ಕಾರ್ಕಳ: ಒಂದು ಕಾಲೇಜಿನಲ್ಲಿ ಶಿಕ್ಷಕರಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಶಿಕ್ಷಕೇತರರಿಗೂ ಇದೆ. ಜವಾಬ್ದಾರಿಯುತವಾಗಿ ವೃತ್ತಿ ನಿಷ್ಟೆಯಿಂದ ಕಾರ್ಯವನ್ನು ನಿಭಾಯಿಸುವುದರೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಎ ಕೋಟ್ಯಾನ್ ಹೇಳಿದರು.
ಅವರು ಕಾಲೇಜಿನ ಶಿಕ್ಷಕೇತರ ಸಂಘದಿಂದ ನಡೆದ ಅಭಿನಂದನಾ ಮತ್ತು ವಿದಾಯ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಪೀಠದಿಂದ ಆಯೋಜಿಸಿದ ಉಭಯ ಜಿಲ್ಲಾ ಮಟ್ಟದ ಕನಕದಾಸರ ಕೀರ್ತನಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕಾಲೇಜಿನ ಸಿಬ್ಬಂದಿ ರವಿದಾಸ ಇವರನ್ನು ಅಭಿನಂದಿಸಲಾಯಿತು ಹಾಗೂ ಮಂಗಳೂರಿನ ಮಣಿಪಾಲ ಸಂಸ್ಥೆಯಲ್ಲಿ ಕೆಲಸಕ್ಕೆ ನಿಯುಕ್ತಿಗೊಂಡ ಸಿಬ್ಬಂದಿ ಅಶೋಕ ಇವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.
ಶಿವಾನಂದ ಬಂಗೇರ ನಿರೂಪಿಸಿದ ಕಾರ್ಯಕ್ರಮದಲ್ಲಿ ಮೀರಾ ಸ್ವಾಗತಿಸಿ ಜಗದೀಶ ವಂದಿಸಿದರು.
