ಹೆಬ್ರಿ: ಕೆವೈಸಿ ಅಪ್ಲೋಡ್ ಎಂದು ಎಸ್‌ಎಂಎಸ್ ಕಳುಹಿಸಿ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿ ಗ್ರಾಹಕನಿಂದ ಒಟಿಪಿ ಪಡೆದು ಅಕೌಂಟ್‌ನಿAದ ಸಾವಿರಾರು ರೂ. ಡ್ರಾ ಮಾಡಿ ವಂಚನೆ ಮಾಡಿರುವ ಪ್ರಕರಣ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶೇಖರ ಎಂಬವರ ಇವರ ಮೊಬೈಲ್ ಗೆ ಕೆವೈಸಿ ಅಪ್‌ಲೋಡ್ ಎಸ್‌ಎಮ್‌ಎಸ್ ಬಂದಿದ್ದು ಅವರು ನವಂಬರ್.07 ರಂದು ಮೆಸೇಜ್ ನಲ್ಲಿದ್ದ ನಂಬರಿಗೆ ಕರೆ ಮಾಡಿದಾಗ ಕೆನರಾ ಬ್ಯಾಂಕ್‌ನವರು ಎಂದು ಹೇಳಿ ನಿಮ್ಮ ಕೆವೈಸಿ ಅಪ್‌ಡೇಟ್ ಆಗದೆ ಇದ್ದು ಅಕೌಂಟ್ ಬ್ಲಾಕ್ ಮಾಡುವುದಾಗಿ ಹೇಳಿ ಶೇಖರ ಅವರನ್ನು ನಂಬಿಸಿದ್ದರು. ಬಳಿಕ ಶೇಖರ ಅವರ ಅಕೌಂಟ್ ನಂಬರ್, ಹೆಸರು, ವಿಳಾಸ ಹಾಗೂ ಎಟಿಎಮ್ ಕಾರ್ಡ್ನ ಕೊನೆಯ ನಾಲ್ಕು ಪಡೆದು ಮಾಹಿತಿ ಅಪ್‌ಲೋಡ್ ಆದ ಬಳಿಕ ಓಟಿಪಿ ಬರುವುದಾಗಿ ತಿಳಿಸಿದ್ದರು.
ಸ್ವಲ್ಪ ಸಮಯದ ಬಳಿಕ ಕರೆ ಮಾಡಿ ಓಟಿಪಿ ಕೇಳಿ ಪಡೆದುಕೊಂಡಿದ್ದು ಅಲ್ಲದೆ 15 ನಿಮಿಷಗಳ ನಂತರ ಮತ್ತೆ ಕರೆ ಮಾಡಿ ಮಹಿಳೆಯೊಬ್ಬರು ಕನ್ನಡ ಬಾಷೆಯಲ್ಲಿ ಮಾತನಾಡಿದ್ದು, ಕೆನರಾ ಬ್ಯಾಂಕ್‌ನಿAದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಅಕೌಂಟ್‌ನಿAದ ರೂ. 51,908 ಡ್ರಾ ಆಗಿದೆ, ನೀವು 1930 ಕರೆ ಮಾಡುವಂತೆ ತಿಳಿಸಿದ್ದರು. ಅನುಮಾನಗೊಂಡ ಶೇಖರ ಅವರು ಬ್ಯಾಂಕ್‌ಗೆ ತೆರಳಿ ಈ ಬಗ್ಗೆ ವಿಚಾರಿಸಿದಾಗ ಅವರ ಖಾತೆಯಿಂದ 51,908 ಡ್ರಾ ಆಗಿರುವುದು ತಿಳಿದು ಬಂದಿದ್ದು, ಅಪರಿಚಿತ ವ್ಯಕ್ತಿ ಮೋಸ ಮಾಡಿ ಅಕ್ರಮವಾಗಿ ಹಣ ಡ್ರಾ ಮಾಡಿರುವುದು ತಿಳಿದಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.