
ಮಂಗಳೂರು, ಜ.13:ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ದ.ಕ ಮಂಗಳೂರು ಇವರ ಆಶ್ರಯದಲ್ಲಿ, ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಸಾಮರ್ಥ್ಯದ ಮಕ್ಕಳ ಕ್ರೀಡಾಕೂಟದಲ್ಲಿ ಎಸ್.ಡಿ.ಎಂ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿನ ಪ್ರ್ರೌಢಶಾಲಾ ವಿಭಾಗದ ತಂಡ ಪ್ರಶಸ್ತಿ ಹಾಗೂ 15 ವೈಯಕ್ತಿಕ ಪ್ರಶಸ್ತಿ ಗಳಿಸಿದ್ದು, ಎನ್ ನಿಶಾನ್,ಲವಿತ್ ಪೂಜಾರಿ,ಮಾನ್ವಿ ಪೂಜಾರಿ,ಫಾತಿಮಾನಿಶ್ಮ ಪ್ರಥಮ ಸ್ಥಾನ ಗಳಿಸಿ, ಬೆಂಗಳೂರು ವಿಭಾಗದ ರಾಮನಗರ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ತರಬೇತಿ ನೀಡುತ್ತಿದ್ದಾರೆ. ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು, ಮುಖ್ಯೋಪಾಧ್ಯಾಯರಾದ ರಮೇಶ್ ಆಚಾರ್ಯ, ವಿಠಲ ವಾಗ್ಮರೆ,ಶಿಕ್ಷಕಿ ಹರಿಣಾಕ್ಷಿ ಹಾರೈಸಿದರು.


.
.
