Share this news

ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರ ಹಾಗೂ ಸೇನಾ ಪಡೆಗಳ ನಡುವಿನ ಸಂಘರ್ಷದಿAದ ಪ್ರಕ್ಷÄಬ್ಧತೆ ಹೆಚ್ಚಾಗಿದ್ದು ಈ ನಡುವೆ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಢಾಕಾ ತೊರೆದು ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ಅವರು ಢಾಕಾ ಅರಮನೆಯನ್ನು ತೊರೆದು ಸುರಕ್ಷತೆಗಾಗಿ ವಿಶೇಷ ವಿಮಾನದಲ್ಲಿ ಭಾರತದಲ್ಲಿನ ತ್ರಿಪುರಾದ ಅಗರ್ತಲಾಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಲಕ್ಷಾಂತರ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಂತೆ ಬೇರೆ ಸರ್ಕಾರ ರಚನೆಯಾಗದಂತೆ ತಡೆಯುವಂತೆ ಭದ್ರತಾ ಪಡೆಗಳನ್ನು ಹಸೀನಾ ಅವರು ಸಜೀಬ್ ವಾಝೆದ್ ಜಾಯ್ ಒತ್ತಾಯಿಸಿದ್ದಾರೆ. .
ನಾಗರಿಕ ಸೇವಾ ಉದ್ಯೋಗ ಮೀಸಲಾತಿ ವಿರುದ್ಧ ಕಳೆದ ತಿಂಗಳು ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಹಸೀನಾ ಅವರ 15 ವರ್ಷಗಳ ಅಧಿಕಾರಾವಧಿಯಲ್ಲಿ ತೀವ್ರ ಅಶಾಂತಿಯಾಗಿ ಉಲ್ಬಣಗೊಂಡಿದೆ. ಅವರ ರಾಜೀನಾಮೆಗಾಗಿ ವ್ಯಾಪಕ ಒತ್ತಾಯ ಕೇಳಿಬರುತ್ತಿದೆ.
ಪ್ರಸ್ತುತ ಪರಿಸ್ಥಿತಿಯು ಬಾಂಗ್ಲಾದೇಶದಲ್ಲಿ ಹಿಂದಿನ ರಾಜಕೀಯ ಪ್ರಕ್ಷುಬ್ಧತೆಯನ್ನು ನೆನಪಿಸುತ್ತಿದೆ. ಜನವರಿ 2007 ರಲ್ಲಿ ವ್ಯಾಪಕ ಅಶಾಂತಿಯ ನಂತರ ಸೇನೆ ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ಎರಡು ವರ್ಷಗಳ ಕಾಲ ಉಸ್ತುವಾರಿ ಸರ್ಕಾರವನ್ನು ರಚಿಸಿತ್ತು. ರಾಷ್ಟ್ರವು ಮುಂದಿನ ಬೆಳವಣಿಗೆಗಳಿಗಾಗಿ ಕಾಯುತ್ತಿರುವಾಗ ಶೇಖ್ ಹಸೀನಾ ಅವರ ನಾಯಕತ್ವದ ಸುತ್ತಲಿನ ಅನಿಶ್ಚಿತತೆಯು ಬೆಳೆಯುತ್ತಲೇ ಇದೆ. ಬಾಂಗ್ಲಾದೇಶ ತನ್ನ ರಾಜಕೀಯ ಇತಿಹಾಸದಲ್ಲಿ ಈ ನಿರ್ಣಾಯಕ ಘಟ್ಟವನ್ನು ಮೆಟ್ಟಿ ನಿಲ್ಲುವುದನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ.

                        

                          

                        

                          

 

`

Leave a Reply

Your email address will not be published. Required fields are marked *