Category: ಉತ್ತರ ಕನ್ನಡ

ಕಾರವಾರ: ನಾಡಬಾಂಬ್​ ಸ್ಫೋಟಿಸಿ ಕಾಡುಹಂದಿ ಹತ್ಯೆ -ಪಂಜುರ್ಲಿ ದೈವದ ಸ್ಥಾನ ಕೊಟ್ಟು ಸಾಕಿದ್ದ ಗ್ರಾಮಸ್ಥರ ಕಣ್ಣೀರು

ಕಾರವಾರ: ಗ್ರಾಮಸ್ಥರು ಪಂಜುರ್ಲಿ ಎಂದು ಪೂಜೆ ಮಾಡುತ್ತಿದ್ದ ಕಾಡು ಹಂದಿಯನ್ನು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ನಡೆದಿದೆ. ಕಾಡು ಹಂದಿ ಊರ ಜನರು ನೀಡುತ್ತಿದ್ದ ಆಹಾರವನ್ನು…

ಉಡುಪಿಯಲ್ಲಿ ಭಾರೀ ಮಳೆ: ಕಮಲಶಿಲೆಯ ಅರ್ಚಕ ಸೇರಿ ಮೂವರು ನೀರುಪಾಲು

ಉಡುಪಿ:ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ತೀವೃಗೊಂಡಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಪ್ರತ್ಯೇಕ ಕಡೆಗಳಲ್ಲಿ ಮೂವರು ಜಲಸಮಾಧಿಯಾಗಿದ್ದಾರೆ. ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ಕುಬ್ಜಾ ನದಿಯಲ್ಲಿ…

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ : ರೆಡ್ ಅಲರ್ಟ್ ಘೋಷಣೆ

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಈ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 20…

ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಗೆಲುವು: ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿದ ಮುಸ್ಲಿಂ ಯುವಕರು

ಕಾರವಾರ:ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ಸಿಕ್ಕಿದ್ದು, ಭಟ್ಕಳದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿದೆ. ಹೀಗಾಗಿ ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಹಿಡಿದು ಸಂಭ್ರಮಿಸಿದ್ದಲ್ಲದೆ, ಕೇಸರಿ ಧ್ವಜದ ಪಕ್ಕ ಅದನ್ನು ಅಳವಡಿಸಿದ್ದಾರೆ. ಭಟ್ಕಳ ಸಂಶುದ್ದಿನ್ ಸರ್ಕಲ್ ಮೇಲೆ ನಿಂತು ಕೇಸರಿ ಭಾವುಟ ಪಕ್ಕದಲ್ಲಿ…

ಕಾರ್ಕಳದಲ್ಲಿ ಮುತಾಲಿಕ್ ಸ್ಪರ್ಧೆ ಕುರಿತ ಗೊಂದಲಕ್ಕೆ ತೆರೆ: ಕಾರ್ಕಳದಿಂದ‌ಲೇ ಪಕ್ಷೇತರನಾಗಿ ನನ್ನ ಸ್ಪರ್ಧೆ: ಮುತಾಲಿಕ್ ಅಧಿಕೃತ ಘೋಷಣೆ

ಕಾರ್ಕಳ: ಹಿಂದುತ್ವಕ್ಕಾಗಿ, ಹಿಂದೂ ಕಾರ್ಯಕರ್ತರ ಧ್ವನಿಯಾಗಿ ಭ್ರಷ್ಟಾಚಾರ ರಹಿತ ವ್ಯವಸ್ಥೆಗಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದಲೇ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಾರ್ಕಳದ ಹೊಟೇಲ್ ಪ್ರಕಾಶ್ ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿ ನಡೆಸಿದ ಅವರು,…