Share this news

 

 

 

 

ಕಾರ್ಕಳ ಅ,30: ಗಣೇಶೋತ್ಸವದ ಮೆರವಣಿಗೆಗೆ ಕಲ್ಲು ತೂರುವ, ಪೋಲಿಸ್ ಠಾಣೆಗೆ ಬೆಂಕಿ ಹಚ್ಚುವ ಜಿಹಾದಿ ಮನಸ್ಥಿತಿಯ ಮತೀಯ ಸಂಘಟನೆಗಳಿಗೆ ಬೆಂಬಲ ಕೊಟ್ಟು ರಾಷ್ಟ್ರೀಯ ಚಿಂತನೆಯ ಹಾಗೂ ನಿಸ್ವಾರ್ಥ ಮನಸ್ಸಿನಿಂದ ದೇಶಸೇವೆಯ ಕಂಕಣ ತೊಟ್ಟ ಆರೆಸೆಸ್ಸ್ ಸಂಘಟನೆಗೆ ವಿರೋಧ ಮಾಡುವುದು ಕಾಂಗ್ರೆಸ್ ಪಕ್ಷ ಮೂಲಭೂತ ಸಿದ್ಧಾಂತ. ಜಿಹಾದಿ ಮಾನಸಿಕತೆಯಲ್ಲಿ ಇರುವ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ದೇಶಪ್ರೇಮಿ ಸಂಘಟನೆ ಆರೆಸೆಸ್ಸ್ ಕುರಿತು ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತಾಂಧ ಜಿಹಾದಿಗಳು ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡು ಸಮಾಜದಲ್ಲಿ ಭಯಹುಟ್ಟಿಸುತ್ತಿದ್ದರೂ ಈ ಬಗ್ಗೆ ಮಾತನಾಡಲು ಧಮ್ ಇಲ್ಲದ ಕಾಂಗ್ರೆಸ್ಸಿಗರಿಗೆ ಆರೆಸ್ಸೆಸ್ ಕವಾಯತು ಲಾಠಿ ಹಿಂಸೆಗೆ ಪ್ರಚೋದಕವಾಗಿ ಕಂಡಿರುವುದು ದುರಾದೃಷ್ಟಕರ. ಭಕ್ತಿ ಆಧರಿಸುವ ಮತ್ತು ಶಕ್ತಿ ಆರಾಧಿಸುವ ದೇಶ ಭಾರತ. ಅದೇ ಆಧಾರದಲ್ಲಿ ಪ್ರತಿ ವ್ಯಕ್ತಿಯಲ್ಲಿ ದೇಶ ಭಕ್ತಿಯನ್ನು ಉದ್ದೀಪನಗೊಳಿಸುವ ಮತ್ತು ದೈಹಿಕ, ಮಾನಸಿಕ ಶಕ್ತಿ-ಸಾಮರ್ಥ್ಯವನ್ನು ಬೆಳೆಸುವ ಕಾರ್ಯದಲ್ಲಿ ಆರೆಸ್ಸೆಸ್ ಕಳೆದ 100 ವರ್ಷಗಳಿಂದ ತೊಡಗಿಸಿಕೊಂಡಿದೆ. ನಮ್ಮ ದೇವರು-ದೇವತೆಗಳ ಕೈಯಲ್ಲಿರುವ ಆಯುಧಗಳು ಶಕ್ತಿಯ ಸಂಕೇತ. ಶಿಷ್ಟರ ರಕ್ಷಣೆ,ದುಷ್ಟರ ದಮನದ ಸೂಚಕವೂ ಹೌದು. ಆ ಶಕ್ತಿ ಸಂಕೇತಗಳು ನಮ್ಮ ಆತ್ಮಶಕ್ತಿ ಬೆಳೆಸುವುದಕ್ಕೂ ಕಾರಣ ಆಗುತ್ತವೆ. ಇದೆಲ್ಲದರ ಸಂಜ್ಞೆ ಅಥವಾ ಸಂಕೇತ ನಮ್ಮ ರಕ್ಷಣೆಯೇ ಹೊರತು ಬೇರೆಯವರ ಮೇಲೆ ದಾಳಿ ಮಾಡುವ ಉದ್ದೇಶವಲ್ಲ. ಆರೆಸ್ಸೆಸ್ ಸ್ವಯಂಸೇವಕರು ಬಳಸುವ ಲಾಠಿ ಕೂಡ ಆತ್ಮಸ್ಥೈರ್ಯ ಹೆಚ್ಚಿಸುವ, ಆತ್ಮರಕ್ಷಣೆ ಮಾಡುವ ಕಲೆಯನ್ನು ಕಲಿಸುವ ಉದ್ದೇಶವೇ ಹೊರತು ದೊಂಬಿ ಮಾಡುವ ಉದ್ದೇಶದ್ದಲ್ಲ, ನೂರು ವರ್ಷದಲ್ಲಿ ಅಂತಹ ಒಂದೇ ಒಂದು ಉದಾಹರಣೆಯೂ ದೇಶದಲ್ಲಿ ಸಿಗುವುದಿಲ್ಲ. ಆದರೆ ಆರೆಸೆಸ್ಸ್ ಸಂಘಟನೆ ಸಮಾಜದ ಶಾಂತಿ ಕೆಡಿಸುತ್ತದೆ ಎಂದು ಆರೋಪ ಹೊರಿಸಿ ಗಣವೇಷಧಾರಿಗಳನ್ನು ಅತ್ಯಂತ ಹೀನಾಯವಾಗಿ ನಿಂದಿಸುವ ಕಾಂಗ್ರೆಸ್ ಮನಸ್ಥಿತಿ ಖಂಡನೀಯ.

ಸ್ವಾತAತ್ರ‍್ಯದ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷ ಆರಂಭಿಸಿದ್ದ ಸೇವಾದಳ ಸಂಘಟನೆ ಕೂಡ ಆರೆಸ್ಸೆಸ್ ಮಾದರಿಯಲ್ಲಿತ್ತು. ಆದರೆ ಇಂದು ಅದೇ ಸೇವಾ ದಳದ ಕತೆ ಏನಾಗಿದೆ ಎಂಬುದನ್ನು ಶುಭದ ರಾವ್ ಸಹಿತ ಕಾಂಗ್ರೆಸ್ ನಾಯಕರು ಮೊದಲು ಅರಿತು ಬಳಿಕ ಆರ್ ಎಸ್ ಎಸ್ ಬಗ್ಗೆ ಮಾತಾಡಲಿ. ಆರೆಸ್ಸೆಸ್ ದೂಷಿಸುವವರು, ನಿರ್ಭಂಧಿಸಲು ಹವಣಿಸುವವರು ಆ ಬಗ್ಗೆ ಯೋಚನೆ ಮಾಡುವುದು ಒಳಿತು ಎಂದು ನವೀನ್ ನಾಯಕ್ ಸಲಹೆ ನೀಡಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *