ಹೆಬ್ರಿ: ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ವತಿಯಿಂದ ಅಶಕ್ತ, ಅನಾರೋಗ್ಯ ಪೀಡಿತರಿಗೆ ಸಹಾಯಧನ ನೀಡುವ ನಿಟ್ಟಿನಲ್ಲಿ “ಅಷ್ಟೆಮಿ” ನಾಟಕ ಪ್ರದರ್ಶನ ಜರುಗಿತು.
ಈ ನಾಟಕ ಪ್ರದರ್ಶನದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹಾಗೂ ವೀಲ್ ಚೇರ್ ವಿತರಿಸಲಾಯಿತು. ಟ್ರಸ್ಟ್ ನ ಗೌರವಾಧ್ಯಕ್ಷ ಡಾ . ಸುದರ್ಶನ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕ ವಿ.ಸುನಿಲ್ ಕುಮಾರ್, ಅಯ್ಯಪ್ಪ ಸ್ವಾಮಿ ಮಂದಿರ ಜೀರ್ಣೋದ್ದಾರ ಸಮಿತಿ , ನೆಹರು ನಗರ ಪಿಂಪ್ರಿ ಪುಣೆ ಇದರ ಅಧ್ಯಕ್ಷ ಜಯಾನಂದ ಶೆಟ್ಟಿ, ಮುನಿಯಾಲು ಸಂಜೀವಿನಿ ಗೋಧಾಮದ ರಾಮಕೃಷ್ಣ ಆಚಾರ್, ಉದ್ಯಮಿ ದಿನೇಶ್ ಪೈ, ಕಾಡುಹೊಳೆ ಜಂಗಮೇಶ್ವರ ಮಠದ ಅರ್ಚಕ ರಾಘವೇಂದ್ರ ಭಟ್, ಮುದ್ರಾಡಿಯ ಹಿರಿಯ ವೈದ್ಯ ಎಂ ಎಸ್ ರಾವ್, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಶೆಟ್ಟಿ, ಮುದ್ರಾಡಿ ಗ್ರಾ.ಪಂ ಅಧ್ಯಕ್ಷೆ ವಸಂತಿ ಪೂಜಾರಿ, ಕೃಷ್ಣಕಾಂತ್ ನಾಯಕ್ ಮುನಿಯಾಲು, ವರಂಗ ಪಂಚಾಯತ್ ಅಧ್ಯಕ್ಷ ಸಂತೋಷ ಅಮೀನ್, ಹಿಂದೂ ಹೆಲ್ಪ್ ಲೈನ್ ಅಧ್ಯಕ್ಷ ರಾಜೇಶ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.
ಸುಹಾಸ್ ಶೆಟ್ಟಿ ಸ್ವಾಗತಿಸಿ, ರಾಮಚಂದ್ರ ನಾಯಕ್ ವಂದಿಸಿದರು.