Share this news

ನವದೆಹಲಿ : ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಬಹು ಅಂಗಾಂಗ ವೈಫಲ್ಯದಿಂದ ಗುರುವಾರ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಯೆಚೂರಿ ಅವರ ನಿಧನದ ನಂತರ, ಅವರ ದೇಹವನ್ನು ಏಮ್ಸ್’ಗೆ ದಾನ ಮಾಡಲು ಕುಟುಂಬ ನಿರ್ಧರಿಸಿದೆ.
72 ವರ್ಷದ ಕಾಮ್ರೇಡ್ ನಾಯಕ ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಗುರುವಾರ ಮಧ್ಯಾಹ್ನ 3.05ಕ್ಕೆ ಯೆಚೂರಿ ನಿಧನರಾದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಅವರನ್ನು ಆಗಸ್ಟ್ 19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

 

 

 

 

    

                        

                          

                        

                       

Leave a Reply

Your email address will not be published. Required fields are marked *