
ಮಂಗಳೂರು,ನವೆಂಬರ್ 20: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾರೆಂದು ಅಪಪ್ರಚಾರ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎಸ್ಐಟಿ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದು, ಇಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆಯಿದೆ.
ಎಸ್ಐಟಿ ಮುಖ್ಯ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಮಹೇಶ್ ಶೆಟ್ಟಿ ತಿಮರೋಡಿ, ಮಾಸ್ಕ್ ಮ್ಯಾನ್ ಚಿನ್ನಯ್ಯ , ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಸೇರಿ 6 ಮಂದಿಯ ವಿರುದ್ಧ ಒಟ್ಟು 4 ಸಾವಿರ ಪುಟಗಳ
ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.
ಈ ನಡುವೆ ಸಾವಿರಾರು ಶವ ಹೂತು ಹಾಕಿದ್ದೇನೆಂದು ಬುರುಡೆ ಬಿಟ್ಟಿದ್ದ ಚಿನ್ನಯ್ಯನನ್ನು ಬಂಧಿಸಲಾಗಿದ್ದು ಉಳಿದವರ ವಿಚಾರಣೆ ನಡೆಸಲಾಗಿದೆ. ಷಡ್ಯಂತ್ರ ರೂಪಿಸಿ , ಅಪಪ್ರಚಾರ ಮಾಡಿರುವ ಬಗ್ಗೆ , ತಲೆಬುರುಡೆ ತಂದಿದ್ದ ಸಿ.ಎನ್.ಚಿನ್ನಯ್ಯ, ಅದನ್ನು ತಂದುಕೊಟ್ಟವರ ಬಗ್ಗೆ ಸಂಪೂರ್ಣ ವಿವರ ಉಲ್ಲೇಖ ಮಾಡಲಾಗಿದೆ.
ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ತಾನು 100 ಕ್ಕೂ ಹೆಚ್ಚು ಶವಗಳನ್ನು ಹೂತಿರುವುದಾಗಿ ಹೇಳಿದ್ದ. ಈ ಕುರಿತು ಸಾಕಷ್ಟು ಕಾರ್ಯಾಚರಣೆಗಳೂ ನಡೆದಿತ್ತು. ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವೆಂದು ಆಕ್ರೋಶಗಳು ಸಹ ವ್ಯಕ್ತವಾಗಿದ್ದವು. ಇನ್ನು ಈ ಸಂಬಂಧ ಬುರುಡೆ ತಂದಿದ್ದ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಬಳಿಕ ಅರೆಸ್ಟ್ ಮಾಡಿದ್ದರು.

