ಅಜೆಕಾರು: ಮುಳ್ಕಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುನಿಯಾಲು ಕ್ಲಸ್ಟರ್ ಮಟ್ಟದ ಮಕ್ಕಳ FLN ಕಲಿಕಾ ಹಬ್ಬ ನಡೆಯಿತು .
ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಕೇಶ್ ಹೆಗ್ಡೆ ಉದ್ಘಾಟನೆ ನೆರವೇರಿಸಿದರು.S. D. M. C ಅಧ್ಯಕ್ಷರಾದ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹೆಬ್ರಿ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಹರೀಶ್ ಪೂಜಾರಿ ,ಯಶೋದಾ ಹೆಗ್ಡೆ, ಶಾಲಾ ಮುಖ್ಯೋಪಾಧ್ಯಾಯರಾದ ಜನಾರ್ಧನ ಬೆಳಿರಾಯ ಉಪಸ್ಥಿತರಿದ್ದರು.
ಶ್ವೇತಾ ಕುಮಾರಿ ಸ್ವಾಗತಿಸಿ, ಪ್ರಫುಲ್ಲ ಶೆಟ್ಟಿ ವಂದಿಸಿದರು. ರೂಪಶ್ರೀ ಕಾರ್ಯಕ್ರಮ ನಿರೂಪಿಸಿದರು. ನಿಶಾ ಶೆಟ್ಟಿ , ಕಲಾವತಿ ಮತ್ತು ಶಾಲಾ S.ಆ. ಒ. ಅ ಸದಸ್ಯರು ಸಹಕರಿಸಿದರು.
