ಬೆಂಗಳೂರು : ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಒಟ್ಟು5 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿಗೆ ಭಾರೀ ಹೊಡೆತ ನೀಡಿದ್ದಾರೆ.
ಮತದಾನ ನಂತರ ಮಾತನಾಡಿದ ಎಸ್ ಟಿ ಸೋಮಶೇಖರ್, ನನಗೆ ಭರವಸೆ ನೀಡಿದವರೆಗೆ ನಾನು ಮತ ಹಾಕಿದ್ದೇನೆ.ನಾನು ಆತ್ಮಸಾಕ್ಷಿಯ ಮತ ಚಲಾವಣೆ ಮಾಡಿದ್ದೇನೆ. ಅನುದಾನದ ಭರವಸೆ ನೀಡಿದವರಿಗೆ ನಾನು ಮತ ಹಾಕಿದ್ದೇನೆ ಎಂದು ಅವರು ತಿಳಿಸಿದರು. ಮತದಾನಕ್ಕೂ ಮುನ್ನ ಅನುದಾನದ ಭರವಸೆ ನೀಡುವವರಿಗೆ ಬೆಂಬಲ ನೀಡುತ್ತೇನೆ. ಅನುದಾನ ಕೊಟ್ಟವರಿಗೆ ಮೊದಲ ಪ್ರಾಶಸ್ತದ ಮತ ಹಾಕುತ್ತೇನೆ. ಎಂದು ವಿಧಾನಸೌಧದಲ್ಲಿ ಎಸ್ ಟಿ ಸೋಮಶೇಖರ್ ತಿಳಿಸಿದ್ದರು. ಏನಾದರೂ ಆಗಲಿ ಆತ್ಮಸಾಕ್ಷಿಗೆ ಮತ ಹಾಕುತ್ತೇನೆ ನಾನು ಯಾವುದೇ ನಾಯಕರನ್ನು ಭೇಟಿಯಾಗುವುದಿಲ್ಲ ಎಂಬ ಹೇಳಿಕೆ ಹೇಳಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಹಾಗೂ ಸಂಘಟನೆಯ ವಿಚಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ