Share this news

 

 

ನವದೆಹಲಿ, ನ. 27: ದೆಹಲಿಯಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು,ಹಲವು ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಫರೀದಾಬಾದ್​ನಲ್ಲಿ ಉಗ್ರ ಡಾ.ಮುಜಮ್ಮಿಲ್​ನ ಎರಡು​ ಅಡಗುತಾಣಗಳು ಪತ್ತೆಯಾಗಿದ್ದು, ಹರಿಯಾಣದ ಫರಿದಾಬಾದ್ ಬಳಿಯ ಖೋರಿ ಜಮಾಲ್‌ಪುರ ಗ್ರಾಮದಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದ ಎನ್ನಲಾಗಿದೆ. ಆತನನ್ನು ಆ ಗ್ರಾಮಕ್ಕೆ ಎನ್​ಐಎ ಕರೆದೊಯ್ದಾಗ ಅಲ್ಲಿನ ನಿವಾಸಿಗಳು ಆತನನ್ನು ನೋಡಿರುವುದಾಗಿ ಹಾಗೂ ಈ ಮನೆಯಲ್ಲಿ ಬಾಡಿಗೆಗೆ ಇದ್ದನೆಂದು ದೃಢಪಡಿಸಿದ್ದಾರೆ.

ಖೋರಿ ಜಮಾಲ್‌ಪುರದ ಮಾಜಿ ಸರಪಂಚ್‌ನಿಂದ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದ ಆತ, ಆ ಪ್ರದೇಶದಲ್ಲಿ ತನ್ನ ವಾಸ್ತವ್ಯ ಮತ್ತು ಚಲನವಲನಗಳ ಬಗ್ಗೆ ಯಾರಿಗೂ ಅನುಮಾನ ಬರಬಾರದೆಂದು ತನ್ನನ್ನು ಕಾಶ್ಮೀರಿ ಹಣ್ಣಿನ ವ್ಯಾಪಾರಿ ಎಂದು ಹೇಳಿಕೊಂಡಿದ್ದ. ಮುಜಮ್ಮಿಲ್ ಖೋರಿ ಜಮಾಲ್ಪುರದ ಮನೆಗೆ ಹಲವಾರು ಬಾರಿ ಭೇಟಿ ನೀಡಿದ್ದಾಗಿ ನಿವಾಸಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ, ಆಗಾಗ ಆತನ ಜತೆ ಸಹಚರ ಶೈನ್ ಸಯೀದ್ ಕೂಡ ಇದ್ದ. ಮುಜಮ್ಮಿಲ್ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಖರೀದಿಸಿ ಇಟ್ಟಿದ್ದ ಸ್ಥಳಗಳನ್ನು ತನಿಖಾಧಿಕಾರಿಗಳು ಗುರುತಿಸಿಸಿದ್ದಾರೆ. ಬಾಡಿಗೆ ಮನೆ ಮಾತ್ರವಲ್ಲದೆ, ಹೊಲದ ನಡುವೆ ಮತ್ತೊಂದು ಕೋಣೆಯೂ ಕೂಡ ಇತ್ತು ಎಂಬುದು ತಿಳಿದುಬಂದಿದೆ. ಬಾಂಬ್ ಸ್ಫೋಟಗಳಲ್ಲಿ ವಿದೇಶಿ ನಿರ್ವಾಹಕನೊಬ್ಬ ಅವರಿಗೆ ತರಬೇತಿ ನೀಡಿದ್ದಾನೆ ಮತ್ತು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನುವ ಮಾಹಿತಿಯೂ ಲಭಿಸಿದೆ.

ಅಕ್ಟೋಬರ್ 30 ರಂದು ಬಂಧನಕ್ಕೊಳಗಾಗಿದ್ದ ಮುಜಮ್ಮಿಲ್ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಶದಲ್ಲಿದ್ದ. ನವೆಂಬರ್ 10 ರಂದು ದೆಹಲಿ ಸ್ಫೋಟ ದ ನಂತರ ತನಿಖೆ ತೀವೃಗೊಂಡು ಆತನನ್ನು ದೆಹಲಿಗೆ ಕರೆತರಲಾಯಿತು. ಎರಡು ವರ್ಷಗಳ ಕಾಲ, ಮುಜಮ್ಮಿಲ್, ಡಾ. ಉಮರ್ ಉನ್ ನಬಿ ಮತ್ತು ಡಾ. ಶಾಹೀನ್ ಶಹೀದ್ ಅವರೊಂದಿಗೆ ಕ್ಯಾಂಪಸ್​ನ ನಾಲ್ಕು ಗೋಡೆಗಳ ನಡುವೆ ದಾಳಿಯನ್ನು ಯೋಜಿಸಿದ್ದರು. ವಿಶ್ವವಿದ್ಯಾಲಯದ ಮತ್ತೊಬ್ಬ ವೈದ್ಯ ಕೂಡ ಭಾಗಿಯಾಗಿದ್ದಾನೆ. ಫರಿದಾಬಾದ್ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆಗಳನ್ನು ಚುರುಕುಗೊಳಿಸಿದ್ದಾರೆ ಮತ್ತು ನಿವಾಸಿಗಳು ಜಾಗರೂಕರಾಗಿರಲು ಸೂಚನೆ ನೀಡಿದ್ದಾರೆ.

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *