ್ವಚ್ಚತಾ ಕಾರ್ಯ ಆರಂಭ

ಕಾರ್ಕಳ,ಜ.09: ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕಿನ ಆವರಣ ಹಾಗೂ ಸುತ್ತಮುತ್ತಲಿನಲ್ಲಿ ಹುಲ್ಲು ಹಾಗೂ ಕಳೆಗಿಡಗಳು ಬೆಳೆದಿದ್ದು, ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಈ ಯೋಜನೆಯ ಕಾಮಗಾರಿ ನಿರ್ವಹಿಸಿದ್ದ ನಿರ್ಮಿತಿ ಕೇಂದ್ರದ…

ಬಹುಕಾಲದ ಬೇಡಿಕೆಯಾಗಿದ್ದ 8 ಕಾಲುಸಂಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ:ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಮುನಿಯಾಲು ಉದಯ ಶೆಟ್ಟಿ

ಕಾರ್ಕಳ, ಜ.08:ಅನೇಕ ವರ್ಷಗಳಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಜನರ ಬೇಡಿಕೆಯಾಗಿಯೇ ಉಳಿದಿದ್ದ 8 ಕಾಲುಸಂಕ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಅನುದಾನ ಬಿಡುಗಡೆಗೊಳಿಸುವಲ್ಲಿ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್…

ಪರಶುರಾಮ ಥೀಮ್ ಪಾರ್ಕ್ ಈ ದುಸ್ಥಿತಿಗೆ ಬರಲು ಉದಯ ಶೆಟ್ಟಿ ಕುಕೃತ್ಯ ಕಾರಣ: ನಿಮ್ಮ ರಾಜಕೀಯ ಹಪಹಪಿಗೆ ಕಾರ್ಕಳದ ಅಭಿವೃದ್ಧಿಗೆ ಕಲ್ಲು ಹಾಕಬೇಡಿ:ಕಾರ್ಕಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಸಲಹೆ

ಕಾರ್ಕಳ,ಜ.08: ಕಾರ್ಕಳವನ್ನು ಪ್ರೀತಿಸುವವನು ಕಾರ್ಕಳದ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆಯೇ ಹೊರತು ತನ್ನ ರಾಜಕೀಯದ ಚಟಕ್ಕಾಗಿ ಪ್ರವಾಸೋದ್ಯಮವನ್ನು ಮೊಟಕುಗೊಳಿಸಲಾರ,ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ದುಸ್ಥಿತಿಗೆ ಮುನಿಯಾಲು ಉದಯ ಶೆಟ್ಟಿ ಕುಕೃತ್ಯವೇ ಕಾರಣ ಎಂದು ಕಾರ್ಕಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಆರೋಪಿಸಿದ್ದಾರೆ.…