ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯ ಆವಿರ್ಭವ – 2024 ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತವಾಗ್ಮಿ, ನಿರೂಪಕರಾದ ಎನ್ ಆರ್ ದಾಮೋದರ ಶರ್ಮ ಬಾರ್ಕೂರು ಮಾತನಾಡಿ, ಶಿಕ್ಷಣದ ಉದ್ದೇಶ ಸಂಸ್ಕಾರವನ್ನು ಗಳಿಸುವುದು ಮಾತಾ ಪಿತೃಗಳು ಹಾಗೂ ಕಲಿಸಿದ ಗುರುಗಳ ಮೇಲೆ, ವಿದ್ಯೆ ಕಲಿತ ಸಂಸ್ಥೆಯ ಮೇಲೆ ಸದಾ ಗೌರವ ಇರಿಸಿಕೊಳ್ಳಬೇಕು. ವಿದ್ಯಾರ್ಥಿಗಳೆಲ್ಲರೂ ಭವ್ಯ ಭಾರತದ ಸತ್ಪ್ರಜೆಗಳಾಗಿ ಬಾಳಬೇಕು. ಕಷ್ಟಪಟ್ಟು ಕಲಿತಾಗ ಅದಕ್ಕೆ ತಕ್ಕ ಫಲ ಸಿಗುತ್ತದೆ. ಆದ್ದರಿಂದ ಎಲ್ಲರೂ ವಿದ್ಯಾ ವಿನಯ ಸಂಪನ್ನ ರಾಗಬೇಕೆಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಮಿಲಾಗ್ರೀಸ್ ಚರ್ಚ್ ನ ಧರ್ಮಗುರುಗಳಾದ ರೆ. ಫಾದರ್ ಫರ್ಡಿನಾಂಡ್‌ಗೋನ್ಸಾಲ್ವೀಸ್ ಮಾತನಾಡುತ್ತಾ ಕಲಿಕೆಗೆ ಪೂರಕವಾದ ವಾತಾವರಣವಿರುವಾಗ ನಾವು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತಿ ಮುಖ್ಯವಾದದ್ದು ಆದ್ದರಿಂದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ತಾಳ್ಮೆ ಶಿಸ್ತಿನಿಂದ ಯಶಸ್ಸು ಪಡೆಯುವಂತಾಗಲಿ. ಬದ್ಧತೆಯಿಂದ ಕಾರ್ಯ ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ತ್ರಿಶಾ ಫೌಂಡೇಶನ್ ನ ಅಧ್ಯಕ್ಷರಾದ ಪ್ರಭಾಕರ್ ಭಂಡಾರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಕನಸುಗಳನ್ನು ನನಸು ಮಾಡಲು ಅವಿರತ ಶ್ರಮ ಇರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ನಾವು ಮುಂಚೂಣಿಯಲ್ಲಿ ರಬೇಕಾದರೆ ನಿರಂತರ ತರಬೇತಿ ಅವಶ್ಯಕ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಅಮೋಘ ಪ್ರಯತ್ನ ಮತ್ತು ಸಾಧನೆ ಆಗಲಿ ಎಂದು ಆಶಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ವಿಶೇಷತೆ, ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವಿಕೆ ಮತ್ತು ವ್ಯವಸ್ಥೆಗಳ ಕುರಿತು ತಿಳಿಸಿ, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಹಗಲಿರಳೂ ಶ್ರಮಿಸುತ್ತಿದೆ ಎಂದರು.